Home News ಸದ್ಭಾವನಾ ಶಾಂತಿಯಾತ್ರೆ

ಸದ್ಭಾವನಾ ಶಾಂತಿಯಾತ್ರೆ

0

ಶಿವಲಿಂಗವು ಪರಮಾತ್ಮನ ಚಿಹ್ನೆ. ಮೂರು ವಿಭೂತಿ ಗೆರೆಗಳು ಕರ್ತವ್ಯದ ಸಂಕೇತಗಳಾದರೆ, ಶಿವಲಿಂಗದ ಮೇಲಿನ ಬಿಂದುವು ಪರಮಾತ್ಮನನ್ನು ನಿರಾಕಾರನೆಂದು ಅರ್ಥೈಸುತ್ತದೆ ಎಂದು ಡಾ.ಡಿ.ಟಿ.ಸತ್ಯನಾರಾಯಣರಾವ್ ತಿಳಿಸಿದರು.
18feb1aನಗರದ ಹಳೇ ಅಂಚೆ ಬೀದಿಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿಡ್ಲಘಟ್ಟ ಶಾಖಾ ವತಿಯಿಂದ ಶಿವರಾತ್ರಿ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ದ್ವಾದಶ ಲಿಂಗಗಳೊಂದಿಗೆ ಸದ್ಭಾವನಾ ಶಾಂತಿಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಲಿಂಗವು ನಿರಾಕಾರ ಸರ್ವ ಆತ್ಮರ ತಂದೆಯಾದ ಜ್ಯೋತಿ ಸ್ವರೂಪ ಪರಮಾತ್ಮನ ಸಂಕೇತವಾಗಿದೆ. ನಮ್ಮಲ್ಲಿರುವ ಶತೃಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದೆ ಸತ್ಯ ಜಾಗರಣೆ. ಅದೇ ಶಿವರಾತ್ರಿ ಜಾಗರಣೆ ಎಂದು ಶಿವರಾತ್ರಿಯ ವಿಶೇಷದ ಬಗ್ಗೆ ವಿವರಿಸಿದರು.
ಪಟ್ಟಣದಲ್ಲಿ ಕಳೆದ ಹಲವಾರು ವರ್ಷಗಳಿಂದ ಸ್ಥಾಪನೆಗೊಂಡಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಶಾಂತಿಯೊಂದಿಗೆ ಜ್ಞಾನದ ಜ್ಯೋತಿಯನ್ನು ಬೆಳಗಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಧ್ವಜಾರೋಹಣವನ್ನು ನೆರವೇರಿಸಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸದ್ಭಾವನಾ ಶಾಂತಿಯಾತ್ರೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯ ತಾಲ್ಲೂಕು ಸಂಚಾಲಕಿ ಬಿ.ಕೆ.ಜಯಕ್ಕ, ಮುನಿಲಕ್ಷ್ಮಮ್ಮ, ರಾಮಕೃಷ್ಣಪ್ಪ, ಚಂದ್ರಶೇಖರ್, ಬಸವರಾಜ್, ಪಿಳ್ಳವೆಂಕಟಸ್ವಾಮಿ, ರಾಮಲಕ್ಷ್ಮಿ, ದೇವಿಕಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.