Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ವಿಘ್ನ ನಿವಾರಕ ವಿನಾಯಕನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನಾನಾ ರೂಪದ ವಿನಾಯಕನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಭಕ್ತರು ಗಣಪತಿಗೆ ನಮಿಸಿ ಸಂಭ್ರಮಿಸಿದರು.
ನಗರದ ವಿವಿಧ ಬಡಾವಣೆಗಳು ಹಾಗೂ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ವಿನಾಯಕನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಮಹಾಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ರಾತ್ರಿ ಪೂರಾ ವಿನಾಯಕನನ್ನು ಜಪಿಸುವ ಹಾಡುಗಳು, ಕೀರ್ತನೆಗಳನ್ನು ಹಾಕಲಾಗಿತ್ತು. ವಿದ್ಯುತ್ ದೀಪದ ಅಲಂಕಾರ ಗಮನ ಸೆಳೆಯಿತು.
ವಿನಾಯಕನ ಭಕ್ತರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ಕೈ ಮುಗಿದು ಕಷ್ಟಗಳನ್ನು ನಿವಾರಿಸಿ ಸುಖ ಸಂತೋಷ ನೆಮ್ಮದಿಯನ್ನು ಕರುಣಿಸುವಂತೆ ಕೈ ಮುಗಿದು ನಮಿಸಿದರು.
ತಾಲ್ಲೂಕಿನ ಮೇಲೂರಿನಲ್ಲಿ ವಿನಾಯಕ ಗೆಳೆಯರ ಬಳಗ ಮತ್ತು ಕರ್ನಾಟಕರತ್ನ ಪುನೀತ್ ರಾಜಕುಮಾರ್ ಬಳಗದ ವತಿಯಿಂದ, ಚೆಂಗಲ್ ರಾಯರೆಡ್ಡಿವೃತ್ತದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಸಂಜೆ ಶ್ರೀಗಂಗಾದೇವಿಅಮ್ಮ, ಚೌಡೇಶ್ವರಿ ಅಮ್ಮ ಮತ್ತು ಗಣೇಶಮೂರ್ತಿಗಳೊಂದಿಗೆ ಉತ್ಸವ ಮಾಡಿ ಗಣೇಶನನ್ನು ವಿಸರ್ಜನೆ ಮಾಡಲಾಯಿತು.
ಮೇಲೂರಿನ ಮಂಜುನಾಥ್, ದನು, ಕುಶಾಲ್, ಕರಗದ ಪೂಜಾರಿ ಅಭಿಲಾಶ್, ಧರ್ಮೇಂದ್ರ, ಅಂಬರೀಷ್, ಹನುಮಂತಪ್ಪ, ಕರಗದ ಪೂಜಾರಿ ಗಣೇಶ, ಗಗನ್, ಮಹೇಂದ್ರ, ಪುನೀತ್, ಚರಣ್, ದೀಪು ಹಾಜರಿದ್ದರು.