Mittanahalli, Sidlaghatta : ಶಿಡ್ಲಘಟ್ಟ ತಲ್ಲೂಕಿನ ಮಿತ್ತನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಐದು ವರ್ಷಗಳ ಆಡಳಿತ ಮಂಡಳಿಗೆ ನಿರ್ದೇಶಕರುಗಳ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಯಿತು.
ಸಾಮಾನ್ಯ ಸ್ಥಾನದಿಂದ ರಾಮಿರೆಡ್ಡಿ.ಪಿ, ಮುನಿಯಪ್ಪ.ಪಿ, ರಾಮಕೃಷ್ಣಪ್ಪ.ಡಿ, ಆಂಜಿನಮ್ಮ, ಚಂದ್ರಪ್ಪ.ಆರ್, ರಾಧಮ್ಮ, ದೇವರಾಜು.ಎಂ, ಹಿಂದುಳಿದ ವರ್ಗ ಬಿ ಸ್ಥಾನದಿಂದ ಮುನಿಶಾಮಪ್ಪ, ಚುನಾಯಿತರಾಗಿದ್ದಾರೆ.
ಹಿಂದುಳಿದ ವರ್ಗ ಎ ಸ್ಥಾನದಿಂದ ಲಕ್ಷ್ಮಿನಾರಾಯಣ.ಎಂ.ಎಸ್, ಪರಿಶಿಷ್ಠ ಜಾತಿ ಮೀಸಲು ಸ್ಥಾನದಿಂದ ಮುನಿರಾಜು.ಬಿ, ಮಹಿಳಾ ಮೀಸಲು ಸ್ಥಾನದಿಂದ ರತ್ನಮ್ಮ ಹಾಗು ಭಾಗ್ಯಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 13 ನಿರ್ದೇಶಕರುಗಳ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆಯಲ್ಲಿ ೦೮ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿದ್ದು ನಾಲ್ಕು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ.
ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಕ್ಕೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಆ ಸ್ಥಾನ ಖಾಲಿ ಉಳಿದಿದೆ. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ದಿ ಅಧಿಕಾರಿ ಎಂ.ಮಂಜುನಾಥ ಕರ್ತವ್ಯ ನಿರ್ವಹಿಸಿದರು.