Ganjigunte, Sidlaghatta : ತಾಲ್ಲೂಕಿನ ಗಂಜಿಗುಂಟೆ ಹಾಗೂ ತಿಮ್ಮನಾಯಕನಹಳ್ಳಿ ವ್ಯಾಪ್ತಿಯ ರೈತರಿಗೆ ಅನುಕೂಲವಾಗುವ ಹಾಗೆ ಗೊಬ್ಬರ, ಬಿತ್ತನೆ ಬೀಜ ಮತ್ತು ಪಶು ಆಹಾರ ಲಭ್ಯವಾಗುವ ಹಾಗೆ ರೈತ ಉತ್ಪಾದಕ ಕಂಪನಿಯವರು ಮಳಿಗೆಯನ್ನು ತೆರೆದಿರುವುದು ಶ್ಲಾಘನೀಯ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ – ಚಿಂತಾಮಣಿ ಮುಖ್ಯ ರಸ್ತೆಯ 11 ನೇ ಮೈಲಿಯಲ್ಲಿ ಶ್ರೀ ಗಂಗಾಭವಾನಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯಿಂದ ರೈತರಿಗೆ ಉಪಯುಕ್ತ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ರೈತರಿಗೆ ಅಗತ್ಯ ಉತ್ಪನ್ನಗಳು ಸಿಗುವಂತಾಗುವುದು ಹಾಗೂ ರೈತರು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿಕೊಡುವ ಕೆಲಸವನ್ನು ರೈತ ಉತ್ಪಾದಕರ ಕಂಪನಿಯಿಂದ ಮಾಡುತ್ತಿರುವುದು, ಈ ಭಾಗದ ರೈತರಿಗೆ ಅನುಕೂಲವಾಗುತ್ತಿದೆ. ಇದು ಇನ್ನಷ್ಟು ವ್ಯಾಪಕವಾಗಲಿ ಎಂದು ಹೇಳಿದರು.
ಶ್ರೀ ಗಂಗಾಭವಾನಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ವಿಜಯ ಬಾವರೆಡ್ಡಿ, ಉಪಾಧ್ಯಕ್ಷ ಆಂಜನೇಯರೆಡ್ಡಿ, ನಿರ್ದೇಶಕರಾದ ಟಿ.ಕೆ.ಅರುಣ್ ಕುಮಾರ್, ಲಕ್ಕೇನಹಳ್ಳಿ ವೆಂಕಟೇಶ್, ಮಂಜುನಾಥ್, ವೆಂಕಟೇಶ್, ಶಿವಣ್ಣ, ಶಿವಾರೆಡ್ಡಿ, ಕೋನಪ್ಪರೆಡ್ಡಿ, ನಾರಾಯಣಸ್ವಾಮಿ, ರವಿಕುಮಾರ್, ಗಂಜಿಗುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ದೇವಪ್ಪ, ಬೈರಾರೆಡ್ಡಿ, ಗ್ರಾಮಸ್ಥರಾದ ಕೃಷ್ಣಪ್ಪ, ಶಿವಕುಮಾರ್, ಮುನಿಯಪ್ಪ, ಬಚ್ಚರೆಡ್ಡಿ, ಸಿ.ಇ.ಒ ಮಧು ಹಾಜರಿದ್ದರು.