Sidlaghatta : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಬಿ ಫಾರಂ ಪಡೆದಿರುವ ಮೇಲೂರು ಬಿ.ಎನ್.ರವಿಕುಮಾರ್ ಸೋಮವಾರ ನಾಮಪತ್ರವನ್ನು ಸಲ್ಲಿಸಿದರು.
ಬಸ್ ನಿಲ್ದಾಣದ ಬಳಿಯ ಅಂಜನಿ ಕಾಂಪ್ಲೆಕ್ಸ್ ಹತ್ತಿರದ ಪೆಟ್ರೋಲ್ ಬಂಕ್ ಬಳಿ ಬೆಳಗ್ಗೆಯಿಂದಲೇ ಜೆಡಿಎಸ್ ಕಾರ್ಯಕರ್ತರು ಜಮಾಯಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿದ್ದ ಜೆಡಿಎಸ್ ಕಾರ್ಯಕರ್ತರೊಂದಿಗೆ ಮೇಲೂರು ಬಿ.ಎನ್.ರವಿಕುಮಾರ್ ಅವರು ಬಸ್ ನಿಲ್ದಾಣದ ಬಳಿಯಿಂದ ಟಿ.ಬಿ.ರಸ್ತೆಯ ಮೂಲಕ ತಾಲ್ಲೂಕು ಕಚೇರಿಯವರೆಗೂ ನಡೆದು ಬಂದರು. ದಾರಿಯುದ್ದಕ್ಕೂ ತುಂಬಿಹೋಗಿದ್ದ ಜನರು ಹಾಗೂ ಜೆಡಿಎಸ್ ಬಾವುಟಗಳೇ ಕಂಡುಬರುತ್ತಿದ್ದವು.
ಹುರುಪಿನಲ್ಲಿದ್ದ ಜೆಡಿಎಸ್ ಕಾರ್ಯಕರ್ತರು ಒಂದು ರೀತಿಯಲ್ಲಿ ಜೆಡಿಎಸ್ ಪಕ್ಷದ ಶಕ್ತಿ ಪ್ರದರ್ಶನವನ್ನೇ ಮಾಡಿದರು. ಕೆಲವರಂತೂ ತಮ್ಮ ಬೈಕಿಗೆ ಜೆಡಿಎಸ್ ಬಾವುಟ ಮತ್ತು ಬಲೂನುಗಳನ್ನು ಕಟ್ಟಿಕೊಂಡಿದ್ದರೆ, ಬಹುತೇಕರು ಜೆಡಿಎಸ್ ಬಾವುಟವನ್ನು ಹಿಡಿದು ಟಿ.ಬಿ.ರಸ್ತೆಯಲ್ಲಿ ಸಾಗಿದರು. ಟಿ.ಬಿ.ರಸ್ತೆಯ ವಾಹನ ಸಾಗಾಟವನ್ನು ಪೊಲೀಸರು ಬೈಪಾಸ್ ರಸ್ತೆಗೆ ತಿರುಗಿಸಿದ್ದರು.
ಮೇಲೂರು ಬಿ.ಎನ್.ರವಿಕುಮಾರ್ ಜೆಡಿಎಸ್ ಪಕ್ಷದ ಬಿ.ಫಾರಂ ಜೊತೆ ನಾಮಪತ್ರವನ್ನು ಸಲ್ಲಿಸುವ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಬಂಕ್ ಮುನಿಯಪ್ಪ, ಮೇಲೂರು ಮಂಜುನಾಥ್, ನಾಮಪತ್ರ ಮುಗಿಲಡಿಪಿ ನಂಜಪ್ಪ, ತಾದೂರು ರಾಘು ಹಾಜರಿದ್ದರು. ಚುನಾವಣಾಧಿಕಾರಿ ಜಾವಿದಾ ನಸೀಮಾ ಖಾನಮ್ ಮತ್ತು ಸಹಾಯಕ ಚುನಾವಣಾಧಿಕಾರಿ ಬಿ.ಎನ್.ಸ್ವಾಮಿ ಅಭ್ಯರ್ಥಿಯಿಂದ ನಾಮಪತ್ರವನ್ನು ಸ್ವೀಕರಿಸಿದರು.
JDS Candidate Submits Nomination Papers with Massive Show of Support
Sidlaghatta : B.N. Ravikumar from Melur, who received the B form to submit nomination papers as a JDS party candidate from Sidlaghatta assembly constituency, submitted his nomination on Monday amidst a gathering of JDS workers. The workers, along with thousands of supporters, marched from the petrol station near Anjani Complex near the bus stand to the taluk office through TB road, waving JDS flags and balloons. The gathering of energetic JDS workers demonstrated the strength of the party. Traffic on TB road was diverted by the police to the bypass road.
JDS leaders, including Bank Muniyappa, Melur Manjunath, Mugiladipi Nanjappa, and Thadur Raghu, were present when Melur BN Ravikumar submitted his nomination papers, along with the JDS party’s B form. The candidate’s nomination papers were received by the Returning Officer Javida Naseema Khanum and Assistant Returning Officer BN Swamy.