News

ಬೃಹತ್ ಗಾತ್ರದ ಆಲೀಕಲ್ಲು ಮಳೆ

massive hailstorm sidlaghatta

ಗುರುವಾರ ಸಂಜೆ ದಿಡೀರನೆ ಸುರಿದ ಬೃಹದಾಕಾರದ ಆಲೀಕಲ್ಲು ಮಳೆಯಿಂದ ತಾಲ್ಲೂಕಿನ ಕೆಲವೆಡೆ ರೈತರಿಗೆ ಅಪಾರ ನಷ್ಟ ಉಂಟಾಗಿದೆ.

ತಾಲ್ಲೂಕಿನ ಬಶೆಟ್ಟಹಳ್ಳಿ ವ್ಯಾಪ್ತಿಯ ಅಮ್ಮಗಾರಹಳ್ಳಿ, ಗೌಡನಹಳ್ಳಿ ಸುತ್ತಮುತ್ತಲಿನ ರೈತರ ಪಾಲಿಹೌಸ್‌ಗಳು ಹಾಳಾಗಿದ್ದು, ಬಹುತೇಕ ದ್ರಾಕ್ಷಿ, ಟಮೋಟ ತೋಟಗಳು ಬೃಹತ್ ಆಲಿಕಲ್ಲು ಮಳೆಯಿಂದಾಗಿ ನೆಲಕಚ್ಚಿವೆ.

ಹಿಂದೆಂದೂ ಕಂಡರಿಯದಂತಹ ಸುಮಾರು 2 ಅಡಿ ಸುತ್ತಳತೆಯ ಬೃಹತ್ ಆಲಿಕಲ್ಲು ‘ಬಂಡೆ’ಗಳು ದಿಢೀರನೆ ಆಕಾಶದಿಂದ ಬೀಳತೊಡಗಿದವು. ನೋಡನೋಡುತ್ತಿದ್ದಂತೆ ಬೆಳೆಗೆ ಕಟ್ಟಿದ್ದ ಪಾಲಿಹೌಸ್‌ಗಳು ನೆಲಕಚ್ಚ್ಚಿದವು. ಪಾಲಿಹೌಸ್ ಹಾಳಾಗುವ ಜೊತೆಗೆ ದ್ರಾಕ್ಷಿ ಸೇರಿದಂತೆ ರೈತರು ಬೆಳೆದ ವಿವಿಧ ಬೆಳೆಗಳು ಹಾಳಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಗೌಡನಹಳ್ಳಿ ಸಮೀಪದ ಎನ್.ಬಚ್ಚೇಗೌಡ ಅವರಿಗೆ ಸೇರಿರುವ 6 ಎಕರೆ ದ್ರಾಕ್ಷಿ ತೋಟ, ಒಂದು ಎಕರೆ ಟೊಮೇಟೋ ಮತ್ತು ಒಂದು ಎಕರೆ ಕೋಸು ಬೆಳೆಗಳು ಕೊನೆಯ ಹಂತದಲ್ಲಿದ್ದವು. ಮಾರಾಟದ ಹಂತದಲ್ಲಿದ್ದ ಈ ಬೆಳೆಗಳು ಭಾರೀಗಾತ್ರದ ಆಲೀಕಲ್ಲು ಮಳೆಯಿಂದಾಗಿ ನಾಶವಾಗಿದ್ದು, ಸುಮಾರು 27 ಲಕ್ಷ ರೂಗಳಷ್ಟು ನಷ್ಟ ಉಂಟಾಗಿರುವುದಾಗಿ ಅವರು ತಿಳಿಸಿದ್ದಾರೆ.

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Sidlaghatta untimely Rain Crop Loss

News

ಗುಡುಗು, ಸಿಡಿಲು ಮತ್ತು ಗಾಳಿಯೊಂದಿಗೆ ಮಳೆ: ಹಲವು ಬೆಳೆಗಳಿಗೆ ಹಾನಿ

Sidlaghatta : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಗುಡುಗು, ಸಿಡಿಲು ಮತ್ತು ಗಾಳಿಯೊಂದಿಗೆ ಮಳೆಯ ಪರಿಣಾಮವಾಗಿ ರೈತರ ಹಲವಾರು ಬೆಳೆಗಳಿಗೆ ಭಾರೀ ಹಾನಿಯಾಗಿದೆ.…

Share
Sidlaghatta taluk Sadali Hosakere Lake full

News

ತುಂಬಿ ಹರಿದ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಕೆರೆ

Sadali, Sidlaghatta, Chikkaballapur : ಕಳೆದ ಕೆಲವು ದಿನಗಳಿಂದ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಾದಲಿ ಹೊಸಕೆರೆ ತುಂಬಿ ಹರಿಯುತ್ತಿದೆ. ಉತ್ತರ ಪೆನ್ನಾರ್ ನದಿ…

Share

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Sidlaghatta Ramasamudra Lake Full Transportation to villages Cut

News

ಕೋಡಿ ಹರಿದ ರಾಮಸಮುದ್ರ ಕೆರೆ – ಹಳ್ಳಿಗಳ ರಸ್ತೆ ಸಂಪರ್ಕ ಕಡಿತ!

https://youtu.be/cXF1C13JFrE S Devaganahalli, Sidlaghatta, chikkaballapur : ಶಿಡ್ಲಘಟ್ಟ ತಾಲ್ಲೂಕಿನ ಎಸ್.ದೇವಗಾನಹಳ್ಳಿಯ ಪ್ರಸಿದ್ಧ ರಾಮಸಮುದ್ರ ಕೆರೆ ಬುಧವಾರ ಕೋಡಿ ಹರಿದು ಉಕ್ಕಿ ಹರಿಯಿತು. ಈ…

Share
Share
error: Content is protected !!