ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ಎಜುಕೇಶನ್ ಟ್ರಸ್ಟ್, ಬಿ.ಎಂ.ವಿ ಶಾಲೆಯ ರೋಟರಿ ಇಂಟರಾಕ್ಟ್ ಕ್ಲಬ್, ರೋಟರಿ ಬೆಂಗಳೂರು ಸೆಂಟೆನಿಯಲ್ ಮತ್ತು ಇನ್ನರ್ ವೀಲ್ ಕ್ಲಬ್ ಆಫ್ ಬೆಂಗಳೂರು ಬ್ಲಾಸಮ್ಸ್ ಸಹಯೋಗದಲ್ಲಿ ಆಯೋಜಿಸಿದ್ದ “ಸ್ವಚ್ಛ ಗ್ರಾಮ ಸ್ವಚ್ಛ ಶಾಲೆ, ಮನೆಗೊಂದು ಸಸಿ ನೆಡಿ, ಪರಿಸರ ಉಳಿಸಿ” ಎಂಬ ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಟ್ಟು ಬಿ.ಎಂ.ವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ಮಾತನಾಡಿದರು.
ಪರಿಸರ ಸಂರಕ್ಷಣೆ ಹಾಗೂ ಹಸುರೀಕರಣದ ಉದ್ದೇಶದಿಂದ ಶಾಲೆಯ ಆವರಣ ಹಾಗೂ ಗ್ರಾಮದೆಲ್ಲೆಡೆ ಗಿಡಗಳನ್ನು ನೆಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಗಿಡಗಳನ್ನು ನೆಡುವುದಷ್ಟೇ ಅಲ್ಲದೆ, ಅದನ್ನು ಪೋಷಿಸುವುದು ನಮ್ಮ ಕರ್ತವ್ಯ ಎಂದು ನಮ್ಮ ಶಾಲೆಯ ಮಕ್ಕಳಿಗೆ ಕಲಿಸಿದ್ದೇವೆ. ಹಾಗಾಗಿ ನಮ್ಮ ಶಾಲಾ ವಾತಾವರಣದಲ್ಲಿ ಹಸಿರುಕ್ಕುತ್ತಿದೆ. ಇದು ಗ್ರಾಮದಲ್ಲಿಯೂ ಪಸರಿಸಲಿದೆ ಎಂದರು.
ಬಿ.ಎಂ.ವಿ ಶಾಲೆಯ ರೋಟರಿ ಇಂಟರಾಕ್ಟ್ ಕ್ಲಬ್ ಅಧ್ಯಕ್ಷೆ ಲಕ್ಷ್ಮಿ ಮಾತನಾಡಿ, ನಮ್ಮ ತಂಡದ ಸದಸ್ಯರ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ ಮುಷ್ಟಿ ತುಂಬ ರಾಗಿ ಮುಷ್ಟಿ ತುಂಬ ಅಕ್ಕಿ, ಪೋಲಿಯೋ ಕುರಿತಾಗಿ ಮತ್ತು ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವುದು, ಪರಿಸರ ಸಂರಕ್ಷಣೆಯ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.
ಬಿ.ಎಂ.ವಿ ಶಾಲೆಯ ರೋಟರಿ ಇಂಟರಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ ನಡೆಯಿತು. ರೋಟರಿ ಬೆಂಗಳೂರು ಚೆಂಟೆನಿಯಲ್ ನ ಪದ್ಮಿನಿ ರಾಮ್ ಹೊಸ ಸಮಿತಿಯ ಸದಸ್ಯರಿಗೆ ಬ್ಯಾಡ್ಜ್ ತೊಡಿಸಿ ಶುಭ ಹಾರೈಸಿದರು. 9 ನೇ ತರಗತಿಯ ಲಕ್ಷ್ಮಿ ಬಿ.ಎಂ.ವಿ ಶಾಲೆಯ ರೋಟರಿ ಇಂಟರಾಕ್ಟ್ ಕ್ಲಬ್ ನ ಐದನೇ ಅಧ್ಯಕ್ಷೆಯಾಗಿ, ಕಾರ್ಯದರ್ಶಿಯಾಗಿ ಚಂದ್ರಶೇಖರ್ ಆಯ್ಕೆಯಾದರು.
ರೊಟೇರಿಯನ್ ಬಿ.ಜೆ.ರಾಜೇಂದ್ರನ್, ನಂದಿನಿ ಜಗನ್ನಾಥ್, ನಂದೀಶ್,ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ರಮ್ಯ ಲೋಕೇಶ್, ಸುಮಾ ಅಣ್ಣೇಗೌಡ, ಸುನೀತಾ ರವಿ, ಮಮತಾ ಶೆಟ್ಟಿ, ಪಲ್ಲವಿ ರವಿ, ಕಲ್ಪನಾ, ಮೇಘಾ ಸುಹಾಸ್, ಪದ್ಮಾ ಮಂಜುನಾಥ್, ರೇಖಾ ನಟರಾಜ್, ಜಯಲಕ್ಷ್ಮಿ, ಶೃತಿ ಹಾಗೂ ಭಕ್ತರಹಳ್ಳಿ ಗ್ರಾಮದ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಶಾಲೆ ಹಾಗೂ ಗ್ರಾಮದೆಲ್ಲೆಡೆ ಗಿಡಗಳನ್ನು ನೆಟ್ಟರು.
ಬಿ.ಎಂ.ವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ವಿ.ಮುನೇಗೌಡ, ಟ್ರಸ್ಟಿಗಳಾದ ಸಂತೆ ನಾರಾಯಣಸ್ವಾಮಿ, ಡಾ.ರವಿಕಲಾ,ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕಲ್ಪನಾ ಮುನಿರಾಜು, ಸದಸ್ಯರಾಜು, ಮಂಜು, ಮುನಿರಾಜು, ಎ.ಎನ್.ದೇವರಾಜು ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi