Sidlaghatta : ವಿದ್ಯೆ, ಸಮಾನತೆ, ಸ್ವಾಭಿಮಾನ, ಆತ್ಮಗೌರವಕ್ಕಾಗಿ ಹೋರಾಡಿ ಜಯಗಳಿಸಿದ ಘಟನೆ ಮತ್ತು ವಿದ್ಯೆ, ಅಸಮಾನತೆ ಹಾಗೂ ಶೋಷಣೆಯ ವಿರುದ್ಧ ನಡೆದ ಹೋರಾಟ, ಇತಿಹಾಸ ಪುಸ್ತಕಗಳಿಂದ ಮುಚ್ಚಿಡಲ್ಪಟ್ಟಿದ್ದ ಐತಿಹಾಸಿಕ ಯುದ್ಧದ ವಿಜಯವನ್ನು ಸಂಭ್ರಮಿಸೋಣ ಎಂದು ಈ ಧರೆ ಸಮತಾ ಸೇನೆಯ ಮುಖ್ಯಸ್ಥ ಈ ಧರೆ ಪ್ರಕಾಶ್ ತಿಳಿಸಿದರು.
ಶಿಡ್ಲಘಟ್ಟ ನಗರದ ಡಾ.ಬಿ.ಆರ್.ಅಂಬೇಡ್ಕರ್ ರವರ ಜೋಡಿ ರಸ್ತೆ ಬಳಿ ಭಾನುವಾರ ಈ ಧರೆ ಸಮತಾ ಸೇನೆ ಹಾಗೂ ಬಹುಜನ ವಾಲೆಂಟರಿ ಪೋರ್ಸ್ ವತಿಯಿಂದ ಕೋರೇಗಾಂವ್ ವಿಜಯ ಸ್ಥಂಭಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ಹಂಚಿ ಅವರು ಮಾತನಾಡಿದರು.
1818 ರಲ್ಲಿ 500 ಮಹರ್ ಸೈನಿಕರು 28,000 ಸಾವಿರ ಪೇಶ್ವೆಗಳೊಂದಿಗೆ ಅಂದರೆ 2 ನೇ ಬಾಜೀರಾಯನ ಸೈನ್ಯವನ್ನು ಮಣಿಸಿ ವಿಜಯ ಸಾಧಿಸಿದ ಆ ಯುದ್ಧದಲ್ಲಿ 22 ವೀರ ಸೇನಾನಿಗಳು ಮೃತರಾದ ಹಿನ್ನೆಲೆ ಅವರ ಸ್ಮರಣಾರ್ಥ ಕೋರೆಗಾಂವ್ ನಲ್ಲಿ 75 ಅಡಿ ಎತ್ತರ ಸ್ಥಂಭ ನಿರ್ಮಿಸಲ್ಪಟ್ಟವುದನ್ನು ಬಾಬಾ ಸಾಹೇಬ ಡಾ. ಬಿ. ಆರ್ ಅಂಬೇಡ್ಕರ್ ರವರು ವಿದೇಶದಲ್ಲಿ ವ್ಯಾಸಂಗ ಮಾಡುವಾಗ ಅಲ್ಲಿನ ಪುಸ್ತಕಗಳನ್ನು ಓದಿ ಭಾರತದಲ್ಲಿ ನಡೆದ ನೈಜ ಇತಿಹಾಸ ಗುರುತಿಸಿದರು. ಈ ನೈಜ ಇತಿಹಾಸ ಈಗಿನ ಯುವ ಪೀಳಿಗೆ ತಿಳಿಸಬೇಕಾಗಿದೆ ಎಂದರು.
ಬಿ.ಎಸ್.ಪಿ ಜಿಲ್ಲಾ ಸಂಯೋಜಕ ಮಲ್ಲಿಶೆಟ್ಟಿಪುರ ದ್ಯಾವಪ್ಪ ಮಾತನಾಡಿ, ಈ ಕೋರೇಗಾಂವ್ ಯುದ್ಧವು ಅಸ್ಪೃ ಶ್ಯರ ಹೋರಾಟದ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗಿ ಸ್ಫೂರ್ತಿಯ ಸಂಕೇತವಾದ್ದರಿಂದ ಡಾ.ಬಿ.ಆರ್.ಅಂಬೇಡ್ಕರ್ ರವರು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಜನವರಿ 1 ರಂದು ಮಾತ್ರ ಕೋರೇಗಾಂವ್ ನಲ್ಲಿರುವ ವಿಜಯ ಸ್ಥಂಬಕ್ಕೆ ಬಂದು ಗೌರವ ಸಮರ್ಪಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನಾವು ಕೋರೇಗಾಂವ್ ವಿಜಯೋತ್ಸವ ಆಚರಿಸುತ್ತಿದ್ದೇವೆ ಎಂದರು.
ಈ ಧರೆ ಸಮತಾ ಸೇನೆ ತಾಲ್ಲೂಕು ಅಧ್ಯಕ್ಷ ಮಳ್ಳೂರು ವೆಂಕಟರಾಮಪ್ಪ, ಉಪಾದ್ಯಕ್ಷ ವೆಂಕಟರಮಣಪ್ಪ, ಕಾರ್ಮಿಕ ಘಟಕ ತಾಲ್ಲೂಕು ಅಧ್ಯಕ್ಷ ನರಸಿಂಹ (NTR), ಮೇಲೂರು ಗ್ರಾಮ ಪಂಚಾಯಿತಿ ಸದಸ್ಯ ಕಂಬದಹಳ್ಳಿ ದೇವರಾಜ್, ಹನುಮಂತಪುರ ಕೃಷ್ಣಪ್ಪ, ಮಳ್ಳೂರು ಪ್ರಭಾಕರ್, ಅಪ್ಪೇಗೌಡನಹಳ್ಳಿ ಸಂಪತ್ ಕುಮಾರ್, ಮುನಿರಾಜು, ಬೈರನಾಯಕನಹಳ್ಳಿ ನರಸಿಂಹಪ್ಪ, ಮೇಲೂರು ಮುನಿಕೃಷ್ಣಪ್ಪ, ಮುನಿಕೃಷ್ಣಪ್ಪ, ತಾತಹಳ್ಳಿ ಪರಮೇಶ್, ಈಶ್ವರ್, ನಾಗರಾಜ್, ಮುನಿಶಾಮಪ್ಪ, ಕಿಟ್ಟಪ್ಪ, ಮಳ್ಳೂರು ದೇವರಾಜ್, ಬಿ.ಎಸ್.ಪಿ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ಮಟ್ಟಿ ನಾರಾಯಣಸ್ವಾಮಿ ಹಾಜರಿದ್ದರು.