ಡಾ.ಬಿ.ಆರ್.ಅಂಬೇಡ್ಕರ್ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಮೋಟರ್ ಪಂಪ್ ಪಡೆದಿರುವ ಎಲ್ಲಾ ಫಲಾನುಭವಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಭಲರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ನಿಗಮದಿಂದ ಗಂಗಾಕಲ್ಯಾಣ ಯೋಜನೆಯಡಿ ಆದಿಜಾಂಬವಂತ ಜನಾಂಗದ 5 ಫಲಾನುಭವಿಗಳಿಗೆ ಮೋಟರ್ ಪಂಪ್ ಹಾಗೂ ಅಂಗಿಕಲರಿಗೆ ಮೂರುಚಕ್ರ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ನಿಗಮದ ಜಿಲ್ಲಾ ವ್ಯವಸ್ಥಾಪಕ ಆರ್.ಕೆ.ಮಹದೇವಸ್ವಾಮಿ ಮಾತನಾಡಿ, ಮುಂದಿನ ವಾರ ಆದಿಜಾಂಬವ ಅಭಿವೃದ್ಧಿ ನಿಗಮದಿಂದ ಭಾಕಿ ಇರುವ 9 ಮಂದಿ ಫಲಾನುಭವಿಗಳಿಗೆ ಪಂಪು ಮೋಟರ್ ವಿತರಣೆ ಮಾಡುವುದು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕೊಳವೆ ಬಾವಿ ಕೊರೆಯುವುದು ಮತ್ತು ಪೂರಕ ಸಾಮಾಗ್ರಿಗಳನ್ನು ನೀಡುವುದು ವಿದ್ಯುತ್‌ಶಕ್ತಿ ನೀಡುವುದು ಒಳಗೊಂಡಂತೆ ಗಂಗಾಕಲ್ಯಾಣ ಯೋಜನೆಯಡಿ ಒಬ್ಬ ಫಲಾನುಭವಿಗೆ ನಾಲ್ಕು ಲಕ್ಷದ ವರೆವಿಗೂ ನೀಡಲಾಗುತ್ತದೆ. ಮೂರೂವರೆ ಲಕ್ಷ ಸಹಾಯಧನ ಮತ್ತು 50 ಸಾವಿರ ಸಾಲ ನೀಡುವುದು ಯೋಜನೆ ಮುಖ್ಯ ಉದ್ದೇಶವಾಗಿದೆ ಎಂದರು.
ಕೋಚಿಮುಲ್ ಹಾಗೂ ಕೆಎಂ.ಎಫ್ ನಿರ್ದೇಶಕ ಆರ್.ಶ್ರೀನಿವಾಸ್, ಡಾ.ಬಿ.ಆರ್.ಅಂಬೇಡ್ಕರ್ ನಿಗಮದ ತಾಲ್ಲೂಕು ಆಭಿವೃದ್ದಿ ಅಧಿಕಾರಿ ಬಿ.ವಾಸವಿ, ವೆಂಕಟರಾಮ್, ರಾಧಾರಾಮ್ ಹಾಜರಿದ್ದರು.