Home News ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯಾರಿಂದ ಗ್ರಾಮಸ್ಥರ ಬಿಪಿ, ಆಮ್ಲಜನಕ ಮತ್ತು ಉಷ್ಣಾಂಶ ಪರೀಕ್ಷೆ

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯಾರಿಂದ ಗ್ರಾಮಸ್ಥರ ಬಿಪಿ, ಆಮ್ಲಜನಕ ಮತ್ತು ಉಷ್ಣಾಂಶ ಪರೀಕ್ಷೆ

0

ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಸೋಮವಾರ ಅವರು ಗ್ರಾಮಸ್ಥರನ್ನು ಪರೀಕ್ಷಿಸಿ ಆಶಾ ಕಾರ್ಯಕರ್ತೆ ಪ್ರೇಮಾ ಮಾತನಾಡಿದರು.

 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದು ಹಳ್ಳಿಯನ್ನೂ ಒಂದೊಂದು ದಿನ ಆಯ್ಕೆ ಮಾಡಿಕೊಂಡು, ದಿನಕ್ಕೆ ಇಪ್ಪತ್ತು ಮಂದಿಯ ಬಿಪಿ, ಆಮ್ಲಜನಕ ಪ್ರಮಾಣ ಮತ್ತು ದೇಹದ ಉಷ್ಣಾಂಶವನ್ನು ಪರೀಕ್ಷೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

 ಪಲ್ಸ್ ಆಕ್ಸಿಮೀಟರ್ ರಕ್ತದಲ್ಲಿನ ಆಮ್ಲಜನಕ ಮಟ್ಟವನ್ನು ಅಳೆಯಲು ಬಳಸುತ್ತಾರೆ. ಆಕ್ಸಿಜನ್ ಮಟ್ಟ 94ಕ್ಕಿಂತ ಕಡಿಮೆ ಇದ್ದರೆ ಕೂಡಲೇ ವೈದ್ಯಕೀಯ ನೆರವು ಪಡೆಯಬೇಕು. ಈ ಯಂತ್ರವನ್ನು ಸಾಮಾನ್ಯವಾಗಿ ಯಾವುದೇ ವ್ಯಕ್ತಿಯ ಬೆರಳ ತುದಿಗೆ, ಕಿವಿಗೆ ಕ್ಲಿಪ್‌ ಮಾಡಿದರೆ ಆ ವ್ಯಕ್ತಿಯ ದೇಹದಲ್ಲಿರುವ ರಕ್ತದ ಆಕ್ಸಿಜನ್‌ ಸ್ಯಾಚುರೇಶನ್‌ ಹಾಗೂ ನಾಡಿ ಬಡಿತವನ್ನು ಯಂತ್ರದ ಮೇಲಿರುವ ಬೋರ್ಡ್‌ನಲ್ಲಿ ತತ್‌ಕ್ಷಣ ನೋಡಬಹುದು ಎಂದರು.

 ಗ್ರಾಮಸ್ಥರನ್ನು ಪರೀಕ್ಷಿಸುವಾಗ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ವಾಟರ್ ಮ್ಯಾನ್ ನಮಗೆ ಸಹಕಾರ ನೀಡುತ್ತಾರೆ. ವರದಿಯನ್ನು ನಾವು ಸಂಬಂಧಪಟ್ಟ ಆರೋಗ್ಯ ಇಲಾಖೆಯ ವೈದ್ಯರಿಗೆ ನೀಡುತ್ತೇವೆ ಎಂದರು.

 ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಮ್ಮ, ನಳಿನಮ್ಮ ಹಾಜರಿದ್ದರು.