ಮುಷ್ಕರದ ನಡುವೆಯೂ ಶಿಡ್ಲಘಟ್ಟದಲ್ಲಿ ಸೋಮವಾರ ಬಸ್ ಸಂಚಾರ ನಡೆಯಿತು. ನಗರ ಬಸ್ ನಿಲ್ದಾಣದಿಂದ ಬೆಳಗ್ಗೆ ಬಸ್ ಸಂಚಾರ ಆರಂಭಿಸಿದ್ದು, ವಿವಿದೆಡೆಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಪೊಲೀಸ್ ಎಸ್ಕಾರ್ಟ್ ಬೆಂಗಾವಲಿನಲ್ಲಿ ಬಸ್ ಗಳ ಸಂಚಾರ ಆರಂಭವಾಗಿದ್ದು, ಅಧಿಕಾರಿಗಳ ಸಮ್ಮುಖದಲ್ಲಿ ಸಂಚಾರ ಆರಂಭಿಸಲಾಗಿದೆ. ಪ್ರತಿ ಬಸ್ ಮುಂದೆ ಹಾಗೂ ಹಿಂದೆ ಪೊಲೀಸ್ ಸಿಬ್ಬಂದಿ ನೇಮಕಗೊಳಿಸಲಾಗಿದೆ.
ಕೆಲವು ಕಾಲೇಜ್ ವಿದ್ಯಾರ್ಥಿಗಳು ಮಾತನಾಡಿ ಆದಷ್ಟು ಬೇಗ ಸಾರಿಗೆ ನೌಕರರ ಮುಷ್ಕರ ಕೊನೆಗೊಳ್ಳಲಿ. ಈಗಾಗಲೇ ಕೊರೊನಾದಿಂದ ನಾವುಗಳು ಒಂದು ವರ್ಷ ಹಿಂದಕ್ಕೆ ಹೋಗಿದ್ದೇವೆ. ಬಸ್ ಸೌಲಭ್ಯವೂ ಇಲ್ಲದಿದ್ದರೆ ಕಷ್ಟವಾಗುತ್ತದೆ ಎಂದು ಹೇಳಿದರು.