Sidlaghatta : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗುತ್ತದೆ. ಮೂಲಭೂತವಾದಿ ಸಂಘಟನೆ ಬಲಿಷ್ಠವಾಗುತ್ತದೆ. ಅವು ಉಗ್ರವಾದಿ ಸಂಘಟನೆಗಳಾಗಿ ಬದಲಾಗುತ್ತವೆ. ಕೋಮು ಗಲಭೆ ಆಗುತ್ತದೆ ಎಂದು ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಹಾಗೂ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ತಿಳಿಸಿದರು.
ನಗರದ ಮಯೂರ ವೃತ್ತದಲ್ಲಿರುವ ಬಿಜೆಪಿಯ ಸೇವಾಸೌಧ ಕಚೇರಿ ಸಭಾಂಗಣದಲ್ಲಿ ಬಿಜೆಪಿ ಕರ್ನಾಟಕ ಡಿಜಿಟಲ್ ಮಾಧ್ಯಮ ಪ್ರಕೋಷ್ಠದಿಂದ ಭಾನುವಾರ ನಡೆದ ಬೆಂಗಳೂರು ಗ್ರಾಮಾಂತರ ವಿಭಾಗದ (ಸಾಮಾಜಿಕ ಜಾಲತಾಣ ಸಮಾವೇಶ) ಡಿಜಿಟಲ್ ಕಾರ್ಯಕರ್ತರ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿ.ಎಫ್.ಐ ಮೇಲಿರುವ ಕೇಸ್ ವಜಾ ಮಾಡುತ್ತಾರೆ. ಅವರನ್ನು ಮೂಲಭೂತವಾದಿ ಸಂಘಟನೆಯನ್ನಾಗಿ ಬೆಳೆಸಿ, ಕೋಮುಗಲಭೆ ಹೆಚ್ಚಿಸಿ, ಸಾವಿರಾರು ಯುವಜನರು ಬಲಿಕೊಡುತ್ತಾರೆ. ಅಭಿವೃದ್ಧಿ ಬೇಕಾದರೆ ಸುಭದ್ರ ಅಭಿವೃದ್ಧಿ ಪ್ರೇರಿತ ಬಿಜೆಪಿ ಸರ್ಕಾರ ಹೆಚ್ಚು ಬಹುಮತ ಪಡೆದು ಗೆಲ್ಲಬೇಕು. ಈ ವಿಷಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಿಳಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಡಿ.ಕೆ.ಶಿವಕುಮಾರ್ ಅವರು ಈ ಬಾರಿ ಚುನಾವಣೆಯ ಅಫಿಡವಿಟ್ ನಲ್ಲಿ ಘೋಷಿಸಿರುವ 1,414 ಕೋಟಿ ರೂಗಳ ಆಸ್ತಿ, ಮುಂದಿನ ಚುನಾವಣೆ ಹೊತ್ತಿಗೆ ಮತ್ತೊಂದು ಸೊನ್ನೆ ಸೇರಿಸಿಕೊಂಡು 14,140 ಕೋಟಿ ಆಗುತ್ತದೆ. ಕೋಮುಗಲಭೆ ಜಾಸ್ತಿ ಆಗುತ್ತದೆ. ಜಾತಿ ಜಾತಿಯ ನಡುವೆ ಕಂದಕ ಹುಟ್ಟುತ್ತದೆ. ರಾಜ್ಯದ ಅಭಿವೃದ್ಧಿ ಮಾತ್ರ ಶೂನ್ಯವಾಗುತ್ತದೆ.
ಕಾಂಗ್ರೆಸ್ ನವರಿಗೆ ಜಾತಿ ಎಂಬುದೇ ಮಂತ್ರವಾಗಿದೆ. ಜಾತಿ ಇರುವುದು ನಾವುಗಳು ಒಂದೆಡೆ ಸೇರಲಿಕ್ಕೆ. ಬೇರೆಬೇರೆ ಆಗಲೆಂದಲ್ಲ. ಬಿಜೆಪಿ ಅವರದ್ದು ಅಭಿವೃದ್ಧಿ ರಾಜಕೀಯ, ದೂರದೃಷ್ಟಿ ಚಿಂತನೆ ಯೋಜನೆ ಮಾಡುವ ಸರ್ಕಾರ ನಮ್ಮದು ಎಂದರು.
ಕಾಂಗ್ರೆಸ್ ನವರಿಗೆ ಕರ್ನಾಟಕ ಎಂಬುದು ಎ.ಟಿ.ಎಂ. :
ಕಾಂಗ್ರೆಸ್ ನವರು ಬರುತ್ತಿದ್ದಂತೆ ಅಭಿವೃದ್ಧಿಯನ್ನು ನಿಲ್ಲಿಸುತ್ತಾರೆ. ಇಡೀ ಕರ್ನಾಟಕ ಕಾಂಗ್ರೆಸ್ ನವರಿಗೆ ಎ.ಟಿ.ಎಂ. ನಮಗೆ ಕರ್ನಾಟಕ ನಕ್ಷೆಯಂತೆ ಕಂಡರೆ, ಡಿ.ಕೆ.ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಅವರಿಗೆ ಎ.ಟಿ.ಎಂ ರೀತಿ ಕಾಣುತ್ತದೆ. ಅವರು ಕಳೆದ ಆರು ತಿಂಗಳಿನಿಂದ ಎ.ಟಿ.ಎಂ ಕನಸಿನಲ್ಲಿದ್ದಾರೆ. ಇದನ್ನು ಜನರಿಗೆ ವಿವರಿಸಿ. ನಮಗಿದು ರಾಜ್ಯ., ಒಂದೊಂದೂ ನಗರವೂ ಅಭಿವೃದ್ಧಿಯಾಗಬೇಕು. ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಎ.ಟಿ.ಎಂ ಕಾರ್ಡ್ ಯಾರಿಗೆ ಕೊಡಬೇಕೆಂಬುದನ್ನು ಜನ ನಿರ್ಧರಿಸಬೇಕು. ಬಿಜೆಪಿಗೆ ಕೊಟ್ಟರೆ ಆ ಹಣ ಅಭಿವೃದ್ಧಿ ಕೆಲಸಗಳಿಗೆ ಹೋಗುತ್ತದೆ. ಕಾಂಗ್ರೆಸ್ ಗೆ ಕೊಟ್ಟರೆ ಕೆಲವರ ಮನೆಗೆ ಹೋಗುತ್ತದೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹೇಳಿ ಜನರನ್ನು ಮರುಳು ಮಾಡಲು ಆಗದು. ರಾಹುಲ್ ಗಾಂಧಿ ಅವರು ಇದುವರೆಗೂ ಒಂದು ಪಂಚಾಯತ್ ಸದಸ್ಯನಾಗಿ ಕೆಲಸ ಮಾಡಿಲ್ಲ. ಅವರಿಗೆ ನಾಯಕತ್ವದ ಲಕ್ಷಣಗಳಿಲ್ಲ. ಕಾಂಗ್ರೆಸ್ ನವರು ತಮ್ಮ ಜಾಲತಾಣಗಳಲ್ಲಿ ರಾಹುಲ್ ಗಾಂಧಿಯವರನ್ನು ಎಷ್ಟು ಹೊಗಳಿದರೂ ಜನ ನಂಬುವುದಿಲ್ಲ. ಬಿಜೆಪಿಯಲ್ಲಿ ನಾಯಕರು, ಸತ್ವ, ವಿಷಯ, ಅಭಿವೃದ್ಧಿಯ ಆಲೋಚನೆ ಎಲ್ಲವೂ ಇದೆ. ಅವನ್ನು ಜನರಿಗೆ ತಿಳಿಸಿದರೆ ಸಾಕು ಎಂದರು.
ನರೇಂದ್ರ ಮೋದಿಯವರ ಜನಪರ ಆಡಳಿತ ವಿಶ್ವಕ್ಕೆ ಮಾದರಿಯಾಗಿದೆ. ಅದರಲ್ಲಿಯೂ ರೈತರಿಗೆ ಜಾರಿಗೊಳಿಸಿರುವ ಕಿಸಾನ್ ಸಮ್ಮಾನ್ ಯೋಜನೆ, ದೇಶದ ರಕ್ಷಣೆಯಲ್ಲಿ ತೆಗೆದುಕೊಂಡಿರುವ ಕ್ರಮಗಳು ಇಡೀ ವಿಶ್ವದ ಗಮನ ಸೆಳೆದಿದೆ. ಕೇಂದ್ರ ಸರ್ಕಾರ ರೈತರಿಗೆ 6 ಸಾವಿರ ಕೊಟ್ಟರೆ, ಯಡಿಯೂರಪ್ಪನವರು ಅದಕ್ಕೆ 4 ಸಾವಿರ ಸೇರಿಸಿ ಕೊಟ್ಟರು. ಇದು ಡಬಲ್ ಎಂಜಿನ್ ಸರ್ಕಾರದ ಫಲ. ಯಡಿಯೂರಪ್ಪನವರು ರೈತರು ಹಾಗೂ ದುಡಿಮೆಯಲ್ಲಿರುವವರ ಮಕ್ಕಳಿಗೆ ವಿದ್ಯಾರ್ಥಿವೇತನ ಕೂಡ ಕೊಟ್ಟರು. ಇಂಥ ಕಾರ್ಯಕ್ರಮಗಳನ್ನು ಸಾಮಾನ್ಯ ಜನರಿಗೆ ತಲುಪುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಕಾರ್ಯನಿರ್ವಹಿಸಬೇಕಾಗಿದೆ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ಶಿಡ್ಲಘಟ್ಟದಲ್ಲಿ ಬಿಜೆಪಿ ಪಕ್ಷ ರಾಮಚಂದ್ರಗೌಡರನ್ನು ಗೆಲ್ಲಿಸಿದಲ್ಲಿ ರಾಜ್ಯ ಸರ್ಕಾರ ಶಕ್ತಿಯುತವಾಗುತ್ತದೆ. ಇದರಿಂದ ಅಭಿವೃದ್ಧಿ ಆಗಲು ಸಾಧ್ಯವಿದೆ, ಅದಕ್ಕಾಗಿ ಮತ ನೀಡುವಂತೆ ಇಡೀ ಕ್ಷೇತ್ರದ ಮತದಾರರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಕಾರ್ಯಕರ್ತರು ತಿಳಿಸಬೇಕಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್ ಮಾತನಾಡಿ, ಇಂದಿನ ರಾಜಕಾರಣದಲ್ಲಿ ಸಾಮಾಜಿಕ ಜಾಲತಾಣಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತಿವೆ. ಆದ್ದರಿಂದ ಭಾರತೀಯ ಜನತಾ ಪಕ್ಷ ತನ್ನ ಕೆಲಸಗಳನ್ನು ಜಾಲತಾಣಗಳ ಮೂಲಕ ಜನರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತದೆ. ಈ ಬಾರಿ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಪಕ್ಷದ ಅಭಿವೃದ್ಧಿಗೆ ನಾಂದಿ ಹಾಕಿದ್ದೇವೆ ಎಂದರು.
ಮಾಜಿ ಶಾಸಕ ಎಂ.ರಾಜಣ್ಣ, ಸಾಮಾಜಿಕ ಜಾಲತಾಣದ ಸಂಯೋಜಕ ನರೇಂದ್ರ ಸಿಂಹ, ಈ ಭಾಗದ ಮಂಡಲ ಚುನಾವಣಾ ಉಸ್ತುವಾರಿ ಡಾ. ಮಂಜುನಾಥ್, ಶಿಡ್ಲಘಟ್ಟ ಮಂಡಲ ಅಧ್ಯಕ್ಷ ಸುರೇಂದ್ರ ಗೌಡ, ಮುಖಂಡ ಆನಂದ ಗೌಡ ಹಾಜರಿದ್ದರು.
BJP’s Annamalai Warns of Communal Riots if Congress Comes to Power in Karnataka
Sidlaghatta : During a conference organized by the BJP Karnataka Digital Media Center, Tamil Nadu state president Annamalai warned that if the Congress comes to power, law and order would break down and fundamentalist organizations would become stronger. He claimed that communal riots would increase and there would be a divide between castes. Annamalai also alleged that if Congress leader DK Shivakumar’s assets were to continue to grow at their current rate, they would amount to Rs 14,140 crore by the next election.
He urged the people to support the BJP, which he claimed was focused on development and visionary thinking, and warned that if the Congress won, the state’s development would suffer. Annamalai also praised Prime Minister Narendra Modi’s pro-people governance and highlighted the Kisan Samman Yojana for farmers.
Legislative Council member Keshav Prasad emphasized the importance of social media in politics, and said that the BJP was utilizing websites to reach the people with their programs. Former MLA M. Rajanna and other party leaders were also present at the conference.