H Cross, Sidlaghatta : ಉನ್ನತ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರದ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ. ಸುಧಾಕರ್ ಅವರು ಶುಕ್ರವಾರ ತಾಲ್ಲೂಕಿನ ಎಚ್. ಕ್ರಾಸ್ ಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಹೊಸಕೋಟೆಯಿಂದ ಚಿಂತಾಮಣಿಯವರೆಗಗಿನ ಮರುಡಾಂಬರೀಕರಣ ಮಾಡುವ ರಸ್ತೆಯನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಬಜೆಟ್ ನಲ್ಲಿ ದೇವನಹಳ್ಳಿಯಿಂದ ಕೋಲಾರದವರೆಗೆ ಚತುಷ್ಪಥ ರಸ್ತೆಯನ್ನು ಮಾಡಬೇಕೆಂದು ವಿನ್ಯಾಸ ಮಾಡಲಾಗಿದೆ. ತಾಲ್ಲೂಕಿನ ಎಚ್ ಕ್ರಾಸ್ ವೃತ್ತದಲ್ಲಿ ವಾಹನ ದಟ್ಟನೆಯಿಂದ ಟಾಫಿಕ್ ಜಾಮ್ ಆಗುತ್ತಿದೆ. ಈ ಜಂಕ್ಷನ್ ನಲ್ಲಿ ವಾಹನ ದಟ್ಟಣೆ ಆಗದ ಹಾಗೆ ಹೇಗೆಲ್ಲಾ ಅಭಿವೃದ್ಧಿಪಡಿಸಬಹುದು ಎಂದು ಚರ್ಚಿಸಿದ್ದೇವೆ. ಸಧ್ಯದಲ್ಲಿಯೇ ಕೆ.ಆರ್.ಡಿ.ಸಿ.ಎಲ್ ಗೆ ವಿನ್ಯಾಸವನ್ನು ಸಲ್ಲಿಸಲಿದ್ದಾರೆ. ಇಲ್ಲಿ ಕೇವಲ ಡಾಂಬರೀಕರಣವನ್ನಲ್ಲದೆ ರಸ್ತೆಯ ಏರಿಳಿತವನ್ನು ಸರಿಪಡಿಸುವ ಕೆಲಸ ಆಗಬೇಕಿದೆ. ಅದಕ್ಕಾಗಿ ಹೆಚ್ಚಿನ ಅನುದಾನದ ಅಗತ್ಯವಿದೆ. ಇದಲ್ಲದೆ ಟೋಲ್ ಪ್ಲಾಜಾ ಬಳಿ ಕೆಲವು ಬದಲಾವಣೆ ಮಾಡಬೇಕಿದೆ.
ಹೊಸಕೋಟೆಯಿಂದ ಚಿಂತಾಮಣಿಯವರೆಗೆ 38.5 ಕೋಟಿ ಅನುದಾನ ಸರ್ಕಾರ ಮರು ಡಾಂಬರೀಕರಣಕ್ಕಾಗಿ ಬಿಡುಗಡೆಯಾಗಿದೆ. ನ್ಯಾಯಾಲಯಗಳಲ್ಲಿ ಕಾನೂನು ತೊಡಕಿನಿಂದ ಕಾಮಗಾರಿ ತಡವಾಗಿತ್ತು. ಈಗ ವೆಲ್ಲ ನಿವಾರಣೆಯಾಗಿದೆ. ಹೆಚ್ಚಿನ ಅನುದಾನ ನೀಡುವಂತೆ ಲೋಕೊಪಯೋಗಿ ಸಚಿವರ ಗಮನಕ್ಕೆ ತರಲಾಗುವುದು. ಮಾಡುವಂತಹ ಕೆಲಸ ಸರಿಯಾದ ರೀತಿಯಲ್ಲಿ ಹಾಗೂ ಗುಣ ಮಟ್ಟದ ರಸ್ತೆಯಾಗಬೇಕೆಂಬ್ಬ ಉದ್ದೇಶದಿಂದ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಈ ಭಾಗದ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಮುಖ್ಯ ಎಂಜಿನಿಯರ್ ವಸಂತ್, ತಹಶೀಲ್ದಾರ್ ಬಿ.ಎನ್ ಸ್ವಾಮಿ, ಸರ್ಕಲ್ ಇನ್ ಸ್ಪೆಕ್ಟರ್ ಶ್ರೀನಿವಾಸ ಹಾಜರಿದ್ದರು.