Bodaguru, Sidlaghatta : ದೇಶದ ಪ್ರಜಾಪ್ರಭುತ್ವದ ನೆಲಗಟ್ಟು ಬಲಗೊಳಿಸಲು ಪ್ರತಿಯೊಬ್ಬರು ಮತದಾನ ಮಾಡಬೇಕು. ಈ ಬಾರಿಯ ಚುನಾವಣೆಯಲ್ಲಿ ಹದಿಹರೆಯದ ಉತ್ಸಾಹಿ ಮನಸ್ಸಿನ ಹದಿನಾಲ್ಕು ಕೋಟಿ ಕಿರಿಯರು ನಮ್ಮೊಡನೆ ಮತದಾರರಾಗಿ ಕೈ ಜೋಡಿಸುತ್ತಿದ್ದಾರೆ. ಇವರು ನೀಡುವ ಒಂದೊಂದು ಮತಕ್ಕೂ ದೇಶದ ಭವಿಷ್ಯ ನಿರ್ಣಯಿಸುವ ಶಕ್ತಿಯಿದೆ. ಈ ಶಕ್ತಿ ಬಲಗೊಳ್ಳಲು ಮತದಾರರನ್ನು ಮತಗಟ್ಟೆಗೆ ಸೆಳೆಯಲು ತಾಲ್ಲೂಕಿನ ಬೋದಗೂರು ಸರ್ಕಾರಿ ಶಾಲೆಯನ್ನು ಆನೂರು ಗ್ರಾಮ ಪಂಚಾಯತಿ ವಿಶೇಷ ಮಾದರಿಯ ಮತದಾನ ಕೇಂದ್ರವನ್ನಾಗಿ ರೂಪಿಸಿದೆ.
ವಿಧಾನಸಭಾ ಚುನಾವಣೆಗೆ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಸ್ವ ಇಚ್ಛೆಯಿಂದ ತಮ್ಮದೇಯಾದ ವಿಶೇಷ ಆಸಕ್ತಿ ತೋರಿ ಆನೂರು ಗ್ರಾಮ ಪಂಚಾಯಿತಿಯ ಬೋದಗೂರು ಸರ್ಕಾರಿ ಶಾಲೆಯನ್ನು ಸುಣ್ಣ ಬಣ್ಣಗಳಿಂದ ಅಲಂಕರಿಸಿ, ಭೋಗನಂದೀಶ್ವರ ದೇವಸ್ಥಾನ, ಆದಿಯೋಗಿ, ವಿವಿಧ ಜನಪದ ಕಲೆಗಳು ಮುಂತಾದ ಚಿತ್ರಗಳಿಂದ ಸುಂದರವಾಗಿ ಸಿಂಗರಿಸಲಾಗಿದೆ. ಈ ಕೆಲಸಕ್ಕೆ ಸ್ಥಳಿಯ ಪೇಂಟರ್ ವಿಜಯ್ ಗೋಡೆಗಳ ಮೇಲೆ ಮತದಾನದ ಜಾಗೃತಿ ಮೂಡಿಸುವಂತ ಆಕರ್ಷಕ ಬರವಣಿಗೆ ಮಾಡಿದ್ದಾರೆ.
ಮತದಾನ ಕೇಂದ್ರ ಮತದಾರರನ್ನು ಆಕರ್ಷಣೆ ಮಾಡಬೇಕು ಎಂದು ಜಿಲ್ಲಾ ಪಂಚಾಯತಿ ಸಿಇಒ ಪ್ರಕಾಶ್ ಜಿ.ನಿಟ್ಟಳ್ಳಿ ಮತ್ತು ಎಪಿಒ ಡಾ.ಮೈತ್ರೇಯಿ ತಿಳಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ವಿಶ್ವಾಸ್, ಅರುಣಾ ಸುರೇಶ್, ಊರಿನ ಹಿರಿಯರಾದ ಪ್ರಭಾಕರ್ ಸಂಪೂರ್ಣ ಸಹಕಾರ ನೀಡಿದರು. ಜಿಲ್ಲೆಯ ಜನಪದ, ಸಂಸ್ಕೃತಿ, ಪ್ರವಾಸಿ ತಾಣಗಳು, ಸ್ಥಳೀಯ ಸೊಗಡನ್ನು ಪ್ರತಿನಿಧಿಸುವ ಚಿತ್ರಗಳನ್ನು ವಿಜಯ್ ಮೂಲಕ ಮಾಡಿಸಿ, ಮತಗಟ್ಟೆಯನ್ನು ವಿಶೇಷವಾಗಿ ರೂಪಿಸಿದ್ದೇವೆ.
-ಕಾತ್ಯಾಯಿನಿ, ಪಿಡಿಒ, ಆನೂರು ಗ್ರಾಮ ಪಂಚಾಯಿತಿ
Anur Gram Panchayat Promotes Voting Awareness
Bodaguru, Sidlaghatta : It is important for every citizen to exercise their right to vote in order to strengthen the democratic foundation of the country. The upcoming election is seeing a surge of enthusiastic young voters, with 140 million teenagers joining the electoral roll. Each vote holds immense power in shaping the future of the nation. In a bid to encourage voter turnout, Anur Gram Panchayat has designated Bodhagur Government School in the taluk as a special polling station.
To raise awareness about the upcoming Assembly elections, volunteers in Anur Gram Panchayat have taken it upon themselves to beautify the Bodaguru Government School. The school has been adorned with vibrant lime colors, depictions of Bhoganandishwara temple, Adiyogi, and various folk art. A local painter named Vijay has contributed attractive murals to create awareness about the importance of voting. It is hoped that these efforts will motivate more citizens to exercise their right to vote and play an active role in shaping the future of the country.