26.9 C
Sidlaghatta
Thursday, December 26, 2024

ಶಿಡ್ಲಘಟ್ಟದಲ್ಲಿ ಬಿಜೆಪಿ ಸ್ಥಾಪನಾ ದಿನಾಚರಣೆ

Seekal Ramachandra Gowda Emphasizes the Importance of Security and Patriotism at BJP Foundation Day

- Advertisement -
- Advertisement -

Sidlaghatta : ನಮ್ಮ ದೇಶ ಸುಭದ್ರ ಮತ್ತು ಸುರಕ್ಷಿತವಾಗಿದ್ದಾಗ ಮಾತ್ರ ನಾವು ನೀವೆಲ್ಲರೂ ನೆಮ್ಮದಿಯಾಗಿ ಬದುಕನ್ನು ನಡೆಸಬಹುದು. ಹಾಗಾಗಿ ದೇಶವನ್ನು ಸುರಕ್ಷಿತವಾಗಿ ನಡೆಸುವ ಸಮರ್ಥ ನಾಯಕ ಮೋದಿಯ ಕೈ ಬಲಪಡಿಸುವ ಕೆಲಸಕ್ಕೆ ಮುಂದಾಗಬೇಕಿದೆ ಎಂದು ಶಿಡ್ಲಘಟ್ಟ ಕ್ಷೇತ್ರದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಹೇಳಿದರು.

ಶಿಡ್ಲಘಟ್ಟ ನಗರದಲ್ಲಿನ ಬಿಜೆಪಿಯ ಸೇವಾಸೌಧದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿಯ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೋದಿಯವರು ಭಾರತವನ್ನು ಜಗತ್ತಿನಲ್ಲಿಯೆ ಶಕ್ತಿ ಶಾಲಿ ರಾಷ್ಟ್ರವನ್ನಾಗಿ ಮುನ್ನಡೆಸುತ್ತಿದ್ದು ಇಡೀ ವಿಶ್ವವೇ ಮೋದಿಯ ನಾಯಕತ್ವವನ್ನು ಕೊಂಡಾಡುತ್ತಿದ್ದಾರೆ ಎಂದರು.

ಬಿಜೆಪಿಯು ಯುವಕರು ಸೇರಿದಂತೆ ಎಲ್ಲರಲ್ಲೂ ರಾಷ್ಟ್ರ ಪ್ರೇಮವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು ವಿಶ್ವದಲ್ಲೆ ದೊಡ್ಡ ಹಾಗೂ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಏಕೈಕ ಪಕ್ಷವಾಗಿದ್ದು ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮೋದಿಗೆ ಇನ್ನಷ್ಟು ಶಕ್ತಿ ತುಂಬಬೇಕೆಂದು ಮನವಿ ಮಾಡಿದರು.

ಡಾ.ಸತ್ಯನಾರಾಯಣರಾವ್, ರೂಪಸಿರಮೇಶ್, ಮಂಜುನಾಥ್, ಖಂಡೇರಾವ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 20 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.

ಮಾಜಿ ಶಾಸಕ ಎಂ.ರಾಜಣ್ಣ, ಮುಖಂಡರಾದ ಡಾ.ಮಂಜುನಾಥ್, ರಮೇಶ್‌, ಸುರೇಂದ್ರಗೌಡ, ನರ್ಮದಾರೆಡ್ಡಿ, ಸುಜಾತಮ್ಮ ಹಾಜರಿದ್ದರು.


BJP Leader Urges Strengthening Modi’s Leadership for a Safe and Powerful India

Sidlaghatta : Seekal Ramachandra Gowda, the BJP leader of Sidalghatta Constituency, emphasized the importance of a safe and secure country for leading a peaceful life during the BJP’s foundation day program at BJP’s Seva Soudha in Sidlaghatta city. He urged for efforts to strengthen the leadership of Prime Minister Modi, who he believes is capable of running the country safely and making India a powerful nation globally.

Gowda also praised the BJP’s role in fostering patriotism among the youth and emphasized that the party has the largest membership worldwide. He appealed to Modi to grant more power to the BJP by ensuring the victory of their candidates in the upcoming elections.

The program also included the honoring of 20 achievers from various fields, including Dr. Satyanarayan Rao, Roopasiramesh, Manjunath, and Khanderao. Prominent leaders such as former MLA M. Rajanna, Dr. Manjunath, Ramesh, Surendra Gowda, Narmdareddy, and Sujathamma were present at the event.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!