Jangamakote, Sidlahgatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯಲ್ಲಿ ಶ್ರೀಕನಕ ಯುವ ಸೇನೆಯಿಂದ ಶ್ರೀಕನಕದಾಸರ 536ನೇ ಜಯಂತ್ಯುತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಜನಪದ ಕಲಾ ತಂಡಗಳೊಂದಿಗೆ ನಡೆದ ಕನಕನ ಪಲ್ಲಕಿಯ ಉತ್ಸವ ಕಣ್ಮನಸೆಳೆಯಿತು.
ಕೇರಳದ ಪ್ರಸಿದ್ದ ಕಾಳಿವೇಷಧಾರಿ ಕಲಾವಿದರು ನಡೆಸಿಕೊಟ್ಟ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮವು ನೋಡುಗರನ್ನು ಉಸಿರು ಬಿಗಿ ಹಿಡಿದು ನಿಂತಲ್ಲೇ ನಿಂತು ನೋಡುವಂತಿತ್ತು.
ಚಂಡೆವಾದ್ಯ, ಡೊಳ್ಳು ಕುಣಿತ ಮೊದಲಾದ ಜನಪದ ಕಲಾ ತಂಡಗಳು, ಕನಕದಾಸರನ್ನು ಭಜಿಸುವ ಹಾಡುಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ನಡೆದ ಉತ್ಸವವನ್ನು ಗ್ರಾಮಸ್ಥರು ಕಣ್ತುಂಬಿಕೊಂಡರು.
ಕುಲದಲ್ಲಿ ಕೀಳ್ಯಾವುದೊ ಹುಚ್ಚಪ್ಪ ಕುಲದಲ್ಲಿ ಮೇಲ್ಯಾವುದೋ ಹುಚ್ಚಪ್ಪ… ಹಾಡಿಗೆ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಕನಕ ಯುವ ಸೇನೆಯ ಪದಾಕಾರಿಗಳು, ಕುರುಬಕುಲ ಬಂಧುಗಳು, ಗ್ರಾಮಸ್ಥರು ಹಾಜರಿದ್ದರು.