ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕರಾಟೆ ಕಲೆಯನ್ನು ಬೆಳೆಸುವ ಸಲುವಾಗಿ ಮತ್ತು ಪ್ರತಿಭಾವಂತ ಕರಾಟೆ ಪಟುಗಳಿಗೆ ಅವಕಾಶ ಕಲ್ಪಿಸಲು ಜನವರಿ 10 ರಂದು ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಡೆಸಲಾಗುತ್ತಿದೆ ಎಂದು ದಿವ್ಯ ಭಾರತ್ ಕರಾಟೆ ಡೋ ಅಸೋಸಿಯೇಷನ್‌ನ ಕರಾಟೆ ಶಿಕ್ಷಕ ಅರುಣ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಪ್ರತಿಕಾ ಹೇಳಿಕೆ ನೀಡಿರುವ ಅವರು, ಶಿಡ್ಲಘಟ್ಟ ನಗರದ ಒಂದನೇ ನಗರ್ತ ಪೇಟೆಯ ಶ್ರೀ ಕಾಳಿಕಾಂಬ ಕಮ್ಮಟೇಶ್ವರಸ್ವಾಮಿ ಸಮುದಾಯ ಭವನದಲ್ಲಿ 2020 -21 ನೇ ಸಾಲಿನ ಕರಾಟೆ ಚಾಂಪಿಯನ್ ಶಿಪ್ ನಡೆಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಮೊದಲು ಕರಾಟೆ ಪಟುಗಳ ತಾಲೀಮ್ ನಡೆಸಿ, ನಂತರ ವಿವಿಧ ಸ್ಪರ್ಧೆಗಳನ್ನು ನಡೆಸಿ, ಸಂಜೆ ವೇಳೆಗೆ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.