Jangamakote, Sidlaghatta : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಎಚ್ ಕ್ರಾಸ್ ಮತ್ತು ಜಂಗಮಕೋಟೆ ಚೆಕ್ ಪೋಸ್ಟ್ ಗಳಿಗೆ ಚುನಾವಣೆ ಅಧಿಕಾರಿ ಜಾವೀದಾ ನಸೀಮಾ ಖಾನಂ ಭೇಟಿ ನೀಡಿ ಪರಿಶೀಲಿಸಿದರು.
ಇದೇ ವೇಳೆಯಲ್ಲಿ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿಯ ಬಸವಪಟ್ಟಣ, ಕುಂಬಿಗಾನಳ್ಳಿ ಗ್ರಾಮ ಪಂಚಾಯಿತಿಯ ಅಮರಾವತಿ, ಜಂಗಮಕೋಟೆ ಹಾಗೂ ಹೊಸಪೇಟ್ ಗ್ರಾಮದಲ್ಲಿನ ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಿ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿ ಚುನಾವಣೆಯ ವೇಳೆಯ ವರೆಗೆ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸೂಚಿಸಿದರು.
ಚೆಕ್ ಪೋಸ್ಟ್ ಗಳಲ್ಲಿ ಬರುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಬೇಕು ಎಂದು ತಾಕೀತು ಮಾಡಿದ ಚುನಾವಣಾಧಿಕಾರಿಗಳು ಯಾವುದೇ ರೀತಿಯ ಲೋಪ ಇಲ್ಲದಂತೆ ಚುನಾವಣಾ ಸಿಬ್ಬಂದಿ ಕಾರ್ಯನಿರ್ವಹಿಸಬೇಕು ಚುನಾವಣಾ ಅಕ್ರಮಗಳು ಸಂಭವಿಸಿದರೆ ಕೂಡಲೇ ಮಾಹಿತಿ ನೀಡಬೇಕೆಂದರು.
ಈ ಸಂದರ್ಭದಲ್ಲಿ ಎಂಸಿಸಿ ನೋಡಲ ಅಧಿಕಾರಿ ಹಾಗೂ ಸ್ವೀಪ್ ಸಮಿತಿಯ ನೋಡಲು ಅಧಿಕಾರಿ ಮುನಿರಾಜು, ಶ್ರೀನಿವಾಸ್, ಮಳಮಾಚನಹಳ್ಳಿ ಗ್ರಾಮ ಪಂಚಾಯತಿಯ ಪಿಡಿಓ ಶೈಲಾ, ಕಾರ್ಯದರ್ಶಿ ರಾಜಣ್ಣ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಪ್ರಶಾಂತ್ ಜಂಗಮಕೋಟೆ ಗ್ರಾಮ ಪಂಚಾಯಿತಿಯ ಪಿಡಿಒ ಶಿವಣ್ಣ ಹೊಸಪೇಟೆ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಮಹಾಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು
Election Officer Inspects Polling Stations in Sidlaghatta Assembly Constituency
Jangamakote, Sidlaghatta : Election Officer Javeeda Naseema Khanam paid a visit to the H Cross and Jangamkote check posts located in the Sidlaghatta assembly constituency for inspection purposes.
During the visit, Khanam inspected the polling stations in Basavapatna of Malamachanahalli Gram Panchayat, Amaravati, Jangamakote, and Hospet of Kumbiganalli Gram Panchayat. Khanam checked the basic facilities and suggested that they should be provided in all polling stations before the elections.
Khanam also issued a warning that all vehicles arriving at the check posts should undergo thorough checks. The election staff should remain vigilant and report any irregularities immediately.
In attendance at the occasion were MCC Nodal Officer and Sweep Committee Officer Muniraju, Srinivas, Malamachanahalli Gram Panchayat PDO Shaila, Secretary Rajanna, Kumbiganahalli Gram Panchayat PDO Prashanth, Jangamakote Gram Panchayat PDO Shivanna, Hospet Gram Panchayat Secretary Mahalingappa, and others.