ವಿಶ್ವೇಶ್ವರಯ್ಯ ರವರಂತಹ ದಾರ್ಶನಿಕರು ಹುಟ್ಟಿದ ನಾಡಿನಲ್ಲಿ ಜನಿಸಿದ ನಾವೇ ಪುಣ್ಯವಂತರು. ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಅದೆಷ್ಟೋ ಮಂದಿ ಸಾರ್ಥಕ ಜೀವನವನ್ನು ನಡೆಸುತ್ತಿದ್ದು, ಅವರಿಂದ ಪ್ರೇರಿತರಾಗಬೇಕು ಎಂದು ಶ್ರೀ ಸಾಯಿನಾಥ ಜ್ಞಾನ ಮಂದಿರದ ಮುಖ್ಯಸ್ಥ ಎಂ.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀ ಸಾಯಿನಾಥ ಜ್ಞಾನ ಮಂದಿರದಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಹಾಗೂ ಸಾಯಿನಾಥ ಜ್ಞಾನ ಮಂದಿರ ಇವರ ಸಹಯೋಗದಲ್ಲಿ 65 ನೇ ಕನ್ನಡ ರಾಜ್ಯೋತ್ಸವ, ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸುವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಧಕರನ್ನು ಗುರುತಿಸಿ ಗೌರವಿಸುವುದು ಉತ್ತಮ ಸಂಸ್ಕಾರ. ಹೆತ್ತ ತಾಯಿಯನ್ನು ಮತ್ತು ಬದುಕು ಕೊಟ್ಟ ನಾಡನ್ನು ನಾವು ಎಂದೂ ಮರೆಯಬಾರದು. ಸಮಾಜದ ಋಣವನ್ನು ನಾವು ತೀರಿಸಲೇಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಎಂ.ಎಸ್.ಮಹಿಮಾ, ಆರ್.ಅನುಷ, ಜನನಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಎಸ್.ವಿ.ಮಾಲತಿ, ಎಸ್.ದಾವೂದ್ ಪಾಷಾ, ಮನೋರ್ ಮಣಿ, ನಾರಾಯಣ ಸ್ವಾಮಿ, ನಂಜಪ್ಪ ರೆಡ್ಡಿ, ಸುರೇಶ್, ಮುನಿನಂಜಪ್ಪ, ಮಂಜುನಾಥ, ಮುನಿರಾಜು ಅವರನ್ನು ಸನ್ಮಾನಿಸಲಾಯಿತು.
ವಸಾಪ ಗೌರವಾಧ್ಯಕ್ಷ ಕೆ.ಯೋಗಾನಂದ, ರಾಜ್ಯ ರೈತ ಸಂಘದ ಭಕ್ತರಹಳ್ಳಿ ಬೈರೇಗೌಡ, ದೇವರಾಜ್, ಗಜೇಂದ್ರ, ವೆಂಕಟೇಶಪ್ಪ, ನರಸಿಂಹರಾಜು, ಮಂಜುನಾಥ, ನಾರಾಯಣ ಸ್ವಾಮಿ, ಸುರೇಂದ್ರ ಬಾಬು ಹಾಜರಿದ್ದರು.