Laginayakanahalli, Sidlaghatta : ದೇವಸ್ಥಾನಗಳು ಗ್ರಾಮೀಣ ಭಾಗದ ಸಾಂಸ್ಕೃತಿಕ ಕೇಂದ್ರಗಳು. ದೇವಾಲಯಗಳ ಅಭಿವೃದ್ಧಿಯೆಂದರೆ ಗ್ರಾಮದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶ್ರದ್ಧೆಯನ್ನು ಬೆಳೆಸಿದಂತೆ. ಎಲ್ಲರೂ ತಮ್ಮ ಹಳ್ಳಿಗಳಲ್ಲಿನ ದೇವಾಲಯಗಳನ್ನು ಚೆನ್ನಾಗಿಟ್ಟುಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ, ABD Group ಅಧ್ಯಕ್ಷ ರಾಜೀವ್ ಗೌಡ (Rajiv Gowda) ತಿಳಿಸಿದರು.
ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಪಂಚಾಯತಿಯ ಲಗಿನಾಯಕನಹಳ್ಳಿ ಗ್ರಾಮದ ಶ್ರೀರಾಮ ದೇವಸ್ಥಾನದ ಜೀರ್ಣೋದ್ದಾರಕ್ಕೆ (Temple Renovation) ಮೊದಲ ಹಂತವಾಗಿ ಎರಡು ಲಕ್ಷ ರೂಗಳ ದೇಣಿಗೆಯನ್ನು ನೀಡಿ ಅವರು ಮಾತನಾಡಿದರು.
ದೇವಸ್ಥಾನದ ಮುಂದಿನ ಹಂತದ ನಿರ್ಮಾಣಕ್ಕೆಸಹ ಸಹಾಯ ಮಾಡಲಾಗುವುದು. ದೇವಸ್ಥಾನದ ಪ್ರತಿಷ್ಠಾಪನ ಮಹೋತ್ಸವದ ದಿನ ಊಟದ ವ್ಯವಸ್ಥೆ ಎಬಿಡಿ ಗ್ರೂಪ್ ಟ್ರಸ್ಟ್ ವತಿಯಿಂದ ಮಾಡಲಾಗುವುದು ಎಂದು ತಿಳಿಸಿದರು.
ಎ.ಬಿ.ಡಿ ಗ್ರೂಪ್ ವತಿಯಿಂದ ತಾಲ್ಲೂಕಿನ ಆನೂರು ಗ್ರಾಮ ಶ್ರೀ ಸುಂಕುಲಮ್ಮ ದೇವಸ್ಥಾನಕ್ಕೆ ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಿದರು. ಗಾಮದ ವಿಕಲಚೇತನರಿಗೆ ಆರ್ಥಿಕ ನೆರವು ನೀಡಿದರು.
ಜಂಗಮಕೋಟೆ ಹೋಬಳಿಯ ಚೊಕ್ಕೊಂಡಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದ ದೇವರ ಪ್ರಭಾವಳಿಗೆ 84 ಸಾವಿರ ರೂಗಳನ್ನು ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಎರಡನೆ ಸ್ಥಾನ ಪಡೆದಿದ್ದ ಕೀರ್ತನ ಎಂಬ ವಿದ್ಯಾರ್ಥಿನಿಗೆ ಪ್ರೋತ್ಸಾಹಧನ ನೀಡಲಾಯಿತು. ಅದೇ ಗ್ರಾಮದ ಪೃಥ್ವಿರಾಜ್ ರವರ ತಂದೆ ತಾಯಿ ಕೋವಿಡ್ ಸಮಯದಲ್ಲಿ ಮೃತಪಟ್ಟಿದ್ದ ಕಾರಣ, ಆ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನ ನೀಡಲಾಯಿತು.
ತುಮ್ಮನಹಳ್ಳಿ ಪಂಚಾಯತಿಯ ತಿಪ್ಪೇನಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಅಭಿವೃದ್ಧಿಗಾಗಿ 2 ಲಕ್ಷ ರೂ ಗಳನ್ನು ನೀಡಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸುಶೀಲಮ್ಮ ನಾಗರಾಜ್, ಲಕ್ಷ್ಮಿದೇವಮ್ಮ, ಸೊಣ್ಣಪ್ಪ, ಮುನಿಯಪ್ಪ, ಅಶೋಕ, ವೆಂಕಟೇಶ್, ಚೀಮಂಗಲ ನಾರಾಯಣಸ್ವಾಮಿ, ಎಬಿಡಿ ಗ್ರೂಪ್ ಟ್ರಸ್ಟ್ ಸದಸ್ಯರು ಹಾಗೂ ಹಲವು ಮುಖಂಡರು ಹಾಜರಿದ್ದರು.