Sidlaghatta : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ವತಿಯಿಂದ ಸುಮಾರು 48 ಕ್ಕೂ ಅಧಿಕ ಮಂದಿ ರಾಮ ಭಕ್ತರನ್ನು ಅಯೋಧ್ಯೆಗೆ ಪ್ರಭು ಶ್ರೀ ರಾಮಲಲ್ಲಾನ ದರ್ಶನಕ್ಕೆ ಮಂಗಳವಾರ ರಾತ್ರಿ ಕಳಸಿಕೊಡಲಾಯಿತು.
ಈ ಸಂದರ್ಭದಲ್ಲಿ ರಾಮ ಭಕ್ತ ಶ್ರೀಕಾಂತ್ ಮಾತನಾಡಿ, ನಮ್ಮ ತಾಲ್ಲೂಕಿನ ಸುತ್ತಮುತ್ತಲಿನ ರಾಮಭಕ್ತರಿಗೆ ಅಯೋಧ್ಯೆಗೆ ತೆರಳಲು ನಮ್ಮ ಭಾರತೀಯ ಜನತಾ ಪಕ್ಷ ಅನುವು ಮಾಡಿಕೊಟ್ಟಿದೆ. ಅದರಂತೆ ನಮ್ಮ ತಾಲ್ಲೂಕಿನಿಂದ ಯಾತ್ರೆ ಮಾಡಲು ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿ ಅನುವು ಮಾಡಿಕೊಟ್ಟಿರುವ ಭಾರತೀಯ ಜನತಾ ಪಕ್ಷದ ನಮ್ಮ ನಾಯಕರುಗಳಿಗೆ ಆ ಪ್ರಭು ಶ್ರೀರಾಮಚಂದ್ರ ಒಳ್ಳೆಯದು ಮಾಡಲಿ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯ ಕಣಿ ಸದಸ್ಯರಾದ ಸೀಕಲ್ ಆನಂದ್ ಗೌಡ ರಾಮ ಭಕ್ತರಿಗೆ ಶ್ರೀ ರಾಮನ ವಸ್ತ್ರ ಹಾಕುವುದರ ಮುಖಾಂತರ ಬೀಳ್ಕೊಡುಗೆ ನೀಡಿದರು.
ಜಿಲ್ಲಾ ಸಂಚಾಲಕ ಕೆ.ಎಸ್ ಕನಕ ಪ್ರಸಾದ್, ದಿಶಾ ವೆಂಕಟೇಶ್, ಯುವ ಮೋರ್ಚ ನಗರ ಘಟಕ ಅಧ್ಯಕ್ಷ ಭರತ್ ಕುಮಾರ್, ಜೆ.ಎಸ್.ಮುಕೇಶ್, ನರೇಶ್, ಗ್ಯಾಸ್ ಭಾರತ್, ಜಗದೀಶ್, ಸಾಯಿಬಾಬು ಹಾಜರಿದ್ದರು.