Sidlaghatta : ಜಿಲ್ಲಾಮಟ್ಟದ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಶಿಡ್ಲಘಟ್ಟದ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ನ ವಿದ್ಯಾರ್ಥಿಗಳು ಹಲವು ಪದಕಗಳನ್ನು ಗೆದ್ದು ಬಂದಿದ್ದಾರೆ.
ಜಿಲ್ಲೆಯ ಗೌರಿಬಿದನೂರಿನ ನ್ಯಾಷನಲ್ ಕಾಲೇಜ್ ಆವರಣದಲ್ಲಿ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ಆಫ್ ಚಿಕ್ಕಬಳ್ಳಾಪುರ ಡಿಸ್ಟ್ರಿಕ್ಟ್ ಅವರು ಆಯೋಜಿಸಿದ್ದ ಜಿಲ್ಲಾಮಟ್ಟದ ಸ್ಕೇಟಿಂಗ್ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದರು.
ಐದು ವರ್ಷದ 500 ಮೀಟರ್ ಪಂದ್ಯಾವಳಿಯಲ್ಲಿ ಹಿಮಂತ್(ಪ್ರಥಮ), ಎಂಟು ವರ್ಷದ 500 ಮೀಟರ್ ಪಂದ್ಯಾವಳಿಯಲ್ಲಿ ನಿರಂಜನ್(ಪ್ರಥಮ), ಹತ್ತು ವರ್ಷದ 500 ಮೀಟರ್ ಪಂದ್ಯಾವಳಿಯಲ್ಲಿ ಮಿಥುನ್ (ಪ್ರಥಮ), ಹತ್ತು ವರ್ಷದ ಇನ್ ಲೈನ್ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ಅಖಿಲೇಶ್ (ಪ್ರಥಮ), 10 ವರ್ಷದ ಹೆಣ್ಣು ಮಕ್ಕಳ 500 ಮೀಟರ್ ಪಂದ್ಯಾವಳಿಯಲ್ಲಿ ವರುಣಶ್ರೀ (ಪ್ರಥಮ), ಶಾನ್ವಿತ ಹಾಗೂ ರಿತ್ವಿಕ್ ಸಹ ಈ ಪಂದ್ಯಾವಳಿಯಲ್ಲಿ ಭಾಗವಹಿಸಿ ಪದಕಗಳನ್ನು ಪಡೆದಿರುವುದಾಗಿ ಸ್ಕೇಟಿಂಗ್ ಶಿಕ್ಷಕ ಅರುಣ್ ಕುಮಾರ್ ತಿಳಿಸಿದ್ದಾರೆ.