ಶಿಡ್ಲಘಟ್ಟದ ರೇಷ್ಮೆ ಮಾರುಕಟ್ಟೆಯ ಉಪನಿರ್ದೇಶಕ ಚಂದ್ರು ಅವರು ರೂಪಿಸಿರುವ ಹೊಸ ರೀತಿಯ ಚಂದ್ರಂಕಿಯನ್ನು ರೇಷ್ಮೆ ಸಹಾಯ ನಿರ್ದೇಶಕ ಲಮಾಣಿ, ರೇಷ್ಮೆ ವಿಸ್ತರಣಾಧಿಕಾರಿಗಳಾದ ಚಂದ್ರಪ್ಪ ಮತ್ತು ಬೋಜಣ್ಣ ವೀಕ್ಷಿಸಿದರು. ಹಣ್ಣಾದ ರೇಷ್ಮೆ ಹುಳು ಗೂಡು ಕಟ್ಟಲು ಬಳಸುವ ಚಂದ್ರಂಕಿಯ ರೂಪವನ್ನು ಬದಲಿಸುವುದರ ಮೂಲಕ ಅನೇಕ ಉಪಯೋಗಗಳನ್ನು ಪ್ರಾಯೋಗಿಕವಾಗಿ ಕಂಡುಹಿಡಿಯಲಾಗಿದೆ. ಈ ಸಂಶೋಧನೆಗೆ ಕೇಂದ್ರ ರೇಷ್ಮೆ ಸಂಶೋಧನಾ ಕೇಂದ್ರ ನೀಡುವ ಪ್ರಶಸ್ತಿಯೂ ಲಭಿಸಿದೆ.