22.1 C
Sidlaghatta
Thursday, November 7, 2024

ಶಿಡ್ಲಘಟ್ಟ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಮೇಲೂರು ರವಿಕುಮಾರ್ ಮತಯಾಚನೆ

Ravikumar campaigns for JDS, pledges empowerment of farmers, youth, and women

- Advertisement -
- Advertisement -

Sidlaghatta : ಈ ರಾಜ್ಯದಲ್ಲಿ ರೈತರಪರ ಯಾವುದಾದರೂ ಸರ್ಕಾರ ನಡೆಸಿದ್ದರೆ ಅದು ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸರ್ಕಾರ ಎಂದು ಶಿಡ್ಲಘಟ್ಟದ ಜೆಡಿಎಸ್ ಅಭ್ಯರ್ಥಿ ಮೇಲೂರು ರವಿಕುಮಾರ್ ತಿಳಿಸಿದರು.

ನಗರದಲ್ಲಿ ಬುಧವಾರ ನಗರದ ವಿವಿಧ ವಾರ್ಡುಗಳಲ್ಲಿ ಜೆಡಿಎಸ್ ಅಭ್ಯರ್ಥಿ ಮೇಲೂರು ರವಿಕುಮಾರ್ ಮತ್ತು ಅವರ ಬೆಂಬಲಿಗರು ಚುನಾವಣಾ ಪ್ರಚಾರ ಕಾರ್ಯ ನಡೆಸಿ ಅವರು ಮಾತನಾಡಿದರು.

ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ರೈತರಿಗೆ ಅನುಕೂಲ ಆಗುವ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಪ್ರಮುಖವಾಗಿ 25 ಸಾವಿರ ಕೋಟಿ ರೂ.ಗಳ ರೈತರ ಸಾಲ ಮನ್ನಾ ಮಾಡಿದ್ದರು ಎಂದರು.

ಇನ್ನೊಮ್ಮೆ ರಾಜ್ಯದಲ್ಲಿ ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬಂದರೆ ಮಹಿಳಾ ಸ್ವ ಸಹಾಯ ಸಂಘಗಳ ಸಾಲ ಮನ್ನಾ ಸೇರಿದಂತೆ ರೈತರು, ಯುವಕರು, ಮಹಿಳೆಯರ ಸಬಲೀಕರಣಕ್ಕೆ ಅಗತ್ಯವಾದ ಎಲ್ಲ ಯೋಜನೆಗಳನ್ನು ರೂಪಿಸಲಿದ್ದಾರೆ.

ಅದಕ್ಕಾಗಿ ಅವರು ರೂಪಿಸಿರುವ ಪಂಚರತ್ನ ಯೋಜನೆಗಳನ್ನು ಕ್ಷೇತ್ರದ ಎಲ್ಲರ ಮನೆ ಮನೆಗೂ ತಲುಪಿಸಿ ಈ ಭಾರಿ ಜೆಡಿಎಸ್‌ಗೆ ಮತ ನೀಡಿ ಎಂದು ಮನವಿ ಮಾಡುತ್ತಿರುವುದಾಗಿ ತಿಳಿಸಿದರು.

ಜನತೆ ಈ ಬಾರಿಯ ಚುನಾವಣೆಯಲ್ಲಿ ಆಶೀರ್ವಾದ ಮಾಡುವ ಮೂಲಕ ಮತ್ತಷ್ಟು ಅಭಿವೃದ್ಧಿ ‌ಕಾರ್ಯಗಳಿಗೆ ಅವಕಾಶ ನೀಡಬೇಕು ಎಂದರು.


JDS Candidate Meluru Ravikumar Highlights Farmer-Friendly Governance in Sidlaghatta

Sidlagahtta : Meluru Ravikumar, a candidate from the Janata Dal (Secular) party (JDS) representing Sidlaghatta, emphasized the JDS government’s commitment to the welfare of farmers in the state. During a recent campaign in various city wards, Ravikumar highlighted the achievements of former Chief Minister Kumaraswamy, asserting that his government had implemented several beneficial schemes for farmers. Notably, loans totaling Rs. 25,000 crores were waived off for farmers under his leadership.

Ravikumar and his supporters rallied for votes, emphasizing the JDS party’s dedication to the overall empowerment of farmers, youth, and women. The party’s plans, known as the Pancharat plans, have been shared with all constituencies, with a specific focus on the loan waiver for women’s self-help societies. Ravikumar urged constituents to support the JDS and expressed gratitude for their blessings, emphasizing the importance of continuing developmental efforts.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!