20.1 C
Sidlaghatta
Friday, November 22, 2024

ಜೆಡಿಎಸ್ ಅಭ್ಯರ್ಥಿಗೆ ‘ನಂದಿನಿ’ ಮಜ್ಜಿಗೆ, ಲಸ್ಸಿ, ಬಾದಾಮಿ ಹಾಲಿನ ಬಾಟಲುಗಳ ಹಾರ ಹಾಕಿ ಸ್ವಾಗತ

Ravikumar emphasizes the importance of development politics and the Pancharatna schemes while canvassing for votes in Mallur, Muttur, and Bhaktarahalli villages.

- Advertisement -
- Advertisement -

Sidlaghatta : ಶಿಡ್ಲಘಟ್ಟ ವಿಧಾನಸಭೆ ಚುನಾವಣೆಯಲ್ಲಿ ನಾನು ಇತರೆ ಅಭ್ಯರ್ಥಿಗಳ ಚರ್ಚೆ ಮಾಡೊಲ್ಲ. ನಮ್ಮದೇನಿದ್ದರೂ ಅಭಿವೃದ್ಧಿ ರಾಜಕಾರಣ. ಈ ಕ್ಷೇತ್ರದ ಕೊರತೆಗಳು, ಜನರ ಆಶೋತ್ತರಗಳು, ಅವಶ್ಯಕತೆಗಳ ಸ್ಪಷ್ಟ ಅರಿವಿದೆ ಎಂದು ಶಿಡ್ಲಘಟ್ಟ ವಿಧಾನಸಭೆಯ ಜೆಡಿಎಸ್ ಅಭ್ಯರ್ಥಿ ಮೇಲೂರು ರವಿಕುಮಾರ್ ಹೇಳಿದರು.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮಳ್ಳೂರು ಮುತ್ತೂರು ಭಕ್ತರಹಳ್ಳಿ ಗ್ರಾಮಗಳಲ್ಲಿ ಜೆಡಿಎಸ್ ಅಭ್ಯರ್ಥಿ ಮೇಲೂರು ರವಿಕುಮಾರ್ ಅವರು ಗ್ರಾಮಗಳಲ್ಲಿ ಸಂಚರಿಸಿ ಮನೆ ಮನೆಗೂ ಭೇಟಿ ನೀಡಿ ಮತಯಾಚನೆ ಮಾಡಿದರು.

ಮುತ್ತೂರು ಗ್ರಾಮದಲ್ಲಿ ಕ್ರೇನ್ ಮೂಲಕ ಬೃಹತ್ ಗಾತ್ರದ ಸೇಬಿನ ಹಾರ ಹಾಕಿದರಲ್ಲದೆ ನೂರಾರು ಮಹಿಳೆಯರು ಕುಂಭ ಕಳಶಗಳೊಂದಿಗೆ ಮೇಲೂರು ರವಿಕುಮಾರ್ ಅವರಿಗೆ ಅದ್ದೂರಿ ಸ್ವಾಗತ ಕೋರಿ ಬರ ಮಾಡಿಕೊಂಡರು. ಮಳ್ಳೂರಿನಲ್ಲಿ “ನಮ್ಮ ನಂದಿನಿ, ನಮ್ಮ ಹೆಮ್ಮೆ” ಎಂಬ ಬ್ಯಾನರ್ ಕಟ್ಟಿದ್ದು, ಬೃಹದಾಕಾರದಲ್ಲಿ ನಂದಿನಿ ಉತ್ಪನ್ನಗಳಾದ ಮಜ್ಜಿಗೆ, ಲಸ್ಸಿ, ಬಾದಾಮಿ ಹಾಲುಗಳಿರುವ ಬಾಟಲುಗಳನ್ನು ಹಾರದ ರೂಪದಲ್ಲಿ ಕಟ್ಟಿ ಅದನ್ನು ಹಾಕುವ ಮೂಲಕ ವಿಶಿಷ್ಠವಾಗಿ ಗ್ರಾಮಕ್ಕೆ ಸ್ವಾಗತ ಕೋರಿದರು.

ಗ್ರಾಮದ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ನಂತರ ಗ್ರಾಮಗಳಲ್ಲಿ ಕಾರ್ಯಕರ್ತರ ಜತೆಗೂಡಿ ಸಂಚರಿಸಿ ಮನೆ ಮನೆಗೂ ತೆರಳಿ ಜೆಡಿಎಸ್ ಪಕ್ಷದ ಪ್ರಣಾಳಿಕೆ ಹಾಗೂ ಪಂಚರತ್ನ ಯೋಜನೆಗಳ ಕರಪತ್ರವನ್ನು ಹಂಚಿ ಕೈ ಮುಗಿದು ಮತಯಾಚಿಸಿದರು.

ಈ ವೇಳೆ ಮಾತನಾಡಿದ ಅವರು, ಶಿಡ್ಲಘಟ್ಟ ಕ್ಷೇತ್ರದಲ್ಲಿ 40 ವರ್ಷಗಳಿಂದಲೂ ಕಾಂಗ್ರೆಸ್‌ನ ಶಾಸಕ ವಿ.ಮುನಿಯಪ್ಪ ಅವರನ್ನು ವಿರೋಧಿಸಿ ರಾಜಕೀಯ ಮಾಡಿಕೊಂಡು ಬಂದಿದ್ದೇವೆ. ಇದುವರೆಗೂ ಅವರಷ್ಟೆ ನಮಗೆ ಎದುರಾಳಿಗಳಾಗಿದ್ದರು. ಆದರೆ ಇದೀಗ ಇರುವ ಅಭ್ಯರ್ಥಿಗಳ ಬಗ್ಗೆ ನಾನು ಚರ್ಚೆ ಮಾಡೊಲ್ಲ. ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯೇ ಏಕಮಾತ್ರ ಉದ್ದೇಶ ನಮ್ಮದು. ಪಂಚರತ್ನ ಯೋಜನೆಗಳನ್ನು ಮನೆ ಮನೆಗೂ ಮುಟ್ಟಿಸಿ ಮತದಾರರಲ್ಲಿ ಮತ ನೀಡುವಂತೆ ಮನವಿ ಮಾಡುತ್ತೇನೆಂದರು.

ಜೆಡಿಎಸ್ ಮುಖಂಡರಾದ ಹುಜಗೂರು ರಾಮಣ್ಣ, ಸದಾಶಿವ, ಮುತ್ತೂರು ಕೆಂಪೇಗೌಡ, ಮಳ್ಳೂರು ಶ್ರೀಧರ್, ತಾದೂರು ರಘು, ಮೇಲೂರು ಉಮೇಶ್, ನವೀನ್, ಮೇಲೂರು ಮಂಜುನಾಥ್ ಹಾಜರಿದ್ದರು.


JDS Candidate Meluru Ravikumar Campaigns for Votes in Shidlaghatta Assembly Constituency

Sidlaghatta : JDS candidate Meluru Ravikumar recently visited the villages of Mallur, Muttur, and Bhaktarahalli in the Sidlaghatta Assembly Constituency to campaign for votes. Ravikumar, who claims to understand the needs and aspirations of the constituency’s people, went door-to-door with JDS party workers and distributed the party manifesto and pamphlets on the Pancharatna schemes, soliciting votes.

During his visit to Muttur, Ravikumar received a grand welcome from hundreds of women who laid a huge garland of apples with a crane. Meanwhile, in Mallur, a banner that read “Namma Nandini, Namma Hemme” was put up, and bottles containing Nandini products like buttermilk, lassi, and almond milk were tied in the form of a garland to welcome him to the village.

Ravikumar spoke about his objective, which is the complete development of the field, and emphasized the importance of the Pancharat plans. He also mentioned that he would not discuss the current candidates, as his only focus is on the development of the constituency. JDS leaders Hujaguru Ramanna, Sadashiva, Muttur Kempegowda, Mallur Sridhar, Tadur Raghu, Melur Umesh, Naveen, and Melur Manjunath were present during the visit.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!