Melur, Sidlaghatta : ಕನ್ನಡ ನಾಡು, ನುಡಿಯ ರಕ್ಷಣೆ ಹಾಗೂ ಗಡಿಭಾಗಗಳ ರಕ್ಷಣೆ ಪ್ರತಿಯೊಬ್ಬ ಯುವಕರ ಆದ್ಯ ಕರ್ತವ್ಯವಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಎ.ಉಮೇಶ್ ಹೇಳಿದರು.
ತಾಲ್ಲೂಕಿನ ಮೇಲೂರಿನ ಚಂಗಲಾಯರೆಡ್ಡಿ ವೃತ್ತದಲ್ಲಿ ಬುಧವಾರ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದ ಗಡಿ, ನೆಲ, ಜಲ, ಭಾಷೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿಬೆಳೆಸುವಂತಹ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕರ ಮೇಲಿದೆ. ಅದರಲ್ಲೂ ವಿಶೇಷವಾಗಿ ಯುವಜನತೆ ನಾಡಿನ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಕೆಲಸ ಮಾಡಬೇಕಾಗಿದೆ ಎಂದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಗ್ರಾಮ ಪಂಚಾಯಿತಿ ಕಾರ್ಯಾಲಯ, ಸರ್ಕಾರಿ ಮಾದರಿ ಪ್ರೌಢಶಾಲೆ ಹಾಗು ಗ್ರಾಮದ ಚಂಗಲರಾಯರೆಡ್ಡಿ ವೃತ್ತದಲ್ಲಿ ಧ್ವಜಾರೋಹಣ ಹಾಗು ಭುವನೇಶ್ವರಿ ಪಟಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಗ್ರಾಮದ ಸಂತೆ ಬೀದಿಯಿಂದ ಹೋಗುವ ಸುಮಾರು 300 ಮನೆಗಳಿರುವ ಬಡಾವಣೆಗೆ ಬಸವೇಶ್ವರ ಬಡಾವಣೆ ಎಂದು ನಾಮಕರಣ ಮಾಡಿರುವ ನಾಮಫಲಕದ ಉದ್ಘಾಟನೆಯನ್ನು ಶಾಸಕ ಬಿ.ಎನ್.ರವಿಕುಮಾರ್ ನೆರವೇರಿಸಿದರು.
ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಎಸ್.ಆರ್.ಶ್ರೀನಿವಾಸಮೂರ್ತಿ, ಗ್ರಾ.ಪಂ ಮಾಜಿ ಅಧ್ಯಕ್ಷ ಆರ್.ಎ.ಉಮೇಶ್, ಎಂ.ಕೆ.ರವಿಪ್ರಸಾದ್, ಎಂ.ಶ್ರೀನಿವಾಸ್, ವೈದಿಕ ಶಿವರಾಜ್, ಮಂಜುನಾಥ್, ಪೋಸ್ಟ್ ರಾಮಾಂಜಿನಪ್ಪ, ಅಶ್ವತ್ಥಪ್ಪ, ರಮೇಶ್, ಕುಮಾರ್, ಎಂ.ಜೆ.ಶ್ರೀನಿವಾಸ್, ಬಾಲಾಜಿ, ಎಂ.ಆರ್.ಶ್ರೀನಿವಾಸ್, ಪ್ರಕಾಶ್, ಮುನಿರಾಜು, ಸುದರ್ಶನ್, ಸುಧೀರ್, ಆನಂದ, ಎಂ.ಆರ್.ಸುರೇಶ್, ವಿಶಿ, ಸುರೇಶ್‌ರಾಜು, ಶ್ರೀನಿವಾಸಮೂರ್ತಿ(ಪುಲಿ) ಹಾಜರಿದ್ದರು.