17.1 C
Sidlaghatta
Friday, November 22, 2024

ಸುಗಟೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೌಶಲ್ಯ ತರಬೇತಿ ಕಾರ್ಯಾಗಾರ

- Advertisement -
- Advertisement -

ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾ ನೆಹರು ಯುವಕೇಂದ್ರ, ನವದೆಹಲಿಯ ರಾಷ್ಟ್ರೀಯ ಯುವಯೋಜನೆ, ಸುಂದರಲಾಲ್ ಬಹುಗುಣ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನಾ ರಾಜ್ಯಕೋಶ, ಯಲಹಂಕ ಅನಿಕೇತನ ಯುವಜನಸೇವಾಸಂಘಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಯುವಸಪ್ತಾಹ ಉದ್ಘಾಟನೆ, ಕೌಶಲ್ಯ ತರಬೇತಿ ಕಾರ್ಯಾಗಾರ, ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿದರು.

ಪ್ರತಿಯೊಂದು ಮಗುವಿನಲ್ಲಿಯೂ ಸುಪ್ತವಾಗಿರುವ ಅರಿವನ್ನು ಜಾಗೃತಗೊಳಿಸಲು ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣವು ಉತ್ತಮ ಮಾರ್ಗವಾಗಿದೆ. ಮಕ್ಕಳನ್ನು ಸರ್ವತೋಮುಖ ಪ್ರಗತಿಗೆ ಪೂರಕವಾದ ಚಟುವಟಿಕೆಗಳನ್ನು ಅಳವಡಿಸಿಕೊಂಡರೆ ಸಾಧನೆ ಸುಲಭವಾಗುವುದು ಎಂದು ಅವರು ತಿಳಿಸಿದರು.

ಕೇವಲ ಔಪಚಾರಿಕ ಶಿಕ್ಷಣವಲ್ಲದೇ ಕರಕುಶಲ, ಕಲೆ, ನಾಟಕ, ಕ್ರೀಡೆ, ಸಂಗೀತ, ಸಾಹಿತ್ಯ ಕ್ಷೇತ್ರಗಳಲ್ಲಿಯೂ ಹೆಚ್ಚೆಚ್ಚು ತೊಡಗಿಸುವ ಮೂಲಕ ಮಕ್ಕಳನ್ನು ವಿಶಾಲಮನೋಭಾವನೆಯತ್ತ ಕೊಂಡೊಯ್ಯಬೇಕಾದ ಜವಾಭ್ದಾರಿ ಪೋಷಕರು ಮತ್ತು ಶಿಕ್ಷಕರ ಮೇಲಿದೆ. ಪರಿಸರಸಂರಕ್ಷಣೆ, ಮಾನವೀಯಸಂಬಂಧಗಳ ಬೆಳವಣಿಗೆ, ಉತ್ತಮ ಬದುಕಿಗೆ ಯುವಪೀಳಿಗೆಯನ್ನು ಸನ್ನದ್ಧಗೊಳಿಸುವಲ್ಲಿ ಎಲ್ಲರೂ ಶ್ರಮವಹಿಸಬೇಕು. ಯುವಸಪ್ತಾಹದ ಅಂಗವಾಗಿ ಶ್ರಮದಾನಶಿಬಿರ, ಸ್ವಚ್ಚತಾ ಕಾರ್ಯಕ್ರಮ, ಗಿಡನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ವಿದ್ಯಾರ್ಥಿಗಳನ್ನು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿ ಪ್ರಶಂಸಾಪತ್ರ, ಬಹುಮಾನಗಳನ್ನು ವಿತರಿಸಲಾಗುವುದು ಎಂದರು.

ನವದೆಹಲಿಯ ರಾಷ್ಟ್ರೀಯ ಯುವಯೋಜನೆಯ ರಾಜ್ಯಸಂಯೋಜಕ ವಿ.ಪ್ರಶಾಂತ್ ಮಾತನಾಡಿ, ಸ್ವಾಮಿವಿವೇಕಾನಂದರ ಆದರ್ಶಗಳು ಯುವಪೀಳಿಗೆಯಲ್ಲಿ ಆತ್ಮವಿಶ್ವಾಸ, ಸ್ಫೂರ್ತಿ, ಧೈರ್ಯ, ಸಾಹಸಪ್ರವೃತ್ತಿಗಳನ್ನು ಬಿತ್ತಬಲ್ಲವು. ಮಕ್ಕಳದಿಸೆಯಿಂದಲೇ ಪ್ರೀತಿ, ಸೇವಾಮನೋಭಾವನೆಗಳನ್ನು ಬೆಳೆಯುವಂತೆ ಮಾಡಿ, ನೈತಿಕ ಮೌಲ್ಯಗಳನ್ನಾಧರಿಸಿದ ಬದುಕು ಕಂಡುಕೊಳ್ಳಲು ಸಹಕಾರಿಯಾಗಲಿವೆ ಎಂದರು.

ರಾಷ್ಟ್ರೀಯ ಯುವದಿನಾಚರಣೆ ಅಂಗವಾಗಿ ಶಾಲಾಮಕ್ಕಳಿಗಾಗಿ ಕರಕುಶಲ ವಸ್ತುಗಳ ತಯಾರಿ ಕುರಿತು ತರಬೇತಿ ನೀಡಲಾಯಿತು. ಪ್ರಬಂಧ ರಚನೆ, ಚಿತ್ರರಚನೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾಮಕ್ಕಳಿಂದ ಗೀತೆಗಳ ಗಾಯನ ನಡೆಯಿತು.

ಕೌಶಲ್ಯತರಬೇತಿಯ ವೇಳೆ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಿತು

ಸ್ಪರ್ಧಾ ವಿಜೇತರು: ವಿದ್ಯಾರ್ಥಿಗಳಿಗಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಎಸ್.ಆರ್.ಮೋಹನ್-ಪ್ರಥಮ, ಎಸ್.ಎಸ್.ಕಾವ್ಯಾ-ದ್ವಿತೀಯ, ಆರ್.ದೀಪಿಕಾ-ತೃತೀಯ, ಚಿತ್ರರಚನೆ ಸ್ಪರ್ಧೆಯಲ್ಲಿ ಎಸ್.ಆರ್.ಮೋಹನ್-ಪ್ರಥಮ, ಎಸ್.ಎ.ವಿಕ್ರಂ-ದ್ವಿತೀಯ, ಎಸ್.ಪಿ.ಧನುಶ್‌ಗೌಡ-ತೃತೀಯ, ಕರಕುಶಲವಸ್ತುಗಳ ತಯಾರಿ ಸ್ಪರ್ಧೆಯಲ್ಲಿ ಎಸ್.ಎಂ.ನಂದಿನಿ-ಪ್ರಥಮ, ಆರ್.ದೀಪಿಕಾ-ದ್ವಿತೀಯ, ಎಸ್.ಎನ್.ಅನುಷಾ-ತೃತೀಯ ಬಹುಮಾನ ಪಡೆದುಕೊಂಡರು.

ಎಸ್‌ಡಿಎಂಸಿ ಅಧ್ಯಕ್ಷ ಶಂಕರಪ್ಪ, ಉಪಾಧ್ಯಕ್ಷ ಜಗದೀಶ್, ನಾರಾಯಣಸ್ವಾಮಿ, ಸದಸ್ಯೆ ನರಸಮ್ಮ, ಮಾಜಿ ಸದಸ್ಯ ಬಚ್ಚೇಗೌಡ, ಗ್ರಾಮಪಂಚಾಯಿತಿ ಸದಸ್ಯ ಶಿವಶಂಕರಪ್ಪ, ಎಂ.ನಾಗರಾಜು, ಮಾಜಿ ಸದಸ್ಯೆ ಎನ್.ಅಶ್ವತ್ಥಪ್ಪ, ಮಾಜಿ ಸದಸ್ಯೆ ಭಾಗ್ಯಮ್ಮ ಅರುಣ್‌ಕುಮಾರ್, ಚಿಕ್ಕಮುನಿವೆಂಕಟಶೆಟ್ಟಿ, ಎನ್‌ಎಸ್‌ಎಸ್ ಸ್ವಯಂಸೇವಕ ಸಿ.ಪವನ್, ಎಸ್.ಎಂ.ಪವನ್, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಬಿ.ನಾಗರಾಜು, ಎ.ಬಿ.ನಾಗರಾಜ, ಎಂ.ವೈ.ಲಕ್ಷ್ಮಯ್ಯ ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!