27.7 C
Sidlaghatta
Friday, November 8, 2024

ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆ

BJP Leader Seikal Ramachandra Gowda praises Digital India initiative and encourages rural development to prevent migration to cities.

- Advertisement -
- Advertisement -

Devaramallur, Sidlaghatta : ಡಿಜಿಟಲ್ ಇಂಡಿಯಾ ಮುಖಾಂತರ ಹಳ್ಳಿಹಳ್ಳಿಯಲ್ಲಿನ ಯುವಕರು ಎಚ್ಚೆತ್ತಿದ್ದಾರೆ. ಅಭಿವೃದ್ಧಿ ಮಾಡುವ ದೂರದೃಷ್ಟಿಯುಳ್ಳ ನಾಯಕರು ಹಾಗೂ ಪಕ್ಷದತ್ತ ಒಲವು ತೊರಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ತಿಳಿಸಿದರು.

ತಾಲ್ಲೂಕು ದೇವರ ಮಳ್ಳೂರು ಗ್ರಾಮ ಪಂಚಾಯಿತಿ ಸೊಣ್ಣೆನಹಳ್ಳಿ ಮತ್ತು ತಲದುಮ್ಮನಹಳ್ಳಿ ಗ್ರಾಮಗಳಲ್ಲಿ ವಿವಿಧ ಪಕ್ಷಗಳಿಂದ ಬಹಳಷ್ಟು ಮಂದಿ ಬಿಜೆಪಿ ಸೇರ್ಪಡೆಗೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಧಾನಿ ಮೋದಿಯವರು ಜಗತ್ತಿನಲ್ಲಿಯೇ ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಲು ಹೊರಟ್ಟಿದ್ದಾರೆ. ನಮ್ಮ ಗ್ರಾಮೀಣ ಭಾರತವೂ ಅಭಿವೃದ್ಧಿ ಪಥದತ್ತ ಸಾಗಬೇಕು. ಹಳ್ಳಿಗಳಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಮೂಲಕ ನಗರದ ಕಡೆಗೆ ವಲಸೆ ತಪ್ಪಿಸಬೇಕು ಮತ್ತು ಈಗಾಗಲೇ ಹಳ್ಳಿಗಳಿಂದ ನಗರಕ್ಕೆ ಹೋಗಿರುವವರು ಹಳ್ಳಿಗೆ ಮರಳುವಂತಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.

ಸೊಣ್ಣೆನಹಳ್ಳಿ ಯುವ ಮುಖಂಡ ಮೂರ್ತಿ ನೇತೃತ್ವದಲ್ಲಿ ವಿವಿಧ ಪಕ್ಷಗಳ 80 ಮಂದಿ ಬಿಜೆಪಿ ಶಾಲು ಹಾಕಿಸಿಕೊಂಡು ಬಿಜೆಪಿಯ ಸಿದ್ಧಾಂತಗಳು ಮತ್ತು ಅಭಿವೃದ್ಧಿ ಒಪ್ಪಿ ಸೇರ್ಪಡೆಗೊಂಡರು.

ಮಾಜಿ ಶಾಸಕ ಎಂ, ರಾಜಣ್ಣ, ಬಿಜೆಪಿ ಗ್ರಾಮಾಂತರ ಸುರೇಂದ್ರ ಗೌಡ, ಮುಖಂಡರಾದ ಆನಂದ ಗೌಡ, ನಟರಾಜ್, ರೆಡ್ಡಿ ಸ್ವಾಮಿ, ಅವಲಪ್ಪ, ಕೆ, ಚಂದ್ರಶೇಖರ್, ಎಸ್. ಎನ್. ನಾರಾಯಣಸ್ವಾಮಿ, ಎನ್, ಮಧುಕುಮಾರ್, ಪಿ, ದೇವರಾಜ್, ಪಿ. ನಾರಾಯಣಸ್ವಾಮಿ, ಎಂ.ವೆಂಕಟರೆಡ್ಡಿ, ಎನ್.ಕೇಶವ ಹಾಜರಿದ್ದರು.


BJP’s Vision for Development Draws Youth : Seekal Ramachandra Gowda

Devaramallur, Sidlaghatta : In a recent political gathering held in Sonnenahalli and Taladummanahalli villages of Sidlaghatta Taluk Deva Mallur Gram Panchayat, BJP leader Seekal Ramachandra Gowda praised the party’s vision for development and highlighted the positive impact of the Digital India initiative on the youth in villages.

During the program, which witnessed the joining of several people from different parties to the BJP, Gowda emphasized the need for rural India to move towards the path of development, as per the vision set out by Prime Minister Modi to make India a powerful nation in the world. He further added that the aim is to prevent migration towards cities and encourage the return of those who have already moved from the villages to the city.

The event saw the participation of prominent leaders like former MLA M. Rajanna, BJP rural Surendra Gowda, Ananda Gowda, Nataraj, Reddy Swamy, Avalappa, K. Chandrasekhar, S. N. Narayanaswamy, N. Madhukumar, P. Devaraj, P. Narayanaswamy, M. Venkatareddy, and N. Kesava.

Under the leadership of Sonnenahalli youth leader Murthy, 80 people from different parties joined the BJP and expressed their agreement with the party’s ideologies and development plans.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!