ಡಿಸೆಂಬರ್ 6 ಮತ್ತು 7 ರಂದು ತಾಲ್ಲೂಕಿನ ದಿಬ್ಬೂರಹಳ್ಳಿ 66/11 ಕೆವಿ ಉಪವಿದ್ಯುತ್ ಕೇಂದ್ರದಿಂದ ಹಾದು ಹೋಗಿರುವ ಮಾರ್ಗಕ್ಕೆ ಕೋಲಾರದ ಕೆಪಿಟಿಸಿಎಲ್ ವಿಭಾಗದಿಂದ ಕಾರಿಡಾರ್ ಟವರ್ ಅಳವಡಿಸುವ ಕಾಮಗಾರಿಯನ್ನು ಕೈಗೊಂಡಿರುವುದರಿಂದ ದಿಬ್ಬೂರಹಳ್ಳಿಯ 66/11 ಕೆವಿ ಉಪ ವಿದ್ಯುತ್ ಕೇಂದ್ರಕ್ಕೆ ವಿದ್ಯುತ್ ವ್ಯತ್ಯಯವಾಗಲಿದೆ. ದಿಬ್ಬೂರಹಳ್ಳಿ ಉಪವಿದ್ಯುತ್ ಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ ಈ.ತಿಮ್ಮಸಂದ್ರ, ಕೋರ್ಲಪರ್ತಿ, ಆನೆಮಡುಗು, ಬಶೆಟ್ಟಹಳ್ಳಿ, ದೊಡ್ಡತೇಕಹಳ್ಳಿ, ದಿಬ್ಬೂರಹಳ್ಳಿ, ದ್ಯಾವಪ್ಪನಗುಡಿ, ಸಾದಲಿ, ದ್ಯಾವರಹಳ್ಳಿ, ರಾಯಪ್ಪನಹಳ್ಳಿ, ಬೈರಗಾನಹಳ್ಳಿ, ತಲಕಾಯಲಬೆಟ್ಟ, ಬೈಯಪ್ಪನಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಡಿಸೆಂಬರ್ 6 ಮತ್ತು 7 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಬೇಕೆಂದು ಬೆಸ್ಕಾಂ ಎಂದು ಬೆಸ್ಕಾಂ ಗ್ರಾಮೀಣ ಉಪವಿಭಾಗದ ಎಇಇ ಬಿ.ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -
- Advertisement -