ಶಿಡ್ಲಘಟ್ಟ ತಾಲ್ಲೂಕು ಸಮತಾ ಸೈನಿಕದಳ ತಾಲೂಕು ಘಟಕ ಹಾಗೂ ಜೆ.ವೆಂಕಟಾಪುರ ಮಹಿಳಾ ಗ್ರಾಮ ಶಾಖೆ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರ 65 ನೇ ಪರಿನಿರ್ವಾಣ ದಿನದ ಅಂಗವಾಗಿ, ಗ್ರಾಮದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ವಿಧ್ಯಾರ್ಥಿಗಳಿಗೆ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಸಮತಾ ಸೈನಿಕ ದಳ ತಾಲ್ಲೂಕು ಅಧ್ಯಕ್ಷ ಈಧರೆ ಪ್ರಕಾಶ್, ಉಪಾಧ್ಯಕ್ಷ ಮಂಜುನಾಥ್, ಹೋಬಳಿ ಗೌರವಾಧ್ಯಕ್ಷ ವೆಂಕಟರಾಮಪ್ಪ, ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ಜೆ.ವೆಂಕಟಾಪುರ ಗ್ರಾಮ ಶಾಖೆ ಅಧ್ಯಕ್ಷೆ ಲಾವಣ್ಣ, ಖಜಾಂಚಿ ರೇಣುಕಮ್ಮ, ಶಿಕ್ಷಕಿ ದೇವಕಿ ಹಾಜರಿದ್ದರು.
- Advertisement -
- Advertisement -