Home News ಕಾಚಹಳ್ಳಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೆ

ಕಾಚಹಳ್ಳಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೆ

0

ತಾಲ್ಲೂಕಿನ ಕಾಚಹಳ್ಳಿ ಗ್ರಾಮದ ಪುರಾತನ ವೆಂಕಟರಮಣಸ್ವಾಮಿ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಲಾಗಿದ್ದು, 48 ದಿನಗಳ ನಿತ್ಯ ಪೂಜೆಗಳ ನಂತರ ಬುಧವಾರ ಮಂಡಲ ಪೂಜೆ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಫೂಜಾ ಕಾರ್ಯಕ್ರಮಗಳು ನಡೆದವು.

 ಸುಮಾರು 300 ರಿಂದ 400 ವರ್ಷಗಳಷ್ಟು ಹಳೆಯದಾದ ದೇವಾಲಯ ಶಿಥಿಲಗೊಂಡಿತ್ತು. ಗ್ರಾಮಸ್ಥರು ಹಾಗೂ ಮನೆದೇವರನ್ನಾಗಿ ಹೊಂದಿರುವ ಕುಲಬಾಂದವರು ಸೇರಿ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದ್ದಾರೆ. ನೂತನ ಗರ್ಭಗುಡಿ, ಪ್ರಭಾವಳಿ, ಗೋಪುರ ನಿರ್ಮಿಸಲಾಗಿದೆ. 48 ದಿನಗಳ ಕಾಲ ಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಚಹಳ್ಳಿ ಗ್ರಾಮದ ಪ್ರತಿಯೊಂದು ಮನೆಯವರೂ ಒಂದೊಂದು ದಿನದ ಪೂಜೆಯ ಜವಾಬ್ದಾರಿಯನ್ನು ಹೊತ್ತಿದ್ದರು.

 ವಿವಿಧ ಹೋಮಗಳನ್ನು ನಡೆಸಲಾಯಿತು. ಉತ್ಸವ ಮೂರ್ತಿಗಳನ್ನು ಹಾಗೂ ದೀಪವನ್ನು ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿ ಬಂದು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ದೇವರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

 ನೆರೆಹೊರೆಯ ಗ್ರಾಮಸ್ಥರು, ಯುವ ಸಮೂಹ ಹಾಗೂ ಮನೆದೇವರನ್ನಾಗಿ ಹೊಂದಿರುವ ಸೇವಾಕರ್ತರು ಪೂಜೆಯಲ್ಲಿ ಭಾಗವಹಿಸಿದ್ದರು.