Home News ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ 68ನೇ ಸ್ವಾತಂತ್ರ್ಯ ದಿನಾಚರಣೆ

ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ 68ನೇ ಸ್ವಾತಂತ್ರ್ಯ ದಿನಾಚರಣೆ

0

ಪಟ್ಟಣದ ನೆಹರೂ ಕ್ರೀಡಾಂಗಣದಲ್ಲಿ 68ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಂ. ರಾಜಣ್ಣ ದೇಶಾದ್ಯಂತ ಉದ್ಭವಿಸಿರುವ ಜ್ವಲಂತ ಸಮಸ್ಯೆಗಳ ಪರಿಹಾರ ಕೇವಲ ಯುವಶಕ್ತಿ ವಿದ್ಯಾವಂತರಾದಲ್ಲಿ ಮಾತ್ರ ಸಾದ್ಯ ಎಂದು ಅಭಿಪ್ರಾಯಪಟ್ಟರು.
ದೇಶದಲ್ಲಿ ತುಂಬಿ ತುಳುಕುತ್ತಿರುವ ಭ್ರಷ್ಟಾಚಾರ, ಭಯೋತ್ಪಾದನೆ, ಅರಾಜಕತೆ ಇವುಗಳಿಗೆ ಮೂಲ ಕಾರಣ ಅನಕ್ಷರತೆ, ಬಡತನ ಕಾರಣವಾದ ಮಾತ್ರಕ್ಕೆ ಯುವಜನತೆ ತಪ್ಪು ದಾರಿಯನ್ನಿಡುವ ಮನೋಭಾವವನ್ನು ಮೂಡಿಸಿಳ್ಳಬಾರದು. ಶ್ರಮಪಟ್ಟು ದುಡಿದು ಜೀವನ ನಡೆಸುವ ಮೂಲಕ ಸ್ವಾವಲಂಬಿಗಳಾಗಿ ಬದುಕುವ ರೀತಿಯನ್ನು ಪ್ರಾಥಮಿಕ ಹಂತದಿಂದಲೇ ಮೈಗೂಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬಯಲು ಸೀಮೆ ಪ್ರದೇಶವಾದ ನಮ್ಮ ಎರಡೂ ಜಿಲ್ಲೆಗಳಲ್ಲಿ ಬಹಳಷ್ಟು ನೀರಿನ ಸಮಸ್ಯೆ ಇದ್ದು ಹನಿ,ಹನಿ ನೀರನ್ನು ಒಗ್ಗೂಡಿಸಿ ಬೆಳೆ ಬೆಳೆದು ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಪ್ರಕೃತಿಯೂ ಕೂಡ ಸಹಕರಿಸುತ್ತಿಲ್ಲ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ವಿದ್ಯಾರ್ಥಿ ಜೀವನವನ್ನು ದೇಶದ ಒಳತಿಗಾಗಿ ಶ್ರಮಿಸುವಂತಹ ದೇಶಪ್ರೇಮವನ್ನು ವಿದ್ಯಾರ್ಥಿಗಳಿಗೆ ಶಿಕ್ಷಕರು ಬೋಧಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಾಯಿತು. ಕಾರ್ಯಕ್ರಮದಲ್ಲಿ ಸ್ವಾತಂತ್ರಹೋರಾಟಗಾರರನ್ನು ಹಾಗು ಶಿಕ್ಷಕರನ್ನು ಸನ್ಮಾನಿಸಲಾಯಿತು, ವಿಕಲಚೇತನರಿಗೆ ಟ್ರೈ್ರಿಸೈಕಲ್ ಹಾಗು ವಾಟರ್‌ಬೆಡ್‌ಗಳನ್ನು ಹದಿನೈದು ಜನ ಫಲಾನುಭವಿಗಳಿಗೆ ವಿತರಿಸಲಾಯಿತು.
ತಹಶೀಲ್ದಾರ್ ನಾರಾಯಣ ಸ್ವಾಮಿ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ ಎಸ್ ಎನ್ ರಾಜು, ಪುರಸಭೆ ಅಧಕ್ಷೆ ಮುಸ್ಟರಿ ತನ್ವೀರ್, ಉಪಾಧ್ಯಕ್ಷೆ ಸುಮಿತ್ರ ರಮೇಶ್, ಬಂಕ್ ಮುನಿಯಪ್ಪ, ಸುರೇಂದ್ರಗೌಡ, ರಾಮಚಂದ್ರಪ್ಪ, ಬಿ.ಇ.ಒ ರಘುನಾಥ ರೆಡ್ಡಿ, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀನಿವಾಸಮೂರ್ತಿ, ಎ.ಇ.ಇ ಗಣಪತಿ ಸಾಕರೆ ಮುಂತಾದವರು ಹಾಜರಿದ್ದರು.