Sidlaghatta : ಮೂಢನಂಬಿಕೆಗಳಿಗೆ ಕಟ್ಟು ಬಿದ್ದು ಬಾಲ್ಯವಿವಾಹ ಮಾಡುವುದು ಮತ್ತು ಅಪ್ರಾಪ್ತ ಮಕ್ಕಳನ್ನು ಕೆಲಸಗಳಿಗಾಗಿ ಬಳಿಸಿ ಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ನಗರ ಠಾಣೆ ಅಪರಾಧ ವಿಭಾಗದ ಪಿಎಸ್ಐ ಪದ್ಮಾವತಿ ತಿಳಿಸಿದರು.
ನಗರದ ಶ್ರೀ ವಾಸವಿ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಅಪರಾಧ ಮತ್ತು ಕಾನೂನಿನ ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಬಾಲಕಿಯರ ಮೇಲೆ ಲೈಂಗಿಕ ಕಿರುಕಳ ಅಪ್ರಾಪ್ತ ಬಾಲಕಿಯರ ಮೇಲಿನ ದೌರ್ಜನ್ಯಗಳನ್ನು ಮಾಡುವುದು ಅಪರಾಧವಾಗಿದೆ. ಫೋಕ್ಸೋಕಾಯ್ದೆಯಡಿ ಬಂಧಿಸಿ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೇಳಿದರು.
ಕಾನೂನು ವ್ಯವಸ್ಥೆ ಯ ಪಿಎಸ್ಐ ವೇಣುಗೋಪಾಲ್ ಮಾತನಾಡಿ 18 ವರ್ಷಗಳ ಒಳಗಿರುವ ಮಕ್ಕಳು ವಾಹನ ಚಲಾಯಿಸುವ ಹಾಗಿಲ್ಲ. ಆ ರೀತಿ ಆದಲ್ಲಿ ಅಪ್ರಾಪ್ತ ವಯಸ್ಕ ಮಕ್ಕಳಿಗೆ ಹಾಗೂ ಅವರ ಪೋಷಕ ರಿಗೂ ದಂಡ ವಿಧಿಸಲಾಗುತ್ತದೆ ಎಂದರು. 10 ಅಪಘಾತ ಗಳಲ್ಲಿ 8 ಅಪಘಾತಗಳು ಅಪ್ರಾಪ್ತರಿಂದಲೇ ಆಗತ್ತಿದೆ. ರಸ್ತೆ ಸುರಕ್ಷಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕೆಂದು ತಿಳಿಸಿದರು.
ಕಡ್ಡಾಯವಾಗಿ ವಾಹನಗಳ ವಿಮೆ ಮಾಡಿಸಬೇಕು. ಆನ್ ಲೈನ್ ಹಣಕಾಸು ಮಾಡುವಾಗ ಎಚ್ಚರ ವಹಿಸಬೇಕು. ನಿಮ್ಮ ಹಣ ಬೇರೆ ಯಾರಿಗಾದರೂ ಹೋದಲ್ಲಿ ಒಂದು ಗಂಟೆಯ ಒಳಗಾಗಿ ಮರು ಪಾವತಿಸಲು ಸೂಕ್ತ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ತಿಳಿಸಿ, ಅಪರಿಚಿತ ರೊಂದಿಗೆ ಯಾವುದೇ ವ್ಯವಹಾರ ಮಾಡಬಾರದು ಎಂದರು.
ಮೊಬೈಲ್ ಫೋನ್ ದುರ್ಬಳಕೆ ಮಾಡಬಾರದು. ಶಾಲೆ ಸಮಯದಲ್ಲಿ ಮೊಬೈಲ್ ಬಳಿಕೆ ಅಪರಾಧ. ನಿಮಗೆ ಅಥವ ನಿಮ್ಮ ಪೋಷಕರಿಗೆ ತೊಂದರೆಯಾದಲ್ಲಿ ಪೊಲೀಸ್ ಸಹಾಯಕ್ಕೆ ಬರುವರು. ಪೊಲೀಸ್ ಠಾಣೆಗಳ, ಅಗ್ನಿ ಶಾಮಕದಳ ಮತ್ತು ರಾಷ್ಟ್ರೀಯ ಅಪರಾಧ ವಿರೋಧಿ ದಳಗಳ ದೂರವಾಣಿ ಸಂಖ್ಯೆ ಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಮಕ್ಕಳು ಸಮಾಜಕ್ಕೆ ದಾರಿ ದೀಪಗಾಳಾಗಿರಬೇಕು ಪ್ರತಿ ವಿದ್ಯಾರ್ಥಿ ಶಿಸ್ತನ್ನು ಮೈಗೂಡಿಸಿಕೊಂಡು ನಡೆಯ ಬೇಕು ಎಂದರು. ಶಾಲೆ ಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಶಾಲೆಯ ಕಾರ್ಯದರ್ಶಿ ರೂಪಸಿರಮೇಶ್, ಮುಖ್ಯೋಪಾಧ್ಯಾಯ ಶಿವಕುಮಾರ್, ರವಿಕುಮಾರ್, ಸಂಸ್ಥೆಯ ಉಪಾಧ್ಯಕ್ಷ ಎನ್. ಆರ್. ಮಹೇಶ್ ಕುಮಾರ್ ಹಾಜರಿದ್ದರು.