ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಾರ್ಗೆಟ್ ಕಾರ್ಫೋರೇಷನ್ ಸಂಸ್ಥೆ, ಜ್ಞಾನೋದಯ ಗ್ರಾಮೀಣಾಭಿವೃದ್ದಿ ಸಂಸ್ಥೆ ಹಾಗೂ ಕುಂದಲಗುರ್ಕಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಕೊರೊನಾ ವಾರಿಯರ್ಸ್ ಹಾಗೂ ಇತರರಿಗೆ ಸುರಕ್ಷಾ ಪರಿಕರಗಳ ಕಿಟ್ ವಿತರಿಸಿ ಕುಂದಲಗುರ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಎನ್.ಗಂಗಯ್ಯ ಮಾತನಾಡಿದರು.
ಕೊರೊನಾ ಲಾಕ್‍ಡೌನ್ ಎಲ್ಲರನ್ನೂ ಸಂಕಷ್ಟಕ್ಕೆ ತಳ್ಳಿದೆ. ಎಲ್ಲವನ್ನೂ ಸರ್ಕಾರವೇ ಮಾಡಲು ಸಾಧ್ಯವಿಲ್ಲ. ನಾವು ನಮ್ಮ ಅಕ್ಕ ಪಕ್ಕದಲ್ಲಿ ಸಂಕಷ್ಟಕ್ಕೆ ಸಿಲುಕಿರುವವರ ಕೈ ಹಿಡಿಯಬೇಕು. ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವವ ಕೈ ಹಿಡಿದು ಮೇಲೆತ್ತುವ ಮೂಲಕ ನಾವು ಮಾನವೀಯತೆ ಮೆರೆದು ಎಲ್ಲರಲ್ಲೂ ಸಮಾನತೆಯ ಭಾವನೆಯನ್ನು ಮೂಡಿಸಬೇಕೆಂದು ಅವರು ತಿಳಿಸಿದರು.
ಪಿಡಿಒ ಶ್ರೀನಿವಾಸ್, ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ಕೆ.ಪಿ.ಮುನಿರೆಡ್ಡಿ, ಕೆ.ಸಿ.ರಮೇಶ್‍ರೆಡ್ಡಿ, ಮುನೇಗೌಡ, ಮುನಿಯಪ್ಪ, ಮುನಿರಾಜು, ಪಾಪಣ್ಣ, ಜ್ಞಾನೋದಯ ಸಂಸ್ಥೆಯ ರಾಜೇಂದ್ರ ಪ್ರಸಾದ್, ಶಿಕ್ಷಕ ಶ್ರೀನಿವಾಸ್‍ರೆಡ್ಡಿ, ಅರುಣ್‍ಕುಮಾರ್ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi