ಮೇಲೂರಿನ ಓಂಕಾರ್ ಚಾಲುಕ್ಯ ಯುವಕ ಸಂಘದಿಂದ ದಿವಂಗತ ಸುಮಂತ್ ಮತ್ತು ಅಂಬರೀಷ್ ಜ್ಞಾಪಕಾರ್ಥ ಈಚೆಗೆ ನಾಲ್ಕನೇ ವರ್ಷದ ಬಿ.ಎನ್.ಆರ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ನಡೆಯಿತು.
ವಿಜೇತರಾದ ತರಬಳ್ಳಿ ತಂಡಕ್ಕೆ 15 ಸಾವಿರ ರೂ ಮತ್ತು ಟ್ರೋಫಿ ನೀಡಿದರೆ, ದ್ವಿತೀಯ ಸ್ಥಾನ ಪಡೆದ ಓಂಕಾರ್ ಚಾಲುಕ್ಯ ಯುವಕ ಸಂಘಕ್ಕೆ 10 ಸಾವಿರ ರೂ ಮತ್ತು ಟ್ರೋಫಿಯನ್ನು ನೀಡಲಾಯಿತು.
ಮೇಲೂರು ಗ್ರಾಮಪಂಚಾಯಿತಿ ಅಧ್ಯಕ್ಷ ಉಮೇಶ್, ಸದಸ್ಯರಾದ ಎಂ.ಜೆ.ಶ್ರೀನಿವಾಸ್, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಧರ್ಮೇಂದ್ರ ಹಾಜರಿದ್ದರು.