ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಶಾಖೆಯ ವತಿಯಿಂದ ಕಸಬಾ ಹೋಬಳಿಯ ಪದಾಧಿಕಾರಿಗಳ ಆಯ್ಕೆಯನ್ನು ಭಾನುವಾರ ತಾಲ್ಲೂಕು ಸಂಚಾಲಕ ಟಿ.ಎ.ಚಲಪತಿ ನೇತೃತ್ವದಲ್ಲಿ ನಡೆಸಿದ್ದು ಕಸಬಾ ಹೋಬಳಿ ಅಧ್ಯಕ್ಷರಾಗಿ ಮುನೀಂದ್ರಬಾಬು ಆಯ್ಕೆಯಾಗಿದ್ದಾರೆ.
ಕಸಬಾ ಹೋಬಳಿ ಸಂಘಟನಾ ಸಂಚಾಲಕರಾಗಿ ಜಿ.ವಿ.ನಾಗೇಶ, ಪ್ರದೀಪ್, ರವಿ ಖಜಾಂಚಿಯಾಗಿ ಅಶೋಕ, ಸಹ ಸಂಚಾಲಕರಾಗಿ ನಾಗೇಶ, ನರಸಿಂಹಪ್ಪ, ನರಸಿಂಹಮೂರ್ತಿ, ಕಲಾ ಮಂಡಲಿ ಸಂಚಾಲಕರಾಗಿ ಗಂಗಾಧರ, ಅಶೋಕ, ಸತೀಶ, ಅಶೋಕ ಹೋಬಳಿ ಸಮಿತಿ ಸದಸ್ಯರಾಗಿ ರಾಮಕೃಷ್ಣಪ್ಪ, ಮಹಬೂಬ್, ಮಧು, ಮುನಿರಾಜು, ಶ್ರೀನಿವಾಸ್, ದಾಸಪ್ಪ, ಮಂಜುನಾಥ, ಮಾರಪ್ಪ, ಮುನಿಯಪ್ಪ ಆಯ್ಕೆಯಾಗಿದ್ದಾರೆ.