Culture

ಅಂಕತಟ್ಟಿಯಲ್ಲಿ ಆವತಿನಾಡಪ್ರಭುಗಳ ಶಾಸನ ಪತ್ತೆ

Avati Nadaprabhu Scripture Ankathatti Sidlaghatta

Ankatatti, Sidlaghatta, Chikkaballapur District : ಶಿಡ್ಲಘಟ್ಟ ತಾಲ್ಲೂಕಿನ ಅಂಕತಟ್ಟಿ ಗ್ರಾಮದಲ್ಲಿ ಆವತಿನಾಡಪ್ರಭುಗಳ ಶಾಸನವನ್ನು ಶಾಸನತಜ್ಞ ಕೆ.ಧನಪಾಲ್, ಅಪ್ಪೆಗೌಡನಹಳ್ಳಿಯ ತ್ಯಾಗರಾಜ್ ಮತ್ತು ಡಿ.ಎನ್.ಸುದರ್ಶನರೆಡ್ಡಿ ಅವರು ಪತ್ತೆಹಚ್ಚಿದ್ದಾರೆ.

ಶಾಸನವು ಅಂಕತಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಆವರಣದ ಗೋಡೆಗೆ ಸೇರಿಕೊಂಡಿದ್ದು, ಕ್ಷೇತ್ರಕಾರ್ಯದಲ್ಲಿ ಗಮನಿಸಿದ ಕೆ.ಧನಪಾಲ್ ಮತ್ತು ತಂಡ, ಸ್ಥಳೀಯರಾದ ವೆಂಕಟರೆಡ್ಡಿಯವರ ಸಹಕಾರದಿಂದ ಬಣ್ಣ ಬಳಿದು ವಿರೂಪವಾಗಿದ್ದ ಶಾಸನವನ್ನು ಸ್ವಚ್ಛಗೊಳಿಸಿ, ಅಧ್ಯಯನ ಮಾಡಿ, ಗ್ರಾಮಸ್ಥರಿಗೆ ಶಾಸನ ಹಾಗೂ ಅವುಗಳ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.

ಮಾರ್ಚ್ 3, 1729ರಂದು ವಡಿಗೆನಹಳ್ಳಿಯ(ಇಂದಿನ ವಿಜಯಪುರ) ಚೆನ್ನಕೇಶವ ದೇವಾಲಯದ ಪೂಜಾ ಕೈಂಕರ್ಯಗಳಿಗೆ ಆವತಿನಾಡಪ್ರಭು ಗೋಪಾಲಗೌಡರ ಮಗ ದೊಡ್ಡಬೈರೇಗೌಡರು ಅಂಗತಟ್ಟಿ (ಇಂದಿನ ಅಂಕತಟ್ಟಿ) ಮತ್ತು ಶೆಟ್ಟಿಹಳ್ಳಿ ಗ್ರಾಮಗಳ ತೆರಿಗೆಗಳನ್ನು ದಾನವಾಗಿ ನೀಡಿರುವ ವಿಚಾರವನ್ನು ಈ ಶಾಸನ ತಿಳಿಸುತ್ತದೆ. ವಿಶೇಷವೆಂದರೆ ದಾನ ನೀಡಿದಾಗ ಶಾಸನವನ್ನು ಕೆತ್ತಿ ವಿಜಯಪುರದ ಗೋಪಾಲ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಹಾಕಿಸಿ, ನಾಲ್ಕು ದಿನಗಳ ನಂತರ ದಾನನೀಡಿದ ಅಂಕತಟ್ಟಿ ಗ್ರಾಮದಲ್ಲೂ ಇನ್ನೊಂದು ಶಾಸನವನ್ನು ಹಾಕಿರುವರು.

ಆವತಿ ನಾಡಪ್ರಭುಗಳಾಗಿದ್ದ ಗೋಪಾಲಗೌಡರು ತಮ್ಮ ಆಳ್ವಿಕೆಯ ಕಾಲದಲ್ಲಿ ದೇವನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನದ ಪೂಜಾ ಕೈಂಕರ್ಯಗಳಿಗೆ ಮೇಲೂರು, ಮಳ್ಳೂರು ಸೇರಿದಂತೆ ಏಳು ಗ್ರಾಮಗಳನ್ನು ದಾನ ನೀಡಿರುವ ಬಗ್ಗೆ ಶಾಸನಗಳ ದಾಖಲೆಯಿದೆ. ಅವರು ಒಂದು ಶಾಸನ ದೇವಸ್ಥಾನದಲ್ಲಿ ಹಾಕಿಸಿ, ದಾನವಾಗಿ ನೀಡಿರುವ ಏಳು ಗ್ರಾಮಗಳಲ್ಲೂ ಶಾಸನವನ್ನು ಹಾಕಿಸಿರುವರು. ಈಗಲೂ ತಾಲ್ಲೂಕಿನ ಮೇಲೂರು ಮತ್ತು ಮಳ್ಳೂರಿನಲ್ಲಿ ಗೋಪಾಲಗೌಡರ ಶಾಸನಗಳಿವೆ. ಅದೇ ರೀತಿ ಅವರ ಮಗ ದೊಡ್ಡಬೈರೇಗೌಡರು ಕೂಡ ವಿಜಯಪುರದಲ್ಲಿರುವ ಚೆನ್ನಕೇಶವ ದೇವಸ್ಥಾನದಲ್ಲಿ ಒಂದು ಶಾಸನವನ್ನೂ ಅದರ ಸೇವಾರ್ಥವಾಗಿ ದಾನ ನೀಡಿರುವ ಅಂಕತಟ್ಟಿ ಗ್ರಾಮದಲ್ಲಿಯೂ ಒಂದು ಶಾಸನವನ್ನು ಹಾಕಿಸಿರುವರು ಎಂದು ಶಾಸನತಜ್ಞ ಧನಪಾಲ್ ವಿವರಿಸಿದರು.

“ಈ ಶಾಸನದಲ್ಲಿ ಉಲ್ಲೇಖವಾಗಿರುವ ಗೋಪಾಲಗೌಡರು ಆವತಿನಾಡಪ್ರಭು ರಣಭೈರೇಗೌಡರ ವಂಶೀಕರು. ಆವತಿನಾಡ ಪ್ರಭುಗಳು 14ನೇ ಶತಮಾನದಲ್ಲಿ ಕಂಚಿ ದಿಕ್ಕಿನಿಂದ ಬಂದು ನಂದಿಸೀಮೆಯ ಕಾರಹಳ್ಳಿಯಲ್ಲಿ ನೆಲೆಗೊಂಡ ಮೇಲೆ ಯಲಹಂಕ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿಗಳನ್ನು ಪ್ರತ್ಯೇಕವಾಗಿ ಪಾಲಿಸತೊಡಗುತ್ತಾರೆ. ಗೋಪಾಲಗೌಡರ ವಂಶೀಕರು ದೇವನಹಳ್ಳಿಯಲ್ಲಿ ಇದ್ದಾಗ ಅವರ ಆಡಳಿತ ವ್ಯಾಪ್ತಿ ವಡಿಗೆಹಳ್ಳಿಯೂ ಸೇರಿದಂತೆ ಶಿಡ್ಲಘಟ್ಟದ ಬೂದಾಳದವರೆಗೂ ವಿಸ್ತರಿಸಿರುತ್ತದೆ. ಹೈದರಾಲಿ ದೇವನಹಳ್ಳಿಯನ್ನು ವಶಪಡಿಸಿಕೊಂಡ ನಂತರ ಇವರು ತಮ್ಮ ದಾಯಾದಿಗಳ ಊರಾದ ಚಿಕ್ಕಬಳ್ಳಾಪುರದಕ್ಕೆ ಹೋಗಿಬಿಡುತ್ತಾರೆ” ಎಂದು ಶಾಸನತಜ್ಞ ಡಿ.ಎನ್.ಸುದರ್ಶನರೆಡ್ಡಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ವೆಂಕಟರೆಡ್ಡಿ ಹಾಗೂ ಇತರ ಅಂಕತಟ್ಟಿ ಗ್ರಾಮಸ್ಥರು ಹಾಜರಿದ್ದರು.

– ಡಿ.ಜಿ.ಮಲ್ಲಿಕಾರ್ಜುನ

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Ganjigunte Chandramouleshwara Temple ancient Scriptures

Culture

ಗಂಜಿಗುಂಟೆ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಅಪರೂಪದ ಶಾಸನ

Ganjigunte, sidlaghatta : ಸಮಯವನ್ನು ಕೇವಲ ಅಂಕಿ-ಅಂಶ ಅಥವಾ ಕ್ಯಾಲೆಂಡರ್ ದಿನಾಂಕಗಳಾಗಿ ನೋಡುವ ಬದಲಿಗೆ, ಧಾರ್ಮಿಕ, ಸಾಂಸ್ಕೃತಿಕ ಅಥವಾ ಆಧ್ಯಾತ್ಮಿಕ ಸಂಕೇತಗಳ ಆಧಾರದ ಮೇಲೆ…

Share
Sidlaghatta Tehsildar Plea to Safegaurd Scriptures and Hero Stones

Culture

ಶಾಸನಗಳು ಹಾಗೂ ವೀರಗಲ್ಲುಗಳ ರಕ್ಷಣೆಗೆ ಮನವಿ

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿಯಲ್ಲಿ ಕೈಗೊಂಡಿದ್ದ ಶಾಸನಗಳ ಅಧ್ಯಯನದ ವೇಳೆ ಶಾಸನಗಳು ಹಾಗೂ ವೀರಗಲ್ಲುಗಳ ದುಃಸ್ಥಿತಿಯನ್ನು ಗಮನಿಸಿದ ತಜ್ಞರ ತಂಡವು,…

Share
Vijayanagara Empire Inscription Found at Sidlaghatta Gejjiganahalli

Culture

ಶಿಡ್ಲಘಟ್ಟದ ಗೆಜ್ಜೆಗಾನಹಳ್ಳಿಯಲ್ಲಿ ಹಕ್ಕ-ಬುಕ್ಕರ ಕಾಲದ ಶಾಸನ ಪತ್ತೆ

https://youtu.be/JDHfmXo743Q Sidlaghatta : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಗೆಜ್ಜೆಗಾನಹಳ್ಳಿ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ (Vijayanagara Empire) ಆರಂಭಿಕ ಕಾಲದ, ಅಂದರೆ ಹಕ್ಕ-ಬುಕ್ಕರ ಆಳ್ವಿಕೆಯ…

Share

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Handi Bete Veeragallu 15th century Kannada Scripture found

Culture

ಹಂದಿಬೇಟೆ ವೀರಗಲ್ಲು, 15ನೇ ಶತಮಾನದ ಅಪರೂಪದ ಕನ್ನಡ ಶಾಸನ ಪತ್ತೆ

Mallur, Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ವೃತ್ತದ ಬಳಿ ಹಂದಿಬೇಟೆ ವೇಳೆ ನಾಯಿಯ ಸ್ಮಾರಕವಾಗಿ ನಿರ್ಮಿಸಲಾದ ಹಂದಿಬೇಟೆ ವೀರಗಲ್ಲು ಶಿಲ್ಪ…

Share
Share
error: Content is protected !!