ಶಿಡ್ಲಘಟ್ಟ ನಗರದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಹಾಗೂ ಇತರೆ ಫಲಾನುಭವಿಗಳಿಗೆ ಚೆಕ್ ವಿತರಿಸಿ ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್ ಮಾತನಾಡಿದರು.
ಹಾಲು ಉತ್ಪಾದಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಹಲವು ಯೋಜನೆಗಳನ್ನು ಕೋಚಿಮುಲ್ ವತಿಯಿಂದ ರೂಪಿಸಿದ್ದು ಅದರ ಸದುಪಯೋಗವನ್ನು ಮಾಡಿಕೊಳ್ಳಬೇಕೆಂದು ಅವರು ತಿಳಿಸಿದರು.
ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯಗಳನ್ನೂ ಸಹ ರೂಢಿಸಿಕೊಳ್ಳಬೇಕು. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಅರ್ಥೈಸಿಕೊಳ್ಳಬೇಕು. ವಿದ್ಯಾರ್ಥಿಗಳು ಶಿಸ್ತು, ಒಳ್ಳೆಯ ನಡತೆ, ಸಮಯಪಾಲನೆ, ಹೊಸದನ್ನು ಕಲಿಯುವ ಉತ್ಸಾಹ ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 19 ವಿದ್ಯಾರ್ಥಿಗಳಿಗೆ ಒಟ್ಟು 2 ಲಕ್ಷ 55 ಸಾವಿರ ರೂ ಮೊತ್ತದ ಚೆಕ್ ಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ಉಪವ್ಯಾವಸ್ಥಪಕ ಶಂಕರ್ ರೆಡ್ಡಿ ಮಾತನಾಡಿ, ಹಾಲು ಉತ್ಪಾದಕರ ಮಕ್ಕಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೊತ್ಸಾಹಧನ ನೀಡುತ್ತಿದ್ದೇವೆ. ಮೊದಲು ಕೆಲವು ವಿಭಾಗಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಎಲ್ಲಾ ವಿಭಾಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳಿಗೆ ಕಳೆದ ಎರಡು ವರ್ಷಗಳಿಂದ ನೀಡುತ್ತಿದ್ದೇವೆ. ಹಾಲು ಉತ್ಪದಕರ ಮಕ್ಕಳಿಗೆ ಹಾಸ್ಟೆಲ್ ಸೇವೆ ಹಾಗೂ ಇನ್ನೂ ಹಲವಾರು ಸೇವೆಗಳು ಇದ್ದು, ಉತ್ಪಾದಕರು ತಮ್ಮ ಮಕ್ಕಳಿಗೆ ಈ ಯೋಜನೆಯನ್ನು ಬಳಿಸಿಕೊಳ್ಳಬೇಕು ಎಂದರು.
ಎ.ಹುಣಸೇನಹಳ್ಳಿ ಲಕ್ಷ್ಮಿನಾರಾಯಣಮ್ಮ ಅವರಿಗೆ ಕೋಚಿಮುಲ್ ಮೂಲಕ ವಿಮೆ ಹಣ ಒಂದು ಲಕ್ಷ ರೂಗಳ ಚೆಕ್ ಅನ್ನು ನೀಡಲಾಯಿತು.
ವಿಸ್ತಣಾಧಿಕಾರಿಗಳಾದ ವಿ.ಶ್ರೀನಿವಾಸ್, ಜಯಚಂದ್ರ, ಶಂಕರ್ ಕುಮಾರ್, ವರಲಕ್ಷ್ಮಿ, ವೈ.ಕುಂಮಣ್ಣ ಹಾಜರಿದ್ದರು.