ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಕೋವಿಡ್ ವಾರಿಯರ್ಗಳ ನೆರವಿಗೆ ನಿಂತ ಶಿಡ್ಲಘಟ್ಟದ ಜೆಡಿಎಸ್ ಕಾರ್ಯಕರ್ತರ ಪಕ್ಷಾತೀತ ಹಾಗೂ ಸೇವಾ ಮನೋಭಾವದ ನಡೆ ಅಭಿನಂದನೀಯ ಎಂದು ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ತಿಳಿಸಿದರು.
ಗೂಗಲ್ ಮೀಟ್ ಆನ್ಲೈನ್ ಮೂಲಕ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಅವರು ಮಾತನಾಡಿದರು.
ತಾಲ್ಲೂಕಿನ ಪ್ರತಿಯೊಂದು ಗ್ರಾಮದಲ್ಲೂ ಕ್ರಿಮಿನಾಶಕ ಸಿಂಪಡನೆ ಮಾಡಿರುವುದಾಗಲೀ, ಕೋವಿಡ್ ಮುಂಚೂಣಿ ಸೇವಾಕರ್ತರಿಗೆ ಪ್ರೋತ್ಸಾಹಕವಾಗಿ ದಿನಸಿ ಕಿಟ್ ನೀಡುವುದಾಗಲೀ, ಅಗತ್ಯ ಔಷಧಿ, ಆಮ್ಲಜನಕ ಸಾಂದ್ರತೆಗಳನ್ನು ಆಸ್ಪತ್ರೆಗ್ ನೀಡುವುದಾಗಲೀ, ಸೋಂಕಿತರಿರುವ ಕೋವಿಡ್ ಕೇರ್ ಸೆಂಟರಿಗೆ ಹಣ್ಣು, ಆಯುರ್ವೇದಿಕ್ ಹಾಲು, ಆಹಾರ ನೀಡಿ ಧೈರ್ಯ ತುಂಬುವುದಾಗಲೀ, ಬಡವರಿಗೆ ದಿನಸಿ ನೀಡುವುದಾಗಲೀ ಮಾಡುವ ಮೂಲಕ ಜೆಡಿಎಸ್ ಕಾರ್ಯಕರ್ತರು ಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ. ಸಮಾಜಮುಖಿ ಕೆಲಸಗಳನ್ನು ಮಾಡುತ್ತಲೇ ವೈದ್ಯರು ಹೇಳಿರುವ ಮಾಹಿತಿಯನ್ನು ಸಹ ಜನರಿಗೆ ತಲುಪಿಸುವ ಕಾರ್ಯ ಕೂಡ ನಡೆದಿದೆ. ಕೇವಲ ಚುನಾವಣೆ ಹತ್ತಿರ ಬಂದಾಗ ಜನಸೇವೆ ಮಾಡುವುದಲ್ಲ, ಈ ರೀತಿಯ ಸಂಕಷ್ಟದ ಸಮಯದಲ್ಲಿ ಹಾಗೂ ನಿರಂತರವಾಗಿ ಜನರ ಸೇವೆಯಲ್ಲಿ ತೊಡಗಿರುವವರೇ ನಿಜವಾದ ಕಾರ್ಯಕರ್ತರು ಎಂದು ಹೇಳಿದರು.
ಕೋವಿಡ್ ನಿರ್ವಹಣೆಯಲ್ಲಿ ಫ್ರಂಟ್ಲೈನ್ ಕೆಲಸಗಾರರದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಜಲಗಾರರು, ವೈದ್ಯರು, ವೈದ್ಯಕೀಯ ಸಿಬ್ಬಂದಿ, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪಂಚಾಯಿತಿ ಪಿಡಿಓ ಅಧಿಕಾರಿಗಳು, ಪಂಚಾಯಿತಿ ಸಿಬ್ಬಂದಿಗಳು, ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳು,ಸಮಾಜಸೇವಕರು,ಇವರಿಗೆಲ್ಲಾ ಕೃತಜ್ಞತೆ ಸಲ್ಲಿಸುವುದ್ ನಮ್ಮೆಲ್ಲರ ಕರ್ತವ್ಯ. ಕಾರ್ಯಕರ್ತರು ಇನಷ್ಟು ಉತ್ಸಾಹದಿಂದ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಬೇಕು ಎಂದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi