ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ವೈ.ಹುಣಸನಹಳ್ಳಿ ರೈಲ್ವೆ ಸ್ಟೇಷನ್ ವೃತ್ತದ ಬಳಿ ಲಾರಿ ಡಿಕ್ಕಿಯೊಡೆದ ಪರಿಣಾಮ ರಸ್ತೆ ಬದಿ ನಿಂತಿದ್ದ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಚಿಂತಾಮಣಿ ತಾಲ್ಲೂಕು ಕಡೆಸೇನಹಳ್ಳಿ ಗ್ರಾಮದ ಮುತ್ತುರಾಜು(50) ಮೃತಪಟ್ಟ ವ್ಯಕ್ತಿ. ನಾಗಾಲ್ಯಾಂಡ್ ರಾಜ್ಯದ ನೋಂದಾಯಿತ ಲಾರಿ ಡಿಕ್ಕಿ ಹೊಡೆದಿದ್ದು ಅಪಘಾತ ನಡೆಯುತ್ತಿದ್ದಂತೆ ಲಾರಿಯನ್ನು ನಿಲ್ಲಿಸದೆ ಮುಂದೆ ಸಾಗಿದ್ದಾನೆ.
ಸ್ಥಳೀಯರು ಲಾರಿಯನ್ನು ಹಿಂಬಾಲಿಸಿ ಚಿಂತಾಮಣಿ ಮಾರ್ಗದ ತಿಮ್ಮಸಂದ್ರ ಬಳಿ ಲಾರಿಯನ್ನು ಅಡ್ಡಗಟ್ಟಿ ನಿಲ್ಲಿಸಿ ರಾಷ್ಟ್ರೀಯ ಹೆದ್ದಾರಿ ಗಸ್ತು ಪೊಲೀಸರಿಗೆ ಲಾರಿ ಹಾಗೂ ಚಾಲಕನ್ನು ಒಪ್ಪಿಸಿದ್ದಾರೆ. ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವವನ್ನು ಹಸ್ತಾಂತರಿಸಲಾಗಿದೆ.