Sidlaghatta : ಬಿಜೆಪಿಯ ಡ್ಯಾಮ್ ಒಡೆದು ಹೋಗಿದೆ. ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ಉಳಿದಿರೋದೊಂದೆ ಕೈ. ದಯವಿಟ್ಟು ನಮಗೆ ಅವಕಾಶ ಮಾಡಿಕೊಡಿ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ 150 ಸೀಟ್ ಬರುವುದು ಶತಸ್ಸಿದ್ದ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶಿಡ್ಲಘಟ್ಟ ನಗರದ ಸಾರಿಗೆ ಬಸ್ ನಿಲ್ದಾಣದಿಂದ ಮಂಗಳವಾರ ಕೋಟೆ ವೃತ್ತದವರೆಗೂ ಪ್ರಜಾಧ್ವನಿ ಯಾತ್ರೆಯ ಬಸ್‌ನಲ್ಲಿ ರೋಡ್ ಶೋ ನಡೆಸಿದ ಅವರು ಕೋಟೆ ವೃತ್ತದಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜೀವ್‌ಗೌಡ ಅವರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.
ಬಿಜೆಪಿಯ ಕತೆ ಮುಗಿದಿದೆ. ದಳದ ತೆನೆ ಕಮರಿದೆ. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಕಾಂಗ್ರೆಸ್ ಕಾರ್ಯಕರ್ತರಷ್ಟೆ ಅಲ್ಲ ಬಿಜೆಪಿ ಹಾಗೂ ಜೆಡಿಎಸ್‌ನ ಕಾರ್ಯಕರ್ತರಲ್ಲಿ ನಾನು ಕೈ ಜೋಡಿಸಿ ಕೇಳಿಕೊಳ್ಳುತ್ತೇನೆಂದು ಹೇಳಿದರು.
ಕಮಲ ಕೆರೆಯಲ್ಲಿರಬೇಕು, ತೆನೆ ಹೊಲದಲ್ಲಿರಬೇಕು, ದಾನ ಧರ್ಮ ಮಾಡುವ ಕೈ ಮಾತ್ರ ಸದಾ ಜನರ ನಡುವೆ ಇರಬೇಕು ಹಾಗಾಗಿ ಎಲ್ಲರೂ ಹಸ್ತದ ಗುರ್ತಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜೀವ್‌ಗೌಡರು ಯುವಕರು, ದಾನ ಧರ್ಮದಲ್ಲಿ ಎತ್ತಿದ ಕೈ, ಈ ಕ್ಷೇತ್ರದ ಹಿರಿಯ ರಾಜಕಾರಣಿಗಳಾದ ಕೇಂದ್ರದ ಮಾಜಿ ಮಂತ್ರಿ ಕೆ.ಎಚ್.ಮುನಿಯಪ್ಪ, ಶಾಸಕ ವಿ.ಮುನಿಯಪ್ಪ ಹಾಗೂ ನಾನು ಸೇರಿ ರಾಜೀವ್‌ಗೌಡರನ್ನು ಅಭ್ಯರ್ಥಿಯನ್ನಾಗಿಸಿದ್ದೇವೆ ಎಂದರು.
ಈ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ನಿಂತಿದ್ದೇನೆಂದು ಭಾವಿಸಿ ರಾಜೀವ್‌ಗೌಡರಿಗೆ ಮತ ನೀಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿಗೆ ವಿರುದ್ದವಾಗಿ ಬಂಡಾಯವಾಗಿ ಸ್ಪರ್ಧಿಸಿರುವ ಯಾರೇ ಆಗಲಿ ನನಗೆ ಅವರು ಇವರು ಬೆಂಬಲಿಸುತ್ತಿದ್ಧಾರೆ ಎಂದು ಹೇಳಿಕೊಳ್ಳುವಂತಿಲ್ಲ. ಯಾರೊಬ್ಬರೂ ಅವರ ಬೆಂಬಲಿಕ್ಕಲ್ಲ ಬೆಂಬಲಿಸುವಂತೆಯೂ ಇಲ್ಲ ಎಂದು ಹೆಸರು ಹೇಳದೆ ಬಂಡಾಯವಾಗಿ ಸ್ಪರ್ಧಿಸಿರುವ ಪುಟ್ಟು ಆಂಜಿನಪ್ಪ ಅವರಿಗೆ ತಿರುಗೇಟು ನೀಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲನೇ ಸಚಿವ ಸಂಪುಟದಲ್ಲಿ ನಾವು ಪ್ರಣಾಳಿಕೆಯಲ್ಲಿ ಮಾಡಿರುವ ವಾಗ್ದಾನಗಳಳನ್ನು ಈಡೇರಿಸುವ ಕೆಲಸವನ್ನು ಮಾಡುತ್ತೇವೆ ಎಂದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಸ್ಪರ್ಧೆ ಮಾಡಿ, ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದುಕೊಂಡಿರುವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಆತನೊಂದಿಗೆ ಗುರುತಿಸಿಕೊಂಡಿರುವ ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕೆಂದು ಮನವಿ ಮಾಡುತ್ತೇನೆ ಎಂದರು.
ಸಾರಿಗೆ ಬಸ್ ನಿಲ್ದಾಣದಿಂದ ಕೋಟೆ ವೃತ್ತದವರೆಗಿನ ರೋಡ್‌ಶೋನಲ್ಲಿ ಕೀಲು ಕುದುರೆ, ಗಾರುಡಿ ಗೊಂಬೆ, ಟಮಟೆ, ಕುಂಭ ಕಳಶಗಳು ಮೆರವಣಿಗೆಗೆ ಸೊಬಗು ನೀಡಿದ್ದವು. ಕಾಂಗ್ರೆಸ್‌ನ ಧ್ವಜ, ಬಾವುಟಗಳು ರಾರಾಜಿಸಿದವು, ಕೋಟೆ ವೃತ್ತದಲ್ಲಿ ಕ್ರೇನ್ ಮೂಲಕ ಬೃಹತ್ ಹೂವಿನ ಮತ್ತು ಸೇಬಿನ ಹಾರ ಹಾಕಿ ಬರ ಮಾಡಿಕೊಳ್ಳಲಾಯಿತು.
ಕಾಂಗ್ರೆಸ್ ಅಭ್ಯರ್ಥಿ ರಾಜೀವ್‌ಗೌಡ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ವಿ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೇಶವರೆಡ್ಡಿ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
Congress Party Gains Momentum as DK Shivakumar Leads Roadshow in Sidlaghatta
Sidlaghatta : In an energetic display of support, Karnataka Pradesh Congress Committee (KPCC) President D.K. Shivakumar led a spirited roadshow on Tuesday, rallying Congress workers in Sidlaghatta constituency. Shivakumar’s presence highlighted the party’s determination to secure victory in the upcoming elections, as he confidently declared that the Congress party was set to win 150 seats without a doubt.
Accompanied by a throng of Congress workers, Shivakumar embarked on the Prajadhwani Yatra bus, commencing the roadshow from Shidlaghatta city’s transport bus station, culminating at Kote Circle. Addressing the enthusiastic crowd, he passionately advocated for the Congress candidate Rajiv Gowda, vying for the Shidlaghatta Assembly Constituency.
With a resolute tone, Shivakumar proclaimed the decline of the Bharatiya Janata Party (BJP) and emphasized the importance of unity. He urged not only Congress workers but also BJP and JDS (Janata Dal Secular) supporters to vote for the hand symbol of the Congress party, symbolizing their commitment to charity and serving the people.
Rajiv Gowda, the youth candidate of the Congress party, was specifically highlighted by Shivakumar as a beacon of hope and philanthropy. Shivakumar, along with esteemed politicians such as former Union Minister KH Muniyappa and MLA V. Muniyappa, expressed their endorsement of Gowda’s candidacy, further solidifying his standing within the party.
Shivakumar warned against supporting any candidate who had rebelled against the Congress party, stressing the importance of loyalty and unity within its ranks.
Promising to fulfill the party’s manifesto, Shivakumar assured that the Congress government, once in power, would deliver on their commitments. Those who had contested against the official Congress candidate in the Shidlaghatta assembly constituency, opting to run as rebel candidates, were subsequently expelled from the party.
The roadshow showcased a vibrant display of support, featuring traditional cultural elements such as Keelu Kudre, Garudi Gombe, Tamate, and Kumbha Kalashas. The procession was adorned with Congress flags, while a monumental garland of flowers and apples was raised by a crane in the fort circle.
Joining Shivakumar in the roadshow were Rajiv Gowda, former Union Minister KH Muniyappa, MLA V. Muniyappa, District Congress Committee President Keshavareddy, and other prominent leaders of the Congress party.
As the election fervor intensifies in Shidlaghatta constituency, the Congress party seeks to capitalize on this momentum, rallying supporters under the guidance of DK Shivakumar and their charismatic candidate, Rajiv Gowda.