ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ರಾಗಿಮಾಕಲಹಳ್ಳಿಯಲ್ಲಿ ಕೋವಿಡ್ ಸೋಂಕಿತರು, ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು ಹಾಗೂ ಬಡವರ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಣೆ ಮಾಡಿ ಮಹಾಯುವರಂಗ ಸಂಘದ ಅನಿವಾಸಿ ಭಾರತೀಯ ಸಮಾಜ ಸೇವಕ ರೋನಾಲ್ಡೊ ಕೊಲಾಸೋ ಅವರ ಆಪ್ತ ಸಹಾಯಕ ಸಾದಹಳ್ಳಿ ನಾಗರಾಜ ಪೂಜಾರಿ ಮಾತನಾಡಿದರು.
ಕೊರೊನಾ 2 ನೇ ಅಲೆಯಲ್ಲಿ ಜನಜೀವನ ಸಾಕಷ್ಟು ಹದಗೆಟ್ಟಿದ್ದು, ಬಡವರು, ಮಧ್ಯಮ ವರ್ಗದವರು, ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಅವರ ನೆರವಿಗೆ ಧಾವಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬಡವರಿಗೆ ದಾನ ಧಾರ್ಮ ಮಾಡುವಾಗ ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ, ಸಮಾಧಾನ ಸಿಗುತ್ತದೆ ಎಂದು ಅವರು ಹೇಳಿದರು.
ಮಹಾಯುವ ರಂಗ ಸಂಘಟನೆಯು ಎಲ್ಲಾ ಜಾತಿ ವರ್ಗದವರ ಧ್ವನಿಯಾಗಿ ಕೆಲಸ ಮಾಡಲಿದ್ದು, ಪ್ರತಿಯೊಂದು ಹಳ್ಳಿಯಲ್ಲಿ ತಂಡಗಳನ್ನು ರಚನೆ ಮಾಡಿ, ಹಳ್ಳಿಗಳಲ್ಲಿ ಇರುವ ಸಮಸ್ಯೆಗಳನ್ನು ಗುರ್ತಿಸಿ, ಸಂಘಟನೆಯಿಂದಲೇ ಪರಿಹಾರ ನೀಡುವಂತಹ ಕೆಲಸ ಮಾಡಲಿಕ್ಕೆ ಕಟ್ಟಲಾಗಿದೆ. ಇದು ಯಾವುದೇ ರೀತಿ ಇತರೆ ಸಂಘಟನೆಗಳಂತೆ ಅಲ್ಲ. ಇದು ವಿಭಿನ್ನವಾಗಿದ್ದು, ಹಳ್ಳಿಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಗುರ್ತಿಸಿ ಅವರ ನೆರವಿಗೆ ಧಾವಿಸಲಾಗುತ್ತದೆ. ಯಾರ ಶಿಫಾರಸ್ಸು ಅಗತ್ಯವಿರುವುದಿಲ್ಲ. ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿನ ವಾರಿಯರ್ಸ್ ಗಳಿಗೆ ಕಿಟ್ ವಿತರಣೆ ಮಾಡಿದ್ದು, ಶಿಡ್ಲಘಟ್ಟ ತಾಲ್ಲೂಕಿನಲ್ಲೂ ಆರಂಭಿಸಿದ್ದೇವೆ ಎಂದರು.
ಸಂಘದ ನಾಗರಾಜ್ ಮಾತನಾಡಿ, ಕೋವಿಡ್ ಸಂಕಷ್ಟದ ಸಮಯದಲ್ಲಿ ಸೊಂಕಿತರು ಹಾಗೂ ಅವರ ಕುಟುಂಬಗಳಿಗೆ ಧೈರ್ಯ ತುಂಬಿಸುವಂತಹ ಕಾರ್ಯವನ್ನು ಮಹಾಯುವರಂಗ ಮಾಡುತ್ತಿದೆ. ಕೊರೊನಾ ಸೋಂಕಿನ ವಿರುದ್ಧ ತಮ್ಮ ಪ್ರಾಣಗಳನ್ನೂ ಲೆಕ್ಕಸಿದೇ ನಿರಂತರವಾಗಿ ಹೋರಾಟ ಮಾಡಿರುವ ವಾರಿಯರ್ಸ್ ಗಳನ್ನು ಅಭಿನಂದಿಸಿ ಅವರನ್ನು ಆತ್ಮಸ್ಥೈರ್ಯ ತುಂಬಿಸಲಾಗುತ್ತಿದ್ದು, ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.
ಮುಖಂಡರಾದ ಶ್ರೀನಿವಾಸ್, ಮಹೇಶ್, ಶಿವಕುಮಾರ್, ದೇವನಹಳ್ಳಿ ಪ್ರಸನ್ನ, ನಾಗೇಶ್, ಹಾಗೂ ಮೇಲೂರು ಗ್ರಾಮದ ಯುವಕರು ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi