ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಸಂಕ್ರಾಂತಿ ಅಂಗವಾಗಿ ಭಾನುವಾರ ಕಿಚ್ಚು ಹಾಕಿ ಎತ್ತುಗಳನ್ನು ಹಾಯಿಸಿ ಸಡಗರದಿಂದ ಸಂಭ್ರಮಿಸಲಾಯಿತು.
ಗ್ರಾಮದ ಕಾಟಿಮರಾಯಸ್ವಾಮಿ, ಈಶ್ವರ, ಚನ್ನಕೇಶವ ಹಾಗೂ ಗಂಗಮ್ಮದೇವಿ ದೇವಾಲಯ ಸೇರಿದಂತೆ ಗ್ರಾಮದ ಎಲ್ಲ ದೇವಾಲಯಗಳಲ್ಲೂ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿಂಗರಿಸಿದ ಜೋಡೆತ್ತುಗಳನ್ನು ಮೆರವಣಿಗೆ ಮಾಡಲಾಯಿತು.
ತಮಟೆ, ನಾದಸ್ವರ, ಕಳಶಗಳೊಂದಿಗೆ ಜೋಡೆತ್ತುಗಳ ಮೆರವಣಿಗೆ ಸಾಗಿದ ಊರಿನ ಪ್ರಮುಖ ಬೀದಿಗಳಲ್ಲಿ ಮನೆಗಳ ಮುಂದೆ ಸಾರಿಸಿ ರಂಗೋಲೆ ಹಾಕಿ ಎತ್ತುಗಳ ಮೆರವಣಿಗೆಯನ್ನು ಬರ ಮಾಡಿಕೊಳ್ಳಲಾಯಿತು.
ಎಲ್ಲರಿಗೂ ಎಳ್ಳು ಬೆಲ್ಲ ಕೊಬ್ಬರಿಯನ್ನು ವಿತರಿಸಲಾಯಿತು. ಗ್ರಾಮದ ಮುಖಂಡರಾದ ಎ.ಪಂಚಾಕ್ಷರಿರೆಡ್ಡಿ, ಜಗದೀಶ್‌ರೆಡ್ಡಿ, ದೇವರಾಜ್, ಪ್ರಸಾದ್, ಚನ್ನಕೃಷ್ಣಪ್ಪ, ರಾಜಣ್ಣ, ಗ್ರಾಮ ಪಂಚಾಯಿತಿ ಸದಸ್ಯ ತೇಜಸ್ವರೂಪರೆಡ್ಡಿ, ಸುನಿತ ಭಾಗವಹಿಸಿದ್ದರು.