ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುವಲ್ಲಿ ಪದೇ ಪದೇ ಎಡವುತ್ತಿದೆ. ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ಜನರ ಪ್ರಾಣರಕ್ಷಣೆಗೆ ಮುಂದಾಗಬೇಕು ಎಂದು ಜೆ.ಡಿ.ಎಸ್. ಮುಖಂಡ ಬಿ.ಎನ್.ರವಿಕುಮಾರ್ ಆಗ್ರಹಿಸಿದರು.
ತಾಲ್ಲೂಕಿನ ಮೇಲೂರು ಆರೋಗ್ಯ ಕೇಂದ್ರದಲ್ಲಿ ಗ್ರಾಮದ ಹಿರಿಯರಿಗೆ ಲಸಿಕೆ ಹಾಕಿಸಿ ಅವರು ಮಾತನಾಡಿದರು.
ನಮ್ಮ ಜಿಲ್ಲಿಯಲ್ಲಿಯೂ ಸಹ ಪ್ರತಿದಿನ ನೂರಾರು ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಉಸಿರಾಟದ ತೊಂದರೆ, ವಿಪರೀತ ಕೆಮ್ಮು-ಕಫ ಮತ್ತು ಇತರೆ ಖಾಯಿಲೆಗಳಿಂದ ಬಳಲುತ್ತಿರುವವರು ಐಸಿಯು, ಆಕ್ಸಿಜನ್ ಬೆಡ್ ಗಳಿಗೆ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ. ನನಗೆ ಪ್ರತಿದಿನ ಬೆಡ್ ಗಳಿಗಾಗಿ ಹತ್ತಾರು ಕರೆಗಳು ಬರುತ್ತಿದ್ದು ಏನು ಮಾಡಾಲಾಗದ ಅಸಹಾಯಕ ಸ್ಥಿತಿಯಲ್ಲಿದ್ದೇವೆ.
ನಮ್ಮ ಜಿಲ್ಲಾದ್ಯಂತ ಕೆಲವೇ ಕೆಲವು ಬೆರಳಿಣಿಕೆಯಷ್ಟು ಐಸಿಯು ಬೆಡ್ ಗಳಿದ್ದು ಈಗಿರುವ ಗಂಭೀರ ಪರಿಸ್ಥಿಯಲ್ಲಿ ಅದು ಸಾಲುತ್ತಿಲ್ಲ. ಬೆಂಗಳೂರಿಗೆ ಕೇವಲ 50-60ಕಿ.ಮಿ ದೂರದಲ್ಲಿದ್ದರೂ ಬಿ.ಯು ನಂಬರ್ ಇರದ ಕಾರಣ ನಮ್ಮ ಜಿಲ್ಲೆಯ ರೋಗಿಗಳಿಗೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ, ಒಂದೆರಡು ಆಸ್ಪತ್ರೆಗಳಲ್ಲಿ ಚಿಕ್ಕಬಳಾಪುರ ಜಿಲ್ಲೆಗೆ ಒಂದಿಷ್ಟು ಬೆಡ್ ಮೀಸಲಿಡುವಂತೆ ಸಚಿವರ ಮೌಖಿಕ ಆದೇಶವಿದೆಯಾದರು ಅದು ಪಾಲನೆಯಾಗುತ್ತಿಲ್ಲ.
ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರುಗಳು ಮತ್ತು ಎಲ್ಲಾ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಈ ಕೂಡಲೇ ಒತ್ತಡ ಹೇರಿ ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳಲ್ಲಿ ನಮ್ಮ ಜೆಲ್ಲೆಯ ರೋಗಿಗಳಿಗೆ ಕೋವಿಡ್ ಚಿಕಿತ್ಸೆಗೆ ಅವಕಾಶ ಕಲ್ಪಿಸಬೇಕೆಂದು ಅವರು ಒತ್ತಾಯಿಸಿದರು.
ನಲವತ್ತೈದು ವರ್ಷ ಮೇಲ್ಪಟ್ಟವರು ತಡ ಮಾಡದೇ ಲಸಿಕೆ ಹಾಕಿಸಿಕೊಳ್ಳಿ. ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ರೋಗ ಹರಡದಂತೆ ಮಾಡುವುದೇ ಈಗ ಮಾಡಬೇಕಾದ ತುರ್ತು ಕ್ರಮ ಎಂದರು.
Follow ನಮ್ಮ ಶಿಡ್ಲಘಟ್ಟ on
Facebook: https://www.facebook.com/sidlaghatta
Twitter: https://twitter.com/hisidlaghatta
Instagram: https://www.instagram.com/sidlaghatta
Telegram: https://t.me/Sidlaghatta