ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕರಡು ಮತದಾರರ ಪಟ್ಟಿಯನ್ನು ತಾಲ್ಲೂಕು ಕಚೇರಿಯಲ್ಲಿ ಪ್ರಚುರಪಡಿಸಿದ್ದು, ಏನೇ ಹಕ್ಕು ಆಕ್ಷೇಪಣೆಗಳಿದ್ದರೂ ನಿಗದಿತ ನಮೂನೆಯ ಮೂಲಕ ಕಚೇರಿಗೆ ಸಲ್ಲಿಸಬಹುದು ಎಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಾರ್ವತ್ರಿಕ ಚುನಾವಣೆ ಸಂಬಂಧ ಮತದಾರರ ಪಟ್ಟಿಯನ್ನು ತಯಾರಿಸುವ ಸಲುವಾಗಿ ಉಲ್ಲೇಖಿತ ಪತ್ರದಂತೆ ಜಿಲ್ಲಾಧಿಕಾರಿ ಅವರು ವೇಳಾಪಟ್ಟಿಯನ್ನು ಹೊರಡಿಸಿದ್ದಾರೆ. ಅದರಂತೆ ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಶಿಡ್ಲಘಟ್ಟ ತಾಲ್ಲೂಕಿನ ಎಲ್ಲಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ತಯಾರಿಸಲಾಗಿದ್ದು, ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಹಾಗೂ ಕಚೇರಿಯಲ್ಲಿ ಮಾರ್ಚ್ 14 ರಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕರಡು ಮತದಾರರ ಪಟ್ಟಿಗಳನ್ನು ಪ್ರಚುರಪಡಿಸಲಾಗಿರುತ್ತದೆ ಹಾಗೂ ಮತದಾರರ ಪಟ್ಟಿಯನ್ನು ಸಾರ್ವಜನಿಕ ವೀಕ್ಷಣಗೆ ಇಡಲಾಗಿರುತ್ತದೆ. ಮತದಾರರ ಪಟ್ಟಿಯಲ್ಲಿ ಯಾವುದೇ ನಮೂದಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣಿಗಳು (ಸೇರ್ಪಡೆಗಳು, ಇಡತಕ್ಕವುಗಳು ಮತ್ತು ತಿದ್ದುಪಡಿಗಳು) ಇದ್ದಲ್ಲಿ ಮಾರ್ಚ್ 14 ರಿಂದ ಏಪ್ರಿಲ್ 13 ರ ಒಳಗಾಗಿ ನಿಗದಿತ ನಮೂನೆ-2, 3, 4 ರಲ್ಲಿ ಕಚೇರಿಗೆ ಸಲ್ಲಿಸಬಹುದಾಗಿರುತ್ತದೆ ಎಂದು ತಿಳಿಸಿದ್ದಾರೆ.