21.1 C
Sidlaghatta
Wednesday, October 16, 2024

AMCS App ನಲ್ಲಿ ರೈತರಿಗೆ ಹಾಲಿನ ಪ್ರಮಾಣ, ಗುಣಮಟ್ಟ, ಬೆಲೆಯ ಮಾಹಿತಿ

- Advertisement -
- Advertisement -

Sidlaghatta : ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ AMCS App ಅನುಷ್ಠಾನ ಮಾಡಿದ್ದು ಇದರಲ್ಲಿ ರೈತರಿಗೆ ತಾವು ಪ್ರತಿ ದಿನ ಹಾಕುವ ಹಾಲಿನ ಪ್ರಮಾಣ, ಅದರ ಗುಣಮಟ್ಟದ ಪ್ರಮಾಣ, ಸಿಗುವ ಹಣದ ಪ್ರಮಾಣದ ಮಾಹಿತಿ ಸಿಗಲಿದೆ ಎಂದು ಕೆಎಂಎಫ್ ನಿರ್ದೇಶಕ ಆರ್.ಶ್ರೀನಿವಾಸ್‌ ತಿಳಿಸಿದರು.

ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಡೈರಿಗಳಲ್ಲಿ AMCS ರೈತರ ಆಪ್‌ ನ ತಂತ್ರಾಂಶ ಅಳವಡಿಸಿದ್ದು ರೈತರ ಮೊಬೈಲ್‌ ಗಳಲ್ಲೂ ಆಪ್ ಅಳವಡಿಸಿಕೊಳ್ಳಬಹುದು. ಅದರಲ್ಲಿ ರೈತರು ತಾವು ಹಾಕುವ ಹಾಲಿನ ಪ್ರಮಾಣ, ಗುಣಮಟ್ಟ, ಸಿಗುವ ಬೆಲೆಯ ವಿವರವನ್ನು ಆಯಾ ದಿನವೇ ಸಿಗಲಿದೆ ಎಂದರು.

ಇದರಿಂದ ಹಾಲಿನ ಗುಣಮಟ್ಟಕ್ಕೆ ತಕ್ಕ ಬೆಲೆ ಸಿಗಲಿದೆ. ಎಲ್ಲ ಡೇರಿಗಳಲ್ಲೂ ಈ ತಂತ್ರಾಂಶ ಅಳವಡಿಕೆ ಆಗಬೇಕು. ಆದರೆ ಇನ್ನೂ ಸಾಕಷ್ಟು ಡೈರಿಗಳಲ್ಲಿ ಈ ತಂತ್ರಾಂಶ ಅಳವಡಿಸಿಕೊಳ್ಳುವ ಕೆಲಸ ಮುಂದಿನ ದಿನಗಳಲ್ಲಿ ಆಗಲಿದೆ. ಇದರಿಂದ ಎಲ್ಲ ರೈತರಿಗೆ ಗುಣಮಟ್ಟದ ಆಧಾರದಲ್ಲಿ ಹಾಲಿಗೆ ಬೆಲೆ ಸಿಗಲಿದೆ ಎಂದು ಹೇಳಿದರು.

ಸಹಕಾರ ಸಂಘಗಳ ನಿರ್ದೇಶಕರು ತಮ್ಮ ಸ್ವಾರ್ಥ, ತನ್ನವರು ಎನ್ನುವ ಭಾವನೆ ಬಿಟ್ಟು ಸಹಕಾರ ಸಂಘದ ಏಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುವಂತೆ ಮನವಿ ಮಾಡಿದರು.

ವಿಸ್ತರಣಾಕಾರಿ ವಿ.ಶ್ರೀನಿವಾಸ್ ಅವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿ ಸಭೆಯಲ್ಲಿ ಅನುಮೋದನೆ ಪಡೆದುಕೊಂಡರು. ಎಂ.ಪಿ.ಸಿ.ಎಸ್ ಡೇರಿ ಅಧ್ಯಕ್ಷ ಎಂ.ದೇವರಾಜ್, ಉಪಾಧ್ಯಕ್ಷ ಎಂ.ಕೇಶವರೆಡ್ಡಿ, ನಿರ್ದೇಶಕರಾದ ಕೃಷ್ಣಪ್ಪ, ಬಿ.ಎಲ್.ನಂಜುಂಡಪ್ಪ, ಎಂ.ಆನಂದ್, ಮುನಿರೆಡ್ಡಿ, ಲಿಂಗಪ್ಪ, ಶಶಿಕುಮಾರ್, ಅಶೋಕ್ ಕುಮಾರ್, ವೆಂಕಟೇಶ್, ಗೌರಮ್ಮ, ರಾಧಮ್ಮ, ಬೈರಮ್ಮ, ಡೇರಿಯ ಮುಖ್ಯ ಕಾರ್ಯನಿರ್ವಾಹಕ ವಿ.ಮಂಜುನಾಥ್, ಗ್ರಾ.ಪಂ.ಸದಸ್ಯ ವೆಂಕಟೇಶ್ ಹಾಜರಿದ್ದರು.

For Daily Updates WhatsApp ‘HI’ to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!