J Venkatapura, Sidlaghatta : ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಭಾಗದ ಮನೆ ಮನೆಗೂ ನಲ್ಲಿ ಸಂಪರ್ಕದ ಮೂಲಕ ಶುದ್ದ ಕುಡಿಯುವ ನೀರು ಪೂರೈಸಲಿದ್ದು ಪ್ರತಿಯೊಬ್ಬರೂ ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಗ್ರಾ.ಪಂ ಅಧ್ಯಕ್ಷ ನಾಗೇಶ್ ಹೇಳಿದರು.
ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾ.ಪಂ ವ್ಯಾಪ್ತಿಯ ಮಿತ್ತನಹಳ್ಳಿ ಗ್ರಾಮದಲ್ಲಿ ಸೋಮವಾರ ಸುಮಾರು ೮೨.೪೨ ಲಕ್ಷ ವೆಚ್ಚದಲ್ಲಿ ಮನೆ ಮನೆಗೂ ನಲ್ಲಿ ಸಂಪರ್ಕದ ಮೂಲಕ ಶುದ್ದ ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ ಕಾಮಗಾರಿಯ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಶುದ್ದ ಕುಡಿಯುವ ನೀರು ಸಿಗದೇ ಗ್ರಾಮೀಣ ಭಾಗದ ಜನರು ಅನಾರೋಗ್ಯದಿಂದ ಬಳಲುವುದನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಅನುಧಾನಗಳಡಿ ಮನೆ ಮನೆಗೂ ಶುದ್ದ ಕುಡಿಯುವ ನೀರು ಪೂರೈಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಈ ಸಂದರ್ಬದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಇಂದಿರಾ ಶಿವಶಂಕರ್, ಗ್ರಾ.ಪಂ ಸದಸ್ಯೆ ನಯನಾ ಹರೀಶ್, ಪಿಡಿಓ ಕಾತ್ಯಾಯಿನಿ, ಮುಖಂಡರಾದ ಕೆಂಪೇಗೌಡ, ರಾಮಿರೆಡ್ಡಿ, ಮುನಿಆಂಜಿನಪ್ಪ, ಮುನಿಕೃಷ್ಣಪ್ಪ, ದೇವರಾಜ್, ಮುನಿಯಪ್ಪ, ನಟರಾಜ್, ಲಕ್ಷಿö್ಮನಾರಾಯಣ, ತಮ್ಮಣ್ಣ, ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.