23.1 C
Sidlaghatta
Sunday, December 22, 2024

ಹಿಂದೆ 30 ಕೋಟಿ ಬೇಡವೆಂದಿದ್ದ ಶಾಸಕರು ಈಗ ಎಷ್ಟು ಹಣಕ್ಕೆ ಮಾರಿಕೊಂಡರೋ – ಆಂಜಿನಪ್ಪ (ಪುಟ್ಟು)

Former Congress Aspirant Anjinappa Puttu Denounces Seat Sale and Files as Independent Candidate

- Advertisement -
- Advertisement -

Sidlaghatta : ಇಂದಿರಾ ಕಾಂಗ್ರೆಸ್ ಇನ್ನೂ ಇದೆ ಎಂದು ನಂಬಿದ್ದೆ. ಜನಸೇವೆ ಮಾಡುವ ಕಾಂಗ್ರೆಸ್ ಈಗಲೂ ಉಳಿದಿದೆ ಎಂದು ಭಾವಿಸಿದ್ದೆ. ಆದರೆ ಇದು ವ್ಯಾಪಾರಸ್ಥರ ಕಾಲ. ಕಳೆದ ಆರು ತಿಂಗಳ ಹಿಂದೆ ರಾಜೀವ್ ಗೌಡ ಆಮಿಷ ಒಡ್ಡಿದ 30 ಕೋಟಿ ಹಣ ಬೇಡವೆಂದಿದ್ದ ಶಾಸಕರು ಈಗ ಎಷ್ಟು ಹಣಕ್ಕೆ ಮಾರಿಕೊಂಡರೋ. ವ್ಯಾಪಾರಿಗಳಿಂದ ಹಣ ಪಡೆದು ಬಿ ಫಾರಂ ಕೊಡಿಸಲು ಸಫಲರಾಗಿರಬಹುದು. ಆದರೆ ಶಿಡ್ಲಘಟ್ಟ ಜನತೆಯ ಸ್ವಾಭಿಮಾನವನ್ನು ಕೊಳ್ಳಲು ಸಾಧ್ಯವಿಲ್ಲ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ರಾಜೀವ್ ಗೌಡ ಮತ್ತು ಪುಟ್ಟಾಂಜಿನಪ್ಪ ನಡುವೆ ಕಗ್ಗಂಟಾಗಿದ್ದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿ ಫಾರಂ ಬುಧವಾರ ಮಧ್ಯರಾತ್ರಿ ಪ್ರಕಟವಾಯಿತು. ನಾಮಪತ್ರ ಸಲ್ಲಿಸಲು ಗುರುವಾರ ಕಡೆಯ ದಿನವಾಗಿದ್ದು, ಕಾಂಗ್ರೆಸ್ ಬಿ ಫಾರಂ ಸಿಗದ ಪುಟ್ಟಾಂಜಿನಪ್ಪ, ರಾಜೀವ್ ಗೌಡ ಮತ್ತು ಅವರ ಬೆಂಬಲವಾಗಿ ನಿಂತ ಶಾಸಕ ವಿ.ಮುನಿಯಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಸಾವಿರಾರು ಸಂಖ್ಯೆಯ ಜನರೊಂದಿಗೆ ಟಿ.ಬಿ.ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಪುಟ್ಟಾಂಜಿನಪ್ಪ, ಅಲ್ಲಲ್ಲಿ ವೃತ್ತಗಳಲ್ಲಿ ನಿಂತು ಮಾತನಾಡಿದರು.

“30 ಕೋಟಿಗೆ ಶಿಡ್ಲಘಟ್ಟದ ಕಾಂಗ್ರೆಸ್ ಸೀಟ್ ವ್ಯಾಪಾರ ನಡೆಯುತ್ತಿದ್ದುದು ಮಾಧ್ಯಮಗಳ ಮೂಲಕ ಜನರಿಗೆ ತಿಳಿದಿದೆ. ನಾನು ವ್ಯಾಪಾರ ಬಂದವನಲ್ಲ. ಸೇವೆ ಮಾಡಲು ಬಂದವನು.

“ಸ್ವಾಭಿಮಾನಿ ಶಿಡ್ಲಘಟ್ಟದ ಜನರ ಮುಂದೆ ಸ್ವತಂತ್ರವಾಗಿ ಪಕ್ಷೇತ್ರ ಅಭ್ಯರ್ಥಿಯಾಗಿ ನಿಂತಿದ್ದೇನೆ. ನನ್ನ ಚಿಹ್ನೆ ಶಿಡ್ಲಘಟ್ಟ ಜನತೆಯ ತಾಯಂದಿರ ಪ್ರೀತಿ, ಆಶೀರ್ವಾದ, ಸ್ವಾಭಿಮಾನವಾಗಿದೆ. ವ್ಯಾಪಾರಿಗೆ ನಮ್ಮ ಜನ ಮತ ಕೊಡೋದಿಲ್ಲ. ನನ್ನನ್ನು ಒಮ್ಮೆ ಸೋಲಿಸಿದರೂ ಓಡೋಗಲಿಲ್ಲ. ಈಗ ಬಂದಿರುವ ವ್ಯಾಪಾರಿ ಸೋತು ಓಡಿಹೋಗುತ್ತಾನೆ” ಎಂದರು.

“ಈ ಸಮಾಜ ಸೇವಕರು ಯಾರಾದ್ರೂ ಶಿಡ್ಲಘಟ್ಟ ತಾಲ್ಲೂಕಿನ ರೈತರು ಬೆಳೆದ ತರಕಾರಿ ಕೊಂಡಿರುವರೇನ್ರೀ. ಚುನಾವಣೆ ಬಂದಾಗ ಮಾಡುವುದಾ ರಾಜಕಾರಣ ಅಂದರೆ. ನೀವು ಕೈಕಾಲು ಮುಗಿದಿರೋದು ಪಕ್ಷದ ವರಿಷ್ಠರಿಗೆ ನಾನು ಮುಗಿದಿರೋದು ನನ್ನ ತಾಯಂದಿರಿಗೆ, ನನ್ನ ಜನರಿಗೆ. ನಮ್ಮ ಸ್ವಾಭಿಮಾನಿ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ಬಿ ಫಾರಂ ವ್ಯಾಪಾರಸ್ಥನಿಗೆ, ಓಟು ಪುಟ್ಟಾಂಜಿನಪ್ಪನಿಗೆ” ಎಂದು ಹೇಳಿದರು.

“ಕೊರೊನಾ ನನಗೆ ಬಂದರೂ ಸಹ ಕ್ಷೇತ್ರದ ಪ್ರತಿ ಮನೆಗೂ ಮಾಸ್ಕು, ಸೋಪು, ಆಹಾರದ ಕಿಟ್ ತಲುಪಿಸಿದ್ದೇನೆ. ಸರ್ಕಾರಿ ಆಸ್ಪತ್ರೆಗೆ ಔಷಧಿಗಳನ್ನು, ಆಕ್ಸಿಜನ್ ಸಿಲಿಂಡರುಗಳನ್ನು ಕೊಡಿಸಿದೆ. ತರಕಾರಿ ಬೆಳೆದು ಇಡೀ ನಾಡಿಗೆ ಕೊಡುವ ಶಿಡ್ಲಘಟ್ಟ ಕ್ಷೇತ್ರದ ಜನರಿಗೆ ಕೋಳಿ ಮಾಂಸ, ಮಟನ್, ತಾಯಂದಿರಿಗೆ ಮೂಗುನತ್ತು, ಹಣ ಕೊಡುವ ಆಮಿಷ ಕೊಡುವ ಸಮಾಜಸೇವಕನಿಗೆ ಜನ ಬುದ್ಧಿ ಕಲಿಸುತ್ತಾರೆ.

“ನೀನು ಹಾಕುವ ರೇಷ್ಮೆ ಬಟ್ಟೆ ನಮ್ಮ ಶಿಡ್ಲಘಟ್ಟ ಜನರು ಕಷ್ಟಪಟ್ಟು ಬೆಳೆದ ರೇಷ್ಮೆಯದ್ದು. ಕಾಂಗ್ರೆಸ್ ನ ಹೋಬಳಿ ಮಟ್ಟದ ಮುಖಂಡರುಗಳಿಗೆ ಐವತ್ತು ಸಾವಿರ, ತಾಲ್ಲೂಕು ಮುಖಂಡನಿಗೆ 25 ಸಾವಿರ, ಬೂತ್ ಮಟ್ಟದ ಮುಖಂಡನಿಗೆ 10 ಸಾವಿರ ಬೆಲೆ ಕಟ್ಟುತ್ತೀಯ. ನಮ್ಮ ಸ್ವಾಭಿಮಾನವನ್ನು ಕೊಂಡುಕೊಳ್ಳುತ್ತೀಯ”

“ನಾನು ಎಂಟು ವರ್ಷಗಳಿಂದ ಶಿಡ್ಲಘಟ್ಟದ ಜನ ಸೇವೆ ಮಾಡಿದ್ದೇನೆ. ನೀನು ಪಕ್ಷದ ವರಿಷ್ಠರ ಸೇವೆ ಮಾಡಿದ್ದೀಯ. ಜನರ ಪ್ರೀತಿ ಗಳಿಸದ ನೀನು ಹೀನಾಯವಾಗಿ ಸೋಲುತ್ತೀಯ. ಕಳೆದ ಬಾರಿ ಚುನಾವಣೆಯಲ್ಲಿ ಸೋತಿದ್ದರೂ ನಾನು ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ಜನರ ಕಷ್ಟಕ್ಕೆ ಸ್ಪಂದಿಸಿದ್ದೇನೆ. ಗೆದ್ದರೆ ಇನ್ನಷ್ಟು ಜನ ಸೇವೆ ಮಾಡುತ್ತೇನೆ. ನೀನು ಸೋತರೆ ಓಡೋಗುತ್ತೀಯ” ಎಂದು ಹೆಸರು ಹೇಳದೇ ರಾಜೀವ್ ಗೌಡ ವಿರುದ್ಧ ವಾಗ್ದಾಳಿ ನಡೆಸಿದರು.


Controversy Surrounding Allocation of B Form for Sidlaghatta Constituency in Karnataka Elections

Sidlaghatta : In the lead up to the 2023 Legislative Assembly elections, there has been controversy surrounding the allocation of the B Form for the Sidlaghatta Assembly Constituency in Karnataka, India. Anjinappa Puttu, a former aspirant for the Congress party ticket, expressed outrage at reports that the seat was being traded for a sum of 30 crores. Despite promises from Congress leaders to award him the ticket, Rajeev Gowda was ultimately given the B Form on the last day of nomination papers.

Puttu, who contested the last election as a non-party candidate and received 10,986 votes, filed his nomination papers as an independent candidate. He marched through the town with thousands of supporters, condemning the sale of the seat and declaring his candidacy as a symbol of love, blessings, and self-respect. He stated that his people would not vote for a merchant and that the self-esteem of the people of Sidlaghatta could not be bought.

Puttu highlighted his eight years of service to the people of Shidlaghatta, stating that he had responded to their difficulties and delivered masks, soap, and food kits to every house in the constituency, as well as providing medicines and oxygen cylinders to the government hospital. He criticized Gowda for being a party-serving leader and argued that if he did not win the love of the people, he would fail miserably.

Puttu’s campaign attracted a large following and he was optimistic about his chances of winning the seat. However, it remains to be seen whether his strong stance against the alleged sale of the B Form will translate into electoral success.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!