Sidlaghatta : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಗುರುವಾರ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಶಿಡ್ಲಘಟ್ಟ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನದೊಂದಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ಶಿಡ್ಲಘಟ್ಟ ನಗರದ ಮಯೂರ ವೃತ್ತದಲ್ಲಿನ ಬಿಜೆಪಿಯ ಸೇವಾ ಸೌಧ ಕಚೇರಿಯಿಂದ ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ತಾಲ್ಲೂಕು ಕಚೇರಿಯಲ್ಲಿನ ಚುನಾವಣಾಕಾರಿಗಳ ಕಚೇರಿಗೆ ತೆರಳಿ ಚುನಾವಣಾಕಾರಿ ಜಾವಿದಾ ನಸೀಮಾ ಖಾನಂ ಅವರಿಗೆ ನಾಮಪತ್ರ ಸಲ್ಲಿಸಿದರು.
ಸೀಕಲ್ ರಾಮಚಂದ್ರಗೌಡ ಅವರಿಗೆ ಸಂಸದ ಎಸ್.ಮುನಿಸ್ವಾಮಿ, ಮಾಜಿ ಶಾಸಕ ಎಂ.ರಾಜಣ್ಣ, ಚಿತ್ರ ನಿರ್ದೇಶಕ ಕೇಶವಾರ ಆರ್.ಚಂದ್ರು, ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಸೀಕಲ್ ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ, ಬಿ.ಸಿ.ನಂದೀಶ್ ಮೆರವಣಿಗೆಯಲ್ಲಿ ಜೊತೆಗೂಡಿದ್ದರು.
ಮೆರವಣಿಗೆ ಸಾಗುವ ಮಾರ್ಗದ ಉದ್ದಕ್ಕೂ ಕೇಸರಿ ಧ್ವಜಗಳು, ಕೇಸರಿ ಶಾಲುಗಳು ರಾರಾಜಿಸಿದವು. ಮೆರವಣಿಗೆ ಸಾಗಿದ ಮಾರ್ಗವು ಕೇಸರಿ ಧ್ವಜಗಳಿಂದ ಅಕ್ಷರಷಃ ಕೇಸರಿಮಯವಾಗಿತ್ತು.
ಬದಲಾವಣೆಗಾಗಿ ಮತಕೊಡಿ :
ಈ ವೇಳೆ ಮಾತನಾಡಿದ ಸೀಕಲ್ ರಾಮಚಂದ್ರಗೌಡ, ಶಿಡ್ಲಘಟ್ಟದ ಜನ ಸಾಮಾನ್ಯರ, ರೈತರ, ಮಹಿಳೆಯರ, ಯುವಕರ, ಕೂಲಿ ಕಾರ್ಮಿಕರ ಬದುಕು ಬದಲಾಗಬೇಕಾದರೆ ಒಮ್ಮೆ ಬಿಜೆಪಿಗೆ ಮತ ನೀಡಿ ಬದಲಾವಣೆ ಮಾಡಿ ನೋಡಿ ಎಂದರು.
ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಜಗತ್ತು ಕೊಂಡಾಡುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೆಮ್ಮದಿಯ ದಿನಗಳನ್ನು ನಾವು ಕಾಣತೊಡಗಿದ್ದೇವೆ. ಜಗತ್ತಿನಲ್ಲೇ ಭಾರತ ವಿಶ್ವಮಾನ್ಯ ದೇಶವಾಗಿ ಬೆಳೆಯುತ್ತಿದೆ ಎಂದು ಹೇಳಿದರು.
ಇಡೀ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿನ ಮತದಾರರು ಅದರಲ್ಲೂ ಯುವ ಮತದಾರರು ನಮ್ಮ ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು, ಮೋದಿ ಅವರ ನಾಯಕತ್ವವನ್ನು, ಕೇಂದ್ರ ಹಾಗೂ ರಾಜ್ಯ ಸರಕಾರದ ಅಭಿವೃದ್ದಿ ಕಾರ್ಯಗಳನ್ನು ಹಾಗೂ ನನ್ನ ಮೇಲೆ ನಂಬಿಕೆಯಿಟ್ಟು ಇತರೆ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದು ನನಗೆ ಈ ಕ್ಷೇತ್ರದಲ್ಲಿ ಇನ್ನಷ್ಟು ಸೇವಾ ಕಾರ್ಯಗಳನ್ನು ಕೈಗೊಳ್ಳಲು, ಈ ಕ್ಷೇತ್ರದಲ್ಲಿ ಅಭಿವೃದ್ದಿ ಮಾಡಲು, ನಿಮ್ಮೆಲ್ಲರ ಬದುಕನ್ನು ಬದಲಿಸಲು ಪ್ರೇರಣೆ ನೀಡುತ್ತಿದೆ, ಹಾಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನಗೆ ಮತ ನೀಡಿ ಎಂದು ಕೈ ಮುಗಿದು ಮತದಾರರಲ್ಲಿ ಮನವಿ ಮಾಡಿದರು.
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಶಿಡ್ಲಘಟ್ಟದಲ್ಲಿ ಈ ಭಾರಿ ಕಮಲ ಅರಳುವುದು ಖಚಿತ. ಕ್ಷೇತ್ರದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯುಳ್ಳ ಸೀಕಲ್ ರಾಮಚಂದ್ರಗೌಡರು ಜಯಗಳಿಸಲಿದ್ದು ಶಿಡ್ಲಘಟ್ಟವು ಅಭಿವೃದ್ದಿ ಹೊಂದುವುದಕ್ಕಾಗಿ ಅವರಿಗೆ ನಿಮ್ಮ ಮತ ನೀಡಿ ಎಂದು ಕೋರಿದರು.
ಇಡೀ ಜಗತ್ತಿನಲ್ಲಿ ನರೇಂದ್ರ ಮೋದಿ ಅವರ ಹವಾ ನಿರ್ಮಾಣವಾಗಿದೆ. ಅವರ ನಾಯಕತ್ವದಲ್ಲಿ ದೇಶವು ಸುಭದ್ರವಾಗಿದ್ದು ಅಭಿವೃದ್ದಿಯ ಪಥದಲ್ಲಿ ಸಾಗಿದೆ. ಮತ್ತೊಮ್ಮೆ ಅವರ ನಾಯಕತ್ವದಲ್ಲಿ ನಂಬಿಕೆಯಿಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ಬರುವಂತೆ ಮಾಡಬೇಕಿದೆ ಎಂದರು.
ಮಾಜಿ ಶಾಸಕ ಎಂ.ರಾಜಣ್ಣ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಕಂಬದಹಳ್ಳಿ ಸುರೇಂದ್ರಗೌಡ, ಡಾ.ಸತ್ಯನಾರಾಯಣರಾವ್, ಸೀಕಲ್ ಆನಂದಗೌಡ, ಆನೆಮಡಗು ಡಾ.ಜಯರಾಮರೆಡ್ಡಿ, ಸ್ಕೂಲ್ ದೇವರಾಜ್, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಆಂಜನೇಯಗೌಡ, ನರ್ಮದಾರೆಡ್ಡಿ, ರಮೇಶ್‌ಬಾಯಿರು, ಕನಕಪ್ರಸಾದ್, ದೇವರಾಜ್, ರಜನೀಕಾಂತ್‌ಬಾಬು, ಮಳಮಾಚನಹಳ್ಳಿ ರವಿ, ಸೊಣ್ಣೇನಹಳ್ಳಿ ಮೂರ್ತಿ, ಭರತ್ ಕುಮಾರ್ ಇನ್ನಿತರೆ ಮುಖಂಡರು ಸೇರಿ ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
BJP Candidate Seekal Ramachandra Gowda Holds Massive Road Show During Nomination Filing
Sidlaghatta : Seekal Ramachandra Gowda, the Bharatiya Janata Party (BJP) candidate for the Sidlaghatta assembly constituency, filed his nomination papers on Thursday, the last day to do so before the upcoming elections. He held a large road show in Sidlaghatta city, accompanied by his supporters, including MP S. Muniswamy, former MLA M. Rajanna, and film director Keswara R. Chandru.
Starting from the BJP’s Seva Sudha office at Mayura Circle in Shidlaghatta, a massive procession of workers marched through the main streets of the city to the Taluk office, where they submitted Gowda’s nomination papers to Returning Officer Javida Naseema Khanam. Along the way, saffron flags and shawls were draped along the procession route, creating a striking display of the party’s signature color.
During his speech, Gowda appealed to voters, especially young ones, to vote for the BJP if they want to see a change in the lives of the common people, farmers, women, youth, and laborers of Shidlaghat. He praised the performance of Prime Minister Narendra Modi and the central government’s development work, stating that India is growing as a cosmopolitan country in the world.
MP S. Muniswamy also spoke, expressing confidence that Gowda, who he called a visionary for the comprehensive development of the constituency, would win the elections and bring development to Shidlaghat. Other leaders and thousands of workers also participated in the procession, showing their support for Gowda and the BJP.
Overall, the event was a powerful show of strength by the BJP in the lead-up to the elections, with Gowda and his supporters aiming to rally voters behind their message of change and development.