Y Hunasenahalli, Sidlaghatta : ವಿದ್ಯಾರ್ಥಿಗಳಿಗೆ, ಕೃಷಿಕರಿಗೆ, ಮಹಿಳೆಯರಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಗ್ರಾಮೀಣ ಭಾಗವನ್ನು ಸಂಪರ್ಕಿಸುವ ಎಂಟು ಬಸ್ ಮಾರ್ಗಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ವೈ ಹುಣಸೇನಹಳ್ಳಿಯಲ್ಲಿ ಬುಧವಾರ ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಎಂಟು ಬಸ್ ಮಾರ್ಗಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗ ಅಭಿವೃದ್ಧಿ ಕಾಣಬೇಕಾದರೆ ಸಾರಿಗೆ ಸಂಪರ್ಕ ಸಾಧನೆ ಸಮರ್ಪಕವಾಗಿರಬೇಕು. ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಲು, ಅಕ್ಕತಾಯಂದಿರು, ಕಾರ್ಮಿಕರು ಸಂಚರಿಸಲು ಅನುಕೂಲವಾಗಲೆಂದು ತಾಲ್ಲೂಕಿನ ಹಳ್ಳಿಗಳನ್ನು ಸಂಪರ್ಕಿಸುವ ಬಸ್ ಸೌಕರ್ಯವನ್ನು ಮಾಡಿಕೊಡಲು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಸ್ಪಂದಿಸಿದ್ದಾರೆ. ಕ್ಷೇತ್ರ ಅಭಿವೃದ್ಧಿ ಮಾಡುವ ಈ ಉದ್ದೇಶಗಳಿಗೆ ಎಲ್ಲರೂ ಕೈಜೋಡಿಸಬೇಕೆಂದು ಅವರು ಹೇಳಿದರು.
ಶಿಡ್ಲಘಟ್ಟ ಅಲಸೂರುದಿನ್ನೆ ಕೈವಾರ ಚಿಂತಾಮಣಿ, ಶಿಡ್ಲಘಟ್ಟ ಬುಡುಗವಾರಹಳ್ಳಿ ಅಲಗುರ್ಕಿ ಚಿಂತಾಮಣಿ, ಶಿಡ್ಲಘಟ್ಟ ದೊಗರನಾಯಕನಹಳ್ಳಿ ಚಿಂತಾಮಣಿ, ಶಿಡ್ಲಘಟ್ಟ ಮಳಮಾಚನಹಳ್ಳಿ ಜಂಗಮಕೋಟೆ ಕ್ರಾಸ್ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಚೀಮಂಗಲ ಎಚ್.ಕ್ರಾಸ್, ಶಿಡ್ಲಘಟ್ಟ ಪಲಿಚೇರ್ಲು ಹನ್ನೊಂದನೇ ಮೈಲಿ ಚಿಂತಾಮಣಿ, ಶಿಡ್ಲಘಟ್ಟ ಗಂಜಿಗುಂಟೆ ಚಿಂತಾಮಣಿ, ಶಿಡ್ಲಘಟ್ಟ ಕಾಚಹಳ್ಳಿ ರಪ್ಪಾರ್ಲಹಳ್ಳಿ ರಾಚನಹಳ್ಳಿ ಚಿಂತಾಮಣಿ.. ಒಟ್ಟು ಎಂಟು ಹೊಸ ಮಾರ್ಗಗಳನ್ನು ಸಾರಿಗೆ ಬಸ್ ಸಂಚಾರವಿರುತ್ತದೆ. ಇದನ್ನು ಜನರು ಸದುಪಯೋಗಮಾಡಿಕೊಳ್ಳಬೇಕೆಂದರು.
ಅಟಲ್ ಭೂಜಲ ಯೋಜನೆಯ ಕುರಿತಂತೆ ಹಾಗೂ ಪ್ಲಾಸ್ಟಿಕ್ ನಿಂದಾಗುವ ತೊಂದರೆಗಳ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ನಾಗೇಶ್ ವಿವರಿಸಿದರು.
ಗ್ರಾಮ ಪಂಚಾಯಿತಿ ಪಿಡಿಒ ರೇಣುಕಾ, ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ಸಾರಿಗೆ ಬಸ್ ಡಿಪೊ ವ್ಯವಸ್ಥಾಪಕ ಶ್ರೀನಾಥ್, ತಾದೂರು ರಘು, ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾಲಕ ಮಂಜುನಾಥ್, ಹುಜಗೂರು ರಾಮಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣಸ್ವಾಮಿ, ಸದಾಶಿವ, ಕುಂದಲಗುರ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದಮ್ಮ,ಕೊತ್ತನೂರು ಲಕ್ಷ್ಮೀಪತಿ, ನಾರಾಯಣಸ್ವಾಮಿ, ಶೀಗೇಹಳ್ಳಿ ವೇಣುಗೋಪಾಲ್, ಕುಂದಲಗುರ್ಕಿ ಚಂದ್ರಶೇಖರ್, ಕುಮಾರ್, ಗೊರಮಡುಗು ರಾಮಾಂಜಿನಪ್ಪ, ಯಣ್ಣೂರು ಚಂದ್ರಾಯಪ್ಪ, ರವಿಕುಮಾರ್ ಹಾಜರಿದ್ದರು.